ಪಾಶ್ಚಾತ್ಯ ಅನುಕರಣಿಗೆ ಶ್ರೀರಾಮ ಸೇನೆ ವಿರೋಧ
ಗದಗ: ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಪಾಶ್ಚಾತ್ಯರ ವಿಕೃತಿಯ ಪ್ರತೀಕವಾದ ಸ್ವೇಚ್ಛಾಚಾರವನ್ನು ಶ್ರೀರಾಮ ಸೇನೆ ವಿರೋಧಿಸಲಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಫೆ. 14ರಂದು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಸೆಕ್ಸ್ ಮಾಫೀಯಾ, ಡ್ರಗ್ಸ್ ಮಾಫಿಯಾದಂತಹ ಸ್ವೇಚ್ಛಾಚಾರದ ಬದುಕಿನತ್ತ ಯುವ ಪೀಳಿಗೆಯನ್ನು ಆಕರ್ಷಿಸುವ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಫೆ. 14ರಂದು ಮಾತಾಪಿತರ ಪೂಜ್ಯ ದಿನವನ್ನಾಗಿ ಆಚರಿಸುವ ಮೂಲಕ ಪ್ರೀತಿ ಪ್ರೇಮಕ್ಕಿಂತ ಮಾತಾಪಿತರ ಪ್ರೇಮ ರಾಷ್ಟ್ರಪ್ರೇಮ ಬೆಳೆಸಲು ಪ್ರಾಮುಖ್ಯ ನೀಡಲಿದೆ. ಈ ಕುರಿತು ಈಗಾಗಲೇ ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪಾಲಕರಲ್ಲಿ ಭಾರತೀಯ ಸಂಸ್ಕೃತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಹಕರಿಸಲು ಕೊರಲಾಗಿದೆ ಎಂದರು.
ಫೆ. 14ರಂದು ಸ್ಥಳೀಯ ಜಗದಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಂಜೆ 5.30ಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ರತ್ನಾಕರಭಟ್ಟ ಜೋಷಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಸಮಾರಂಭ ಉದ್ಘಾಟಿಸುವರು. ಶ್ರೀರಾಮ ಸೇನೆಯ ರಾಜ್ಯ ವಕ್ತಾರ ಗಂಗಾಧರ ಕುಲಕರ್ಣಿ, ಸಹದೇವ ಗಣಾಚಾರಿ, ಶಿವಣ್ಣ ಅಂಗಡಿ, ಬಲರಾಮಸಾ ಲದ್ವಾ, ಮಲ್ಲಿಕಾರ್ಜುನ ಅಣ್ಣಿಗೇರಿ, ರಾಜು ಖಾನಪ್ಪನವರ ಪಾಲ್ಗೊಳ್ಳುವರು. ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಅಧ್ಯಕ್ಷತೆ ವಹಿಸುವರು. ಈ ಹಿನ್ನೆಲೆಯಲ್ಲಿ 25 ಜೋಡಿ ಮಾತಾಪಿತರನ್ನು ಗೌರವಿಸಲಾಗುವುದು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫೆ. 13ರಂದು ನಗರದ ರಾಚೋಟೇಶ್ವರ ದೇವಸ್ಥಾನದಿಂದ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

