ಗದಗ

ಇಂದು ಮಹಾದೇವಮ್ಮ ಅನುಷ್ಠಾನ ಮಹಾಮಂಗಲ

Published On :

ಕನ್ನಡಪ್ರಭ ವಾರ್ತೆ, ರೋಣ, ಫೆ. 11
ಲೋಕ ಕಲ್ಯಾಣಾರ್ಥವಾಗಿ ತಾಲೂಕಿನ ಬೆನಹಾಳ ಗ್ರಾಮದ ಹೊರ ವಲಯದಲ್ಲಿ ಅಣ್ಣಪ್ಪ ಜಂಗಮ್ಮನವರ ಹೊಲದಲ್ಲಿ ಜ. 16ರಂದು ಸಿದ್ದಿ ಸಮಾಧಿ ಯೋಗದ ಮೂಲಕ ಅನುಷ್ಠಾನಕ್ಕೆ ಕುಳಿತ ಮಾತೋಶ್ರೀ ಮಹಾದೇವಮ್ಮನವರ ಅನುಷ್ಠಾನ (28 ದಿನಗಳ)ವು ಫೆ. 12ರಂದು ಮಧ್ಯಾಹ್ನ 12ಕ್ಕೆ ಮಂಗಲಗೊಳ್ಳಲಿದೆ. ಅನುಷ್ಠಾನ ಮಹಾಮಂಗಲ ನಿಮಿತ್ತ ಜಡೆಬಸವಲಿಂಗ ಸ್ವಾಮೀಜಿಗಳಿಗೆ ಮತ್ತು ಮಾತೋಶ್ರೀ ಮಹಾದೇವಮ್ಮನವರಿಗೆ ತುಲಾಭಾರ ಕಾರ್ಯಕ್ರಮ ಜರುಗಲಿದೆ.
ಮಹಿಳೆಯರಿಂದ ಕಳಸ, ಕುಂಭ ಮೇಳ ನಡೆಯುವುದು. ಸಂಜೆ ಜರುಗುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಹಾರಾಷ್ಟ್ರದ ಕೇಸರ ಜವಳಗದ ಜಡೆ ಬಸವಲಿಂಗ ಸ್ವಾಮೀಜಿ, ಅಧ್ಯಕ್ಷತೆಯನ್ನು ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಸ್ವಾಮೀಜಿ, ನೇತೃತ್ವವನ್ನು ದೇವದುರ್ಗದ ಕಪಿಲ ಸಿದ್ಧರಾಮ ಶಿವಚಾರ್ಯ ಸ್ವಾಮೀಜಿ ವಹಿಸುವರು. ಹುನಸಿಘಟ್ಟದ ಗುರುಮೂರ್ತಿ ಶಿವಚಾರ್ಯ ಸ್ವಾಮೀಜಿಗಳಿಂದ ಉಪದೇಶ ಕಾರ್ಯಕ್ರಮ ಜರುಗಲಿದೆ.
ಚಳಗೇರಿ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಅತ್ತಿಗೂಡೂರದ ಗಿರಿಮಲ್ಲೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಚ್ಚರೇಶ್ವರ ಮಠದ ಯಚ್ಚರೇಶ್ವರ ಸ್ವಾಮೀಜಿ, ಕಲಕೇರಿ ವೀರಯ್ಯಜ್ಜನವರು, ಬಾಗಲಕೋಟಿ ಸಂಸದ ಪಿ.ಸಿ. ಗದ್ದಿಗೌಡ್ರ, ಶಾಸಕರಾದ ಜಿ.ಎಸ್.ಪಾಟೀಲ, ಬಿ.ಆರ್. ಯಾವಗಲ್, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಜಿಪಂ ಸದಸ್ಯೆ ಶಕುಂತಲಾ ಗಾಣಿಗೇರ, ಎನ್.ಎಸ್. ಕೆಂಗಾರ, ದಶರಥ ಗಾಣಿಗೇರ, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ಪಾಟೀಲ, ತಾಪಂ ಸದಸ್ಯ ಬಸನಗೌಡ ಶಿರಗುಂಪಿ ಮುಂತಾದವರು ಉಪಸ್ಥಿತರಿರುವರು ಎಂದು ರಾಮಲಿಂಗೇಶ್ವರ ಭಜನಾ ಮಂಡಳಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.