ಗದಗ

ಗ್ರಾಪಂ ಅಧ್ಯಕ್ಷೆಯಾಗಿ ಕಸ್ತೂರೆವ್ವ ಆಯ್ಕೆ

Published On :

ಗದಗ: ತಾಲೂಕಿನ ಕೋಟುಮಚಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಕಸ್ತೂರಿಬಾಯಿ ನೀರಲಗಿ ಅವರು ಅವಿರೋಧವಾಗಿ ಆಯ್ಕೆಯಾದರು.
ಈಚೆಗೆ ಸುಮಂಗಲಾ ಜಗ್ಗಲ ಅವರ ರಾಜಿನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಾಮಾನ್ಯ ಮಹಿಳೆ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಸ್ತೂರಿಬಾಯಿ ನೀರಲಗಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅಧ್ಯಕ್ಷರನ್ನಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಚುನಾವಣಾಧಿಕಾರಿ ಬಿ.ರೇವಣ್ಣ ಘೋಷಿಸಿದರು. ಗ್ರಾಪಂ ಪಿಡಿಒ ಚಂದುಸ್ವಾಮಿ ದೊಡ್ಡಮನಿ, ಆರ್.ಎನ್. ಸಂಕನಗೌಡ್ರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಸದಸ್ಯ ಸುಮಂಗಲಾ ಜಗ್ಗಲ, ದೇವಪ್ಪ ಬಡಿಗೇರ, ಪಾಲಾಕ್ಷಯ್ಯ ಬಳಿಗೇರಮಠ, ಅಶೋಕ ಮೇಗೇರಿ, ಮಲ್ಲಿಕಾರ್ಜುನ ಕಿತ್ತೂರ, ಪ್ರಕಾಶ ಕುಲಕರ್ಣಿ, ಎಂ.ಆರ್. ಬೂದಿಹಾಳ, ಯಲ್ಲಪ್ಪ ಗೆಜ್ಜಿ, ಜೈಬುನಬಿ ಮೀರಾನಾಯ್ಕ, ಶಿವಪುತ್ರವ್ವ ಕಮಾಣಿ, ಗೌರವ್ವ ದೊಡ್ಡಮನಿ, ಬಾಳಪ್ಪ ಮಾಲಿಪಾಟೀಲ, ಮರಿತೆಂಗಮ್ಮ ನವಲಗುಂದ, ಶಾಂತಾ ಹರ್ಲಾಪುರ, ಎಪಿಎಂಸಿ ಸದಸ್ಯ ರಾಮಣ್ಣ ಶಿಂಗ್ಟಾಲಕೇರಿ, ಶ್ರೀಧರ ಕುಲಕರ್ಣಿ, ಮೈಲಾರಪ್ಪ ರಮಾಣಿ, ಅಶೋಕ ಬ್ಯಾಹಟ್ಟಿ, ವೀರಪ್ಪ ತಳವಾರ, ಮುತ್ತಣ್ಣ ನೀರಲಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.