ಗದಗ

ಶೀಘ್ರ ವಸತಿ ಸೌಲಭ್ಯ ಕಲ್ಪಿಸಿ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 11
ಗದಗ-ಬೆಟಗೇರಿ ನಗರದ ವಸತಿ ರಹಿತ ಕುಟುಂಬಗಳಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಗದಗ-ಬೆಟಗೇರಿ ನಗರದ ವಸತಿ ರಹಿತ ಕುಟುಂಬಗಳಿಗೆ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ, ನಗರದ ಗುಡಿಸಲು ನಿವಾಸಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ವಸತಿ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ. ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳು ತಮ್ಮ ಸಂಬಂಧಿಕರಿಗೆ, ಹಿಂಬಾಲಕರಿಗೆ, ಶ್ರೀಮಂತರಿಗೆ ನಗರದ ವಸತಿ ರಹಿತರು ಹಾಗೂ ಬಡ ಕುಟುಂಬಗಳು ಎಂದು ಸುಳ್ಳು ಹೇಳಿ ಬಡಜನರಿಗೆ ದೊರೆಯಬೇಕಾದ ವಸತಿ ಸೌಲಭ್ಯಗಳು ಇಂದು ಬಡವರ ಹೆಸರಲ್ಲಿ ಜನಪ್ರತಿನಿಧಿಗಳು ಯೋಜನೆಗಳನ್ನು ಮಾರಾಟ ಮಾಡುತ್ತಿರುವುದನ್ನು ಮನವಿಯಲ್ಲಿ ಖಂಡಿಸಲಾಗಿದೆ. ಇದೇ ರೀತಿ ನಗರದಲ್ಲಿ ಗುಡಿಸಲು ನಿವಾಸಿಗಳಿಗೆ ಸಾವಿರಾರು ಕೋಟಿ ಅನುದಾನ ಖರ್ಚು ಮಾಡಿ ಮನೆಗಳನ್ನು ನಿರ್ಮಿಸಲಾಗಿದೆ.
ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ, ನಗರದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭ್ರಷ್ಟಾಚಾರದಿಂದ ನಿಜವಾದ ಫಲಾನುಭವಿಗಳು ಇಂದು ನಗರದ ಅನೇಕ ಪ್ರದೇಶಗಳಲ್ಲಿ ವಸತಿ ರಹಿತರಾಗಿ, ಕೊಳಚೆ ಪ್ರದೇಶದ ಗುಡಿಸಲುಗಳಲ್ಲಿ ವಾಸ ಮಾಡುವ ದುಷ್ಟ ವ್ಯವಸ್ಥೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರಣರಾಗಿದ್ದಾರೆ. ಬಡ ಕುಟುಂಬಗಳಿಗೆ ನಿವೇಶನ ಸಿಗಬೇಕು, ಸ್ವಂತ ಮನೆಗಳು ದೊರೆಯಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಸತಿ ಇಲಾಖೆ ಮೂಲಕ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ನಿಂದ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಗರದಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಲಾಗಿದೆ. ಜನಪ್ರತಿನಿಧಿಗಳು ತಮ್ಮ ಓಟ್ ಬ್ಯಾಂಕ್ ಕಾಯ್ದುಕೊಳ್ಳಲು ಬಡಜನರನ್ನು ಸಮಸ್ಯೆಗಳಲ್ಲಿ ಸಿಲಿಕಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ತಕ್ಷಣ ನಗರದಲ್ಲಿರುವ ಸರ್ಕಾರಿ ಭೂಮಿಯಲ್ಲಿ ಅಥವಾ ಸರ್ಕಾರದಿಂದ ಭೂಮಿ ಖರೀದಿಸಿ ಗದಗ-ಬೆಟಗೇರಿ ನಗರದ ವಸತಿ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿ ಕೊಡುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಸ್ಲಂ ಸಮಿತಿಯಿಂದ ನಗರದ ವಸತಿ ರಹಿತ ಹಾಗೂ ಸ್ಲಂ ಪ್ರದೇಶದ ಸಾವಿರಾರು ಕುಟುಂಬಗಳೊಂದಿಗೆ ಸ್ಥಳೀಯ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭ ಸ್ಲಂ ಸಮಿತಿ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ, ಮಹಿಳಾ ಸಮಿತಿ ಅಧ್ಯಕ್ಷೆ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಯುವ ಸಮಿತಿ ಅಧ್ಯಕ್ಷ ಶರೀಫ್ ಬಿಳೆಯಲಿ, ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಅಶೋಕ ಕುಸಬಿ, ಆರತಿ, ಪರಶುರಾಮ ಕಾಳೆ, ಯುಸೂಫ್ ಮಜ್ಜಗಿ, ಅನೀಲ ಕಾಳೆ, ಅಬೂಬಕ್ಕರ ಮಕಾಂದಾರ, ಬಸವರಾಜ ಬಿಳೆಯಲಿ, ಪರವೀನ ಬಡಿಗೇರಿ, ಇಬ್ರಾಹಿಂ ಮುಲ್ಲಾ, ಗೌರಮ್ಮ ಶಿರಗುಪ್ಪಿ, ನಾಗರಾಜ ಮುಟಗಾರ, ಸತ್ತಾರಸಾಬ ಇಟಗಿ, ಶಹಜಾನಬಿ ಕರ್ನಾಚಿ, ತಾಹೇರಾಬೇಗಂ ಗುಳಗುಂದಿ, ಕಮಲವ್ವ ಬಿದರೂರು, ಯಶವಂತ ಗೋಸಾವಿ, ಕಾಶೀಮಸಾಬ್ ಮುಜಾವರ ಉಪಸ್ಥಿತರಿದ್ದರು.




ಜನಪ್ರತಿನಿಧಿಗಳು ತಮ್ಮ ಓಟ್ ಬ್ಯಾಂಕ್ ಕಾಯ್ದುಕೊಳ್ಳಲು ಬಡಜನರನ್ನು ಸಮಸ್ಯೆಗಳಲ್ಲಿ ಸಿಲಿಕಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ತಕ್ಷಣ ನಗರದಲ್ಲಿರುವ ಸರ್ಕಾರಿ ಭೂಮಿಯಲ್ಲಿ ಅಥವಾ ಸರ್ಕಾರದಿಂದ ಭೂಮಿ ಖರೀದಿಸಿ ಗದಗ-ಬೆಟಗೇರಿ ನಗರದ ವಸತಿ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಮನೆಗಳನ್ನು ನಿರ್ಮಿಸಿ ಕೊಡುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಸ್ಲಂ ಸಮಿತಿಯಿಂದ ನಗರದ ವಸತಿ ರಹಿತ ಹಾಗೂ ಸ್ಲಂ ಪ್ರದೇಶದ ಸಾವಿರಾರು ಕುಟುಂಬಗಳೊಂದಿಗೆ ಸ್ಥಳೀಯ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು.
-ಗದಗ ಜಿಲ್ಲಾ ಕೊಳಚೆ ನಿವಾಸಿಗಳ
ಹಿತರಕ್ಷಣಾ ಸಮಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.