ಗದಗ

ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದ ನೈತಿಕ ಅಧಃಪತನ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 10
ಧರ್ಮವನ್ನು ವಿರೋಧಿಸುವ ಮೂಲಕ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ಪರಿಣಾಮವಾಗಿ ದೇಶದಲ್ಲಿಂದು ನೈತಿಕ ಅಧಃಪತನಗೊಳ್ಳುತ್ತಿದೆ ಎಂದು ಬೆಂಗಳೂರಿನ ಯೂತ್ವಿಂಗ್ನ ರಾಜ್ಯ ಸಂಯೋಜಕ ಮೌಲಾನಾ ಅಝ್ಝರುಲ್ಲಾ ಕಾಸ್ಮಿ ವಿಷಾದ ವ್ಯಕ್ತಪಡಿಸಿದರು.
ಭಾನುವಾರ ಗದುಗಿನ ಉರ್ದು ಸೆಂಟ್ರಲ್ ಹೈಸ್ಕೂಲ್ ಪ್ರಾಂಗಣದಲ್ಲಿ ಗದಗ ಜಿಲ್ಲಾ ಯೂತ್ವಿಂಗ್ 'ನಿನ್ನ ಯೌವನ ನಿಷ್ಕಳಂಕವಾಗಿರಲಿ' ಯುವ ಜನಾಂಗ ಜಾಗೃತಿಗಾಗಿ ಏರ್ಪಡಿಸಿದ್ದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತದಲ್ಲಿ ಅಪರಾಧಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾಧ್ಯಮ ಮತ್ತು ಇಂಟರ್ನೆಟ್ ಮೂಲಕ ಅಶ್ಲೀಲತೆ ವ್ಯಾಪಕವಾಗುತ್ತಿದೆ. ಅಶ್ಲೀಲ ಸಾಹಿತ್ಯಕ್ಕಾಗಿ ಪ್ರತಿ ಸೆಕೆಂಡಿಗೆ 3 ಸಾವಿರ ಡಾಲರ್ಗಿಂತಲೂ ಹೆಚ್ಚು ಖರ್ಚಾಗುತ್ತಿದೆ. ಇಂಟರ್ನೆಟ್ ಬಳಸುವವರಲ್ಲಿ ಪ್ರತಿ ಸೆಕೆಂಡಿಗೆ 28 ಸಾವಿರಕ್ಕಿಂತಲೂ ಅಧಿಕ ಮಂದಿ ಅಶ್ಲೀಲ ಸೈಟುಗಳಿಗೆ ಹೋಗುತ್ತಾರೆ. ಶೇ. 12ರಷ್ಟು ವೆಬ್ಸೈಟ್ಗಳು ಅಶ್ಲೀಲ ವಿಷಯಗಳನ್ನು ಒಳಗೊಂಡಿವೆ. ಅವುಗಳ ವಾರ್ಷಿಕ ಲಾಭ 13 ಮಿಲಿಯ ಡಾಲರ್ಗಳಾಗಿವೆ.
ಮುಂಬೈಯಲ್ಲಿ ಇತ್ತೀಚೆಗೆ ನಡೆದ ಮಾನಭಂಗ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವಕರು ಅಶ್ಲೀಲ ವೆಬ್ಸೈಟ್ಗಳನ್ನು ನೋಡುವ ಅಭ್ಯಾಸ ಹೊಂದಿದ್ದರು ಎಂದು ತಿಳಿದು ಬಂದಿದೆ. ಹೀಗೆ ನಮ್ಮ ಯುವ ಜನಾಂಗ ಇಂಟರ್ನೆಟ್, ಸಾಮಾಜಿಕ ಜಾಲಕ್ಕೆ ಸಿಲುಕಿ ಜ್ಞಾನದ ಹೆಸರಿನಲ್ಲಿ ಅಜ್ಞಾನಿಗಳಾಗುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಅಶ್ಲೀಲ-ಅಧರ್ಮವನ್ನು ಅನುಸರಿಸುತ್ತಿದ್ದಾರೆ ಎಂದರು.
ಇಸ್ಮಾಯಿಲ್ ತರಫದಾರ ಹಾಗೂ ರಿಯಾಜ್ ಇಟಗಿ ಯುವ ಜನಾಂಗವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಪಾಲಕ ಪೋಷಕರು, ಧರ್ಮ ಗುರುಗಳು ಏನು ಮಾಡಲು ಸಾಧ್ಯವಿದೆ. ಯುವ ಜನಾಂಗವನ್ನು ಒಳಿತಿನೆಡೆಗೆ ಮುನ್ನಡೆಸಲು ಸಾಧ್ಯವಿರುವ ಮಾರ್ಗೋಪಾಯಗಳನ್ನು ವಿವರಿಸಿದರು.
ಸಲೀಂ ರಗಟಿ, ಅಕ್ಬರ್ ಅಲಿ ಬಬರ್ಚಿ, ರಿಯಾಜ್ ಅಹ್ಮದ್, ಜುನೇದ ಉಮಚಗಿ, ನಾಶೀರ್ ನರೇಗಲ್, ಅಬ್ದುಲ್ ಲಫೀಪ್ ಶೇಖ್, ರಫೀಕ್ ಅಬ್ಬಿಗೇರಿ, ರಾಜಾಖಾನ್ ಪಠಾಣ್, ರಿಜ್ವಾನ ಮುಂತಾದವರಿದ್ದರು. ಮುಜೇಬ್ವುರ್ ರೆಹಮಾನ ಪ್ರಾರ್ಥಿಸಿದರು.
ಯೂತ್ ವಿಂಗ್ನ ಜಿಲ್ಲಾ ಸಂಯೋಜಕ ಆರ್.ಎಫ್. ಕಲ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲೀಮ್ ನಿರೂಪಿಸಿದರು. ಮಹ್ಮದ್ ತೌಶಿಫ್ ಶಿರಹಟ್ಟಿ ವಂದಿಸಿದರು. ಪದಾಧಿಕಾರಿಗಳು ಸದಸ್ಯರು ಸೇರಿದಂತೆ 20ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.