ಗದಗ

ಸನ್ಮಾರ್ಗದತ್ತ ನಡೆಸುವ ಶರಣರ ವಚನಗಳು: ಎಚ್ಕೆ

Published On :

ಮುಳಗುಂದ: ಶರಣರ ತತ್ವಾದರ್ಶಗಳನ್ನು ತಮ್ಮ ವಿಚಾರದ ಮೂಲಕ ಜನರಿಗೆ ತಿಳಿಸುವುದೇ ಜಾತ್ರೆಯ ಉದ್ದೇಶ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಈಚೆಗೆ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ 155ನೇ ಸ್ಮರಣೋತ್ಸವ, ಜಾತ್ರಾಮಹೋತ್ಸದ ಲೀಲಾ ಶಿವಯೋಗಿಗಳ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತ್ರೆಗಳು ಕೇವಲ ಮನರಂಜನೆಗಾಗಿ ನಡೆಯುವುದಿಲ್ಲ, ಬದಲಾಗಿ ಶರಣರ ವಚನಗಳ ಸಾರವನ್ನು ಜನರಿಗೆ ತಿಳಿಸಿ ಸನ್ಮಾರ್ಗದತ್ತ ನಡೆಸುತ್ತವೆ, ಇದೆ ಸತ್ಸಂಗ. ಗ್ರಾಮೀಣ ಜನರ ಬದುಕು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ ಜೀವನ ಶೈಲಿ ಬದಲಾಗಿಲ್ಲ, ಬದಲಾಗಬೇಕಿದ್ದರೆ, ಮಠ-ಮಾನ್ಯಗಳ ಪೂಜ್ಯರು ಧರ್ಮ ಬೋಧನೆ ಜತೆಗೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಜನರನ್ನು ಪ್ರೇರೇಪಿಸಬೇಕು. ಗ್ರಾಮದಲ್ಲಿ ಸ್ವಚ್ಛತೆ, ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರಿನ ಸಂರಕ್ಷಣೆ ಸೇರಿದಂತೆ ಗ್ರಾಮೀಣ ಜನರ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ತಿಳಿವಳಿಕೆ ನೀಡುವುದು ಅವಶ್ಯ ಎಂದರು.
ನಿವೃತ್ತ ಪ್ರಾಧ್ಯಾಪಕ ಕೆ.ಎಸ್. ಕೌಜಲಗಿ ಕೈವಲ್ಯ ದರ್ಪಣದ ಕುರಿತು ಉಪನ್ಯಾಸ ನೀಡಿದರು. ಸಮ್ಮುಖ ವಹಿಸಿದ್ದ ಕಂಪ್ಲಿಯ ಕಲ್ಮಠದ ಪ್ರಭು ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಗುತ್ತಲದ ಸಂಗನ ಬಸವ ಶ್ರೀಗಳು, ಪಪಂ ಸದಸ್ಯ ಸಿ.ಬಿ. ಬಡ್ನಿ, ಗದಗ ಎಪಿಎಂಸಿ ಸದಸ್ಯ ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಎಂ.ಎಂ. ಮರಿದೇವರಮಠ, ಎಸ್.ಸಿ. ಚವಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.