ಪತ್ನಿ ಅಧಿಕಾರ ಚಲಾಯಿಸಿದ ಪತಿರಾಯ: ಗ್ರಾಪಂಗೆ ಬೀಗ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 10
ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬದಲಿಗೆ ಪತಿಯೇ ಅಧಿಕಾರ ನಡೆಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆ ಬುಡಮೇಲಾಗಿಸಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮತ್ತು ಪಿಡಿಒ, ಗ್ರಾಪಂ ಸಿಬ್ಬಂದಿ ಕಾರ್ಯ ವೈಖರಿ ಖಂಡಿಸಿ ಲಕಲಕಟ್ಟಿ, ನಾಗೇಂದ್ರಗಡ, ಅಮರಗಟ್ಟಿ, ಕಲ್ಲಿಗನೂರ ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಲಕ್ಕಲಕಟ್ಟಿ ಗ್ರಾಪಂ ಲೆಕ್ಕದಲ್ಲಿ ಅಧ್ಯಕ್ಷೆ ಹೇಮಾವತಿ ರಾಠೋಡ ಹೆಸರಿದೆ. ಆದರೆ, ಪಂಚಾಯ್ತಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳು ಅಧ್ಯಕ್ಷೆ ಪತಿ ಪರಸಪ್ಪ ರಾಠೋಡರ ಉಪಸ್ಥಿತಿಯಲ್ಲೆಯೇ ನಡೆಯಬೇಕು. ಇವರು ಹೇಳಿದ ವ್ಯಕ್ತಿಗಳಿಗೆ ಸರ್ಕಾರದ ಯೋಜನೆ ನೀಡಬೇಕು. ಇದನ್ನು ಪ್ರಶ್ನಿಸಿದರೆ ಅಧ್ಯಕ್ಷೆ ಪತಿ ಧಮಕಿ ಹಾಕುತ್ತಾರೆ. ಇದರಿಂದ ಗ್ರಾಪಂ ವ್ಯಾಪ್ತಿಯ ಜನತೆ ರೋಸಿ ಹೋಗಿರುವ ಜನ ಗ್ರಾಪಂಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಲಂಚ: ಗ್ರಾಪಂ ಅಧ್ಯಕ್ಷೆ ಪತಿಯ ಧೋರಣೆ ಕುರಿತು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೆ ಪಿಡಿಒ ಮತ್ತು ಕೆಲ ಸಿಬ್ಬಂದಿ ಕೂಡ ಪರಸಪ್ಪ ರಾಠೋಡ ಹೇಳಿದಂತೆ ಕೇಳಿದರೆ ನಿಮ್ಮ ಕೆಲಸ ಆಗುತ್ತೆ ಎನ್ನುವ ಉತ್ತರ ನೀಡುತ್ತಾರೆ. ಇದರಿಂದ ಮುಕ್ತಿ ಪಡೆಯುವುದು ಯಾವಾಗ ಎನ್ನುವ ಚಿಂತೆ ಕಾಡತೊಡಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸದಸ್ಯತ್ವ ರದ್ದು ಮಾಡಿ: ಪಂಚಾಯಿತಿ ನಿಯಮಾವಳಿ ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿರುವ ಗ್ರಾಪಂ ಅಧ್ಯಕ್ಷೆ ಸೇರಿದಂತೆ ಎಲ್ಲ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ, ರೈತರ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಎಂ.ಬಿ. ತೋರಗಲ್ ಬೆಂಬಲ ವ್ಯಕ್ತಪಡಿಸಿದರು. ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪಂಚಾಯಿತಿ ಅಧಿಕಾರಿ ಸಂಗಪ್ಪ ವ್ಯಾಪಾರಿ ಮಧ್ಯೆ ಪ್ರವೇಶಿಸಿ, ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಪಿಡಿಒ ಕಾರ್ಯನಿಮಿತ್ತ ಬೇರೆಡೆ ಹೋಗಿದ್ದಾರೆ. ಎರಡು ದಿನದ ಕಾಲಾವಕಾಶ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು. ಶಂಕ್ರಪ್ಪ ಪೂಜಾರ, ಪಡಿಯಪ್ಪ ಪೂಜಾರ, ಶ್ಯಾಮಸುಂದರ ಪಾಟೀಲ, ಸಿದ್ದಪ್ಪ ತೋಟಗಂಟಿ, ಫಕೀರಪ್ಪ ಪೂಜಾರ, ಲಕ್ಷ್ಮಪ್ಪ ಬೆನಕನವಾರಿ, ಬಿ.ಎಸ್. ಕೊಪ್ಪದ, ವೀರಪ್ಪ ಗೌಡ್ರ, ಶರಣಪ್ಪ ಕಮ್ಮಾರ, ಮರಿತಿಮ್ಮಪ್ಪ ಕರಡಿ, ಶಿವಪ್ಪ ದಿಂಡೂರ, ಕಲ್ಲಯ್ಯ ಮಠದ, ಹುಚ್ಚಪ್ಪ ಕೊಚಲಾಪುರ, ಶರಣಪ್ಪ ನಾಯ್ಕರ, ಸೋಮಪ್ಪ ಹದ್ದಣ್ಣವರ, ಭೀಮಪ್ಪ ಹದ್ದಣ್ಣವರ, ಹನಮಪ್ಪ ಮುದೇನೂರ, ಮುತ್ತಪ್ಪ ಹಂಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

