ಉತ್ತರಾಖಂಡ ಮಾದರಿ ಜಗತ್ ಪ್ರಳಯ: ಕೋಡಿಮಠ ಶ್ರೀ ಭವಿಷ್ಯ
ಕನ್ನಡಪ್ರಭ ವಾರ್ತೆ, ಗದಗ, ಫೆ. 14
ಉತ್ತರಾಖಂಡ ಪ್ರಳಯದ ಮಾದರಿಯಲ್ಲಿಯೇ ಮುಂಬರುವ ದಿನಗಳಲ್ಲಿ ಜಗತ್ ಪ್ರಳಯವಾಗಲಿದೆ ಎಂದು ಕೋಡಿಮಠದ ಜ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದರು.
ಅವರು ಶುಕ್ರವಾರ ನಗರದ ಹುಡ್ಕೋ ಕಾಲೋನಿಯಲ್ಲಿರುವ ಶಿವಶರಣೆ ನೀಲಮ್ಮತಾಯಿ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಈಚೆಗೆ ಭವಿಷ್ಯ ನುಡಿದಂತೆ ಉತ್ತರಾಖಂಡದಲ್ಲಿ ಜಲಪ್ರಳಯವಾಗಿ ಸಾವು ನೋವುಗಳು ಸಂಭವಿಸಿದೆ. ಇದೇ ಮಾದರಿಯಲ್ಲಿಯೇ ಮುಂಬರುವ ಕೆಲವೇ ದಿನಗಳಲ್ಲಿ ನೀರಿನಿಂದ, ಭೂಮಿಯಿಂದ ಜನತೆ ತೊಂದರೆ ಅನುಭವಿಸುವ ಕಾಲ ಬರಲಿದೆ. ಜನರು ಊಹಿಸದಂತಹ ಚಿತ್ರ ವಿಚಿತ್ರ ಪ್ರಾಣಿಗಳ ಜನನವಾಗಿ ಅವುಗಳಿಂದ ಮಾನವರ ಅಳಿವು ಸಂಭವಿಸಲಿದೆ. ಬೃಹತ್ ಪ್ರಮಾಣದ ಜೀವಜಂತುಗಳ ಹಾವಳಿಯಿಂದ ಮನುಕುಲ ವಿನಾಶವಾಗಲಿದೆ.
ಇದಲ್ಲದೇ ಜಲಪ್ರಳಯ, ಭೂಕಂಪ, ಬೆಂಕಿ ಹಾವಳಿಯಂತಹ ದುರಂತಗಳು ಸಂಭವಿಸಿ ಪ್ರಾಣಿ-ಪಕ್ಷಿ, ಜೀವ-ಜಂತುಗಳು ಸರ್ವನಾಶವಾಗುವ ಮೂಲಕ ಸನಾತನ ಧರ್ಮ ಪರಂಪರೆ ಅಳಿದು ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ, ವಿಜಯಕುಮಾರ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

