ಗದಗ

ಚಿಂಚಲಿ ಗ್ರಾಪಂ ಅಧ್ಯಕ್ಷರಾಗಿ ಚಿನ್ನವ್ವ ಆಯ್ಕೆ

Published On :

ಮುಳಗುಂದ: ಸಮೀಪದ ಚಿಂಚಲಿ ಗ್ರಾಪಂ ಅಧ್ಯಕ್ಷ ಸ್ಥಾನದ 2ನೇ ಅವಧಿಯ ಉಳಿದ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಚಿನ್ನವ್ವ ಪೂಜಾರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನದ 2ನೇ ಅವಧಿ ಇನ್ನೂ 15 ತಿಂಗಳು ಬಾಕಿ ಇರುವಾಗಲೇ ಈರವ್ವ ಸಂದಕದ ಅವರ ವಿರುದ್ಧ ಅವಿಶ್ವಾಸದಿಂದ ಗ್ರಾಪಂ ಅಧ್ಯಕ್ಷ ಸ್ಥಾನ ತೆರವಾಗಿತ್ತು. 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಈರವ್ವ ದೊಡ್ಡಹುಚ್ಚಪ್ಪ ಸಂದಕದ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನವ್ವ ಸಣ್ಣಹನುಮಂತಪ್ಪ ಪೂಜಾರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಗ್ರಾಪಂ 21 ಸದಸ್ಯರಲ್ಲಿ 19 ಸದಸ್ಯರು ಹಾಜರಿದ್ದು, ನಿಯಮದಂತೆ ಗುಪ್ತ ಮತದಾನ ನಡೆಸಲಾಯಿತು. ಇದರಲ್ಲಿ ಚಿನ್ನವ್ವ ಪೂಜಾರ ಅವರು 15 ಮತ ಪಡೆದುಕೊಂಡರೆ ಪ್ರತಿಸ್ಪರ್ಧಿ ಈರವ್ವ ಸಂದಕದ 3 ಮತ ಪಡೆದುಕೊಂಡರು. 1 ಮತ ತಿರಸ್ಕೃತಗೊಂಡಿತು. ಮತ ಎಣಿಕೆ ನಂತರ ಚುನಾವಣೆ ಅಧಿಕಾರಿ, ಗದಗ ತಾಪಂ ಅಧಿಕಾರಿ ಬಿ. ರೇವಣ್ಣ ಅವರು ಚಿನ್ನವ್ವ ಪೂಜಾರ ಅವರನ್ನು ಅಧ್ಯಕ್ಷರೆಂದು ಘೋಷಿಸಿದರು. ಗ್ರಾಪಂ ಉಪಾಧ್ಯಕ್ಷ ಮಂಜುನಾಥ ತಿರ್ಲಾಪುರ, ಸದಸ್ಯ ಪರಪ್ಪ ಅಂಗಡಿ, ಮಹೇಶ ಬಾಲರಡ್ಡಿ, ಸಣ್ಣರಂಗಪ್ಪ ಲಕ್ಷ್ಮೀಗುಡಿ, ಈರಪ್ಪ ಆಡಕಾರ, ಶಿವಕುಮಾರ ಕಂಪ್ಲಿ, ಬಸಪ್ಪ ಕಾಟೋಳ್ಳಿ, ಬಸವರಾಜ ಜಕಮ್ಮನವರ, ಶರೀಪಸಾಬ್ ನದಾಫ್, ಚನ್ನಪ್ಪ ನಾಗರಡ್ಡಿ, ಇತರರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.