ಗದಗ

ಡಾ. ನಂಜುಂಡಪ್ಪ ವರದಿ ಜಾರಿಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 11
ಉತ್ತರ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿಗಾಗಿ ಡಾ. ನಂಜುಂಡಪ್ಪ ವರದಿ ಆಧಾರದಲ್ಲಿ ರು. 16500 ಕೋಟಿ ಮೀಸಲಿಡಬೇಕು ಎಂದು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಸರ್ಕಾರಕ್ಕೆ ಒತ್ತಾಯಿಸಿದರು.
ಅವರು ಮಂಗಳವಾರ ಶಿವಬಸವ ಜನಕಲ್ಯಾಣ ಸಂಸ್ಥೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಹಲವಾರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಮಹಾತ್ಮ ಗಾಂಧಿ ಸರ್ಕಲ್ನಲ್ಲಿ ಆಯೋಜಿಸಲಾಗಿದ್ದ ಸಾಂಕೇತಿಕ ಧರಣಿ ಉದ್ದೇಶಿಸಿ ಮಾತನಾಡಿದರು.
ಪತ್ರ ಚಳವಳಿ ರೂವಾರಿ ಬಸವಣ್ಣೆಯ್ಯ ಹಿರೇಮಠ ಅವರು ಮಾತನಾಡಿ, ಏಶಿಯಾ ಖಂಡದಲ್ಲಿಯೇ ಪ್ರಥಮಬಾರಿಗೆ ಪ್ರಥಮ ಸಹಕಾರಿ ಸಂಘ ಸ್ಥಾಪನೆ ಮಾಡಿದ ಕೀರ್ತಿ ಗದಗ ಹತ್ತಿರದ ಕಣಗಿನಹಾಳದ ಸಿದ್ದನಗೌಡ್ರ ಪಾಟೀಲರಿಗೆ ಸಲ್ಲುತ್ತದೆ. ಸಹಕಾರಿ ವ್ಯವಸ್ಥೆ ಇನ್ನಷ್ಟು ಬಲಶಾಲಿಯಾಗಲು ಗದಗ ಭಾಗದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಅವಶ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಂತನೆ ಮಾಡಿ ಸಹಕಾರಿ ವಿಶ್ವವಿದ್ಯಾಲಯವನ್ನು ಕಣಗಿನಹಾಳದ ಹತ್ತಿರ ಸಿದ್ದನಗೌಡ ಪಾಟೀಲರ ಹೆಸರಿನಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ ದಾಸರ, ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ನಿಸಾರಅಹ್ಮದ ಖಾಜಿ, ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಪಿ.ಸುಬ್ರಮಣ್ಯಂರೆಡ್ಡಿ ಮುಂತಾದವರು ಮಾತನಾಡಿದರು. ಪತ್ರ ಚಳವಳಿಯಲ್ಲಿ ಸಿ.ಜಿ.ಬಿ. ಹಿರೇಮಠ, ಶಾಹೀದ ಸುಂಕದ, ಖುರ್ಷಿದಅಹ್ಮದ ಢಾಲಾಯತ, ಎಂ.ಐ. ಮುಲ್ಲಾ, ವೈ.ಎನ್. ಗೌಡ್ರ, ವಿಜಯ ಕುಲಕರ್ಣಿ, ಅಯ್ಯಪ್ಪ ನಾಯ್ಕರ, ಎನ್.ಕೆ. ಕೊರ್ಲಹಳ್ಳಿ, ಎಸ್.ಎಸ್. ರಡ್ಡೇರ, ಶಿವಕುಮಾರ ರಾಮನಕೊಪ್ಪ, ವೆಂಕಟೇಶ ಬೇಲೂರ, ಗಣೇಶಸಿಂಗ್ ಬ್ಯಾಳಿ, ಶಂಭುಲಿಂಗಯ್ಯ ಕಲ್ಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಕೆ.ಕೆ. ನದಾಫ್, ಯಶವಂತ ಬಂಡಿ, ಬಸವರಾಜ ಗಾವರವಾಡ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಪತ್ರ ಚಳವಳಿಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ 'ಮೈ ಸ್ಟಾಂಪ್' ಯೋಜನೆಯಲ್ಲಿ ತಮ್ಮದೇ ಭಾವಚಿತ್ರವಿರುವ ಅಂಚೆ ಚೀಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಸಚಿವ ಎಚ್.ಕೆ. ಪಾಟೀಲಗೆ ಪತ್ರಗಳನ್ನು ಅಂಚೆ ಮೂಲಕ ರವಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.