ಗದಗ

ಧರ್ಮ ಪಾಲನೆಯಿಂದ ಭಗವಂತನ ಶ್ರೀರಕ್ಷೆ ಸಾಧ್ಯ

Published On :

ಗದಗ: ಕರ್ತವ್ಯ ಧರ್ಮವನ್ನು ಶ್ರದ್ಧಾ ಭಕ್ತಿಯಿಂದ ಮಾಡುವ ಮೂಲಕ ಭಗವಂತನ ರಕ್ಷಣೆಗೆ ಪಾತ್ರರಾಗಬೇಕು ಎಂದು ಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.
ಅವರು ಈಚೆಗೆ ನಗರದ ವೀರನಾರಾಯಣ ದೇವಸ್ಥಾನದಲ್ಲಿ ಸತ್ಯಾತ್ಮತೀರ್ಥ ಶ್ರೀಗಳ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಲಾದ ಸತ್ಯಜ್ಞಾನತೀರ್ಥರ ಆರಾಧನಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶುದ್ಧ ಭಾಗವತ ಧರ್ಮ ಭಾಗವತ ಶಕ್ತಿ ಪಾಲನೆಯಲ್ಲಿ ಸಮಾಜ ವಿಮುಖವಾಗುತ್ತಿರುವುದು ಖೇದದ ಸಂಗತಿಯಾಗಿದೆ. ನೈಜ ಸ್ವರೂಪ ಪಾಲನೆ ಕುರಿತು ಸಮಾಜ ಸಾಕಷ್ಟು ಅರಿಯಬೇಕಿದೆ. ನಿಶ್ಕಾಮವಾಗಿ ಭಗವಂತನ ಪ್ರಾರ್ಥಿಸುವ ಪರಿಪಾಠ ಇಂದಿನ ಅವಶ್ಯಕ. ದೃಢ ವಿಶ್ವಾಸ, ಅಚಲ ನಂಬಿಕೆಗಳು ಮಾತ್ರ ಭಗವಂತನೆಡೆ ಸಾಗಲು ಮುಕ್ತಿ ಸನ್ಮಾರ್ಗವಾಗಿದೆ. ದೇವರಲ್ಲಿ ಜ್ಞಾನ, ಭಕ್ತಿ, ವೈರಾಗ್ಯ ಅನುಗ್ರಹ ಬೇಡುವುದು ಅವಶ್ಯಕತೆಯಾಗಿದೆ. ಭಗವಂತನ ಸನ್ಮಾರ್ಗದಲ್ಲಿ ವಿಚಿತ್ರ ಪ್ರವೃತ್ತಿ ಬೇಡಿಕೆಗಳು ನಿಷಿದ್ಧವಾಗಿದೆ ಎಂದರು. ಬೆಂಗಳೂರಿನ ಪುರಂದರ ಹಯಗ್ರೀವಾಚಾರ್ಯರಿಂದ ಸತ್ಯಜ್ಞಾನ ವೈಭವ ಉಪನ್ಯಾಸ ಜರುಗಿತು. ನಂತರ ಕೊಪ್ಪಳ ಸಂತೆಕೆಲೂರ ಪಾಂಡುರಂಗ ದಾಸ ಅವರಿಂದ ತಾರತಮ್ಯ ಭಜನೆ ನೆರವೇರಿತು. ಸತ್ಯಾತ್ಮತೀರ್ಥ ಶ್ರೀಗಳು ಜಯನಾಮ ಸಂವತ್ಸರ ಪಂಚಾಂಗ ಪ್ರತಿಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಪಂ. ಕೇಶವಾಚಾರ್ಯ ಜಾಲಿಹಾಳ, ಕಾರ್ಯಾಧ್ಯಕ್ಷ ವರದಾಚಾರ್ಯ ಜಾಲಿಹಾಳ, ವಿಕ್ರಮ ಪ್ರಕಾಶನದ ಎಂ.ಎಚ್. ಹರಿದಾಸ ಇದ್ದರು. ಶ್ರೀಧರ ಆಚಾರ್ಯ ಶಿರಹಟ್ಟಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.