ವಚನದಿಂದ ಕಂದಾಚಾರ ತೊಲಗಿಸಲು ಸಾಧ್ಯ
ಗಜೇಂದ್ರಗಡ: ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಕಂದಾಚಾರ ತೊಲಗಿಸಿ ಸ್ವಾಸ್ಥ್ಯ ಸಮಾಜಕ್ಕೆ ಭಾಷ್ಯ ಬರೆದ ವಿಶ್ವಗುರು ಬಸವಣ್ಣನವರ ಸಾಮಾಜಿಕ ಕಳಕಳಿ ವಿಶ್ವಕ್ಕೆ ಮಾದರಿ ಎಂದು ಪ್ರೊ. ಬಿ.ಕೆ. ಮಾದಿ ಹೇಳಿದರು.
ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಎಸ್.ಎಂ. ಭೂಮರೆಡ್ಡಿ ಪದವಿ ಮಹಾವಿದ್ಯಾಲಯ ವತಿಯಿಂದ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಶರಣರು ಕಾಯಕ ಸಿದ್ಧಾಂತದ ಮೇಲೆ ಮೌಲ್ಯಾಧಾರಿತ ಸಂಸ್ಕೃತಿಯನ್ನು ರೂಪಿಸಿ, ಬೇಡುವಾತನೆಂದೂ ಭಕ್ತನಲ್ಲ. ಕಾಯಕ ಲಿಂಗ ಪೂಜೆಗಿಂತ, ಗುರುದರ್ಶನಕ್ಕಿಂತ, ಜಂಗಮದಾಸೋಹಕ್ಕಿಂತಲೂ ಶ್ರೇಷ್ಠವಾದದ್ದು ಎಂಬುವುದನ್ನು ಆಯ್ದಕ್ಕಿ ಮಾರಯ್ಯನ ವಚನದ ಮೂಲಕ ನಿರೂಪಿದ್ದಾರೆ. ಕಾಯಕದಿಂದ ಬಂದ ಯಾವುದೇ ಪ್ರತಿಫಲವನ್ನು ಗುಡಿ ಗುಂಡಾರಕ್ಕೆ ವಿನಿಯೋಗಿಸದೇ ಸಕಲ ಜೀವಕೋಟಿಯ ಚೈತನ್ಯಕ್ಕೆ ವಿನಿಯೋಗಿಸಬೇಕು ಎಂದು ಸಾರಿದ ವಿಶ್ವಜ್ಯೋತಿ ಬಸವಣ್ಣನವರ ತತ್ವಾದರ್ಶಗಳು ಸರ್ವಕಾಲಿಕ. ಈ ನಿಟ್ಟಿನಲ್ಲಿ ಯುವಕರು ಬಸವಣ್ಣನವರ ಆದರ್ಶಗಳನ್ನು ರೂಢಿಸಿಕೊಂಡಾಗ ಬದುಕು ಸಾರ್ಥಕಗೊಳ್ಳಲಿದೆ ಎಂದರು.
ಎನ್ಎಸ್ಎಸ್ ಯೋಜನಾಧಿಕಾರಿ ಎಲ್.ಕೆ. ಹಿರೇಮಠ ಮಾತನಾಡಿದರು. ಕೆ.ಸಿ. ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಚ್.ಎನ್. ಗೌಡರ, ಯು.ಎಸ್. ಮಲ್ಲಾಪುರ, ಪಿ.ಎಚ್. ಮ್ಯಾಗೇರಿ, ಶರಣಪ್ಪ ಬೆನಕನವಾರಿ, ಬಿ.ಎಸ್. ಕೊಪ್ಪದ, ಎಸ್.ಬಿ.ಅಡೂರ, ಎಸ್.ಬಿ. ಹಿರೇಮಠ, ಹೇಮಂತ ಬಡಿಗೇರ, ಎಸ್.ವೈ. ಅವಧೂತ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

