ನಮೋ ರಥಯಾತ್ರೆ, ಬೈಕ್ ರ್ಯಾಲಿ
ಮುಂಡರಗಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ನಮೋ ರಥಯಾತ್ರೆಗೆ ಶನಿವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.
ರಥವನ್ನು ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ನಮೋ ಬ್ರಿಗೇಡ್ನ ಸದಸ್ಯರು ಬೈಕ್ ರ್ಯಾಲಿ ನಡೆಸುವ ಮೂಲಕ ಸ್ವಾಗತಿಸಿದರು. ನಂತರ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ಗಣ್ಯರಾದ ಮಂಜುನಾಥ ಅಳವಂಡಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಪಟ್ಟಣದಲ್ಲಿ ರಥಯಾತ್ರೆಗೆ ಚಾಲನೆ ನೀಡಿದರು.
ಕೋಟೆ ಪ್ರಾಥಮಿಕ ಶಾಲೆಯಿಂದ ಹೊರಟ ಮೋದಿ ರಥಯಾತ್ರೆ ಹಾಗೂ ಬೈಕ್ರ್ಯಾಲಿ ಕೋಟೆಭಾಗ, ಜಾಗ್ರತ ವೃತ್ತ, ಬಜಾರ, ಗಾಂಧಿ ವೃತ್ತ, ಹೊಸಬಸ್ ನಿಲ್ದಾಣ, ಕೊಪ್ಪಳ ವೃತ್ತದ ಮೂಲಕ ಬೃಂದಾವನ ವೃತ್ತಕ್ಕೆ ತಲುಪಿತು. ನಂತರ ಸಂಘಟಕರಿಂದ ನರೇಂದ್ರ ಮೋದಿಯವರ ಪರಿಚಯದ ಕುರಿತು ಕಿರುಚಿತ್ರ ಪ್ರಸಾರ ಮಾಡಲಾಯಿತು.
ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರಜನೀಕಾಂತ ದೇಸಾಯಿ, ಎಸ್.ವಿ.ಪಾಟೀಲ, ಮಂಜುನಾಥ ಇಟಗಿ, ಶ್ರೀನಿವಾಸ ಕಟ್ಟೀಮನಿ, ದೇವಪ್ಪ ಇಟಗಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಬಸವರಾಜ ಸಸಿಮಠ, ಬಸವರಾಜ ಬಿಳಿಮಗ್ಗದ, ಬಸವರಾಜ ಮುಂಡವಾಡ, ಮಂಜುನಾಥ ಕಾಗನೂರ, ಶಿವು ನಾಡಗೌಡ್ರ, ಶಂಕರಗೌಡ ಪಾಟೀಲ, ಪ್ರಭು ಅಬ್ಬೀಗೇರಿ, ಸುರೇಶ ಮಾಳೇಕೊಪ್ಪ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

