ಗದಗ

ಸಾಲಮನ್ನಾ ಹಣ ವಿತರಿಸಿ: ಆಗ್ರಹ

Published On :

ನರಗುಂದ: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ರೈತರು ಬರಗಾಲಕ್ಕೆ ಸಿಲುಕಿದ್ದರಿಂದ ರು. 25 ಸಾವಿರ ಸಾಲ ಮನ್ನಾ ಮಾಡಿ ಎರಡು ವರ್ಷ ಗತಿಸಿದರೂ ಕಾಂಗ್ರೆಸ್ ಸರ್ಕಾರ ರೈತರಿಗೆ ಮನ್ನಾ ಹಣ ನೀಡಿಲ್ಲವೆಂದು ತಾಲೂಕು ರೈತ ಹಿತರಕ್ಷಣೆ ಸಮಿತಿ ಅಧ್ಯಕ್ಷ ರಾಚಪ್ಪ ಕೋರಿ ಆರೋಪಿಸಿದರು.
ಅವರು ಈಚೆಗೆ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರೈತ ಸಮುದಾಯ 3-4 ವರ್ಷದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷ ಬಿ.ಟಿ. ಹತ್ತಿ ನಕಲಿ ಬೀಜಗಳಿಂದ ತಾಲೂಕಿನ ರೈತ ಸಮುದಾಯ ಕೋಟ್ಯಂತರ ರುಪಾಯಿ ನಷ್ಟ ಹೊಂದಬೇಕಾಗಿದೆ. ಈ ಬಗ್ಗೆ ರೈತರು ಮಹಿಕೊ ಕಂಪನಿಯಿಂದ ಕನಕ ನಕಲಿ ಬೀಜ ವಿತರಿಸಿದ ಕಂಪನಿಯಿಂದ ಪ್ರತಿ ಎಕರಿಗೆ ರು. 20 ಸಾವಿರ ಪರಿಹಾರ ಕೊಡಬೇಕೆಂದು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಕನ್ನಡಪರ ಸಂಘಟನೆಗಳ ಅಧ್ಯಕ್ಷ ಚನ್ನು ನಂದಿ, ಎನ್.ಎಂ. ಮೂಗನೂರ, ಪ್ರಶಾಂತ ಚಿತ್ರಗಾರ, ಇದ್ದರು,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.