ಅಭಿವೃದ್ಧಿಪರ ಯೋಜನೆ ಮೆಚ್ಚಿ ಕೈ ಸೇರ್ಪಡೆ
ಮುಂಡರಗಿ: ಬಡವರ ಹಾಗೂ ಹಿಂದುಳಿದವರ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾಳಜಿ ಹಾಗೂ ಅವರಿಗೆ ಕೆಳಹಂತದ ಜನರ ಮೇಲಿರುವ ಪ್ರೀತಿ, ವಿಶ್ವಾಸವನ್ನು ಕಂಡು ಅವರು ಕೈಗೊಳ್ಳುತ್ತ ಬಂದಿರುವ ಅನೇಕ ಜನಪರ ಯೋಜನೆಗಳನ್ನು ಮೆಚ್ಚಿಕೊಂಡು ಮತದಾರರು ತಾವೇ ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಬಿಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಪುರಸಭೆ ಮಾಜಿ ಸದಸ್ಯ ಮೋದಿನಸಾಬ ಡಂಬಳ ಮತ್ತು ಜಾತ ್ಯತೀತ ಜನತಾದಳದ ಮುಖಂಡ ಮಾರುತಿ ಜಾಲಿಹಾಳ ಅವರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡು ಮಾತನಾಡಿದರು.
ಗದಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಟ್ರೇಶ ಅಂಗಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿದ ಅನೇಕ ಕಾರ್ಯಕ್ರಮಗಳು ಜನೋಪಕಾರಿಯಾಗಿವೆ. ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಯೋಜನೆಗಳು ಬಡವರಿಗೆ ಬಹಳಷ್ಟು ಸಹಕಾರಿಯಾಗಿವೆ. ಇಂತಹ ಅನೇಕ ಯೋಜನೆಗಳಿಂದ ಕಾಂಗ್ರೆಸ್ ಜನಪರವಾಗಿದೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೇಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಮು ಕಲಾಲ, ಧ್ರುವಕುಮಾರ ಹೊಸಮನಿ, ಎಸ್.ಡಿ. ಮಕಾಂದಾರ, ನಬಿಸಾಬ ಕೆಲೂರ, ಸೊಲಬಣ್ಣ ಜೋಬಳಿ, ಅಬ್ದುಲ್ ಖುರೇಶಿ, ಪಾಲಾಕ್ಷಿ ಗಣದಿಣ್ಣಿ, ರಾಮು ಭಜಂತ್ರಿ, ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನರ, ರಾಘವೇಂದ್ರ ಕುರಿಯವರ, ಸಣ್ಣಸೋಮನಗೌಡ ಗೌಡ್ರ, ಚಂದ್ರಶೇಖರ ಬಡಿಗೇರ, ಫಕ್ರುದ್ದೀನ್ ಹಾರೋಗೇರಿ, ಎ.ಪಿ. ದಂಡಿನ, ಬಿ.ವಿ. ಮುದ್ದಿ, ಶರಣಪ್ಪ ಕುಬಸದ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

