ಗದಗ

ನಾಡಿನ ಸಂಸ್ಕೃತಿ ಪರಿಚಯಿಸುವ ಸಮ್ಮೇಳನ: ಪ್ರೊ. ಎಫ್.ಎಸ್. ಕರಿದುರಗನವರ

Published On :

ಗಜೇಂದ್ರಗಡ: ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಫೆ.22, 23ರಂದು ನವ್ಯ ಕವಿ ಖ್ಯಾತಿಯ ಡಾ. ಸೋಮಶೇಖರ ಇಮ್ರಾಪುರ ಸಾರಥ್ಯದಲ್ಲಿ ನಡೆಯಲಿರುವ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಪರಿಚಯಿಸುವ ಮಾದರಿ ಸಮ್ಮೇಳನವಾಗಲಿದೆ ಎಂದು ಸಾಹಿತಿ ಪ್ರೊ.ಎಫ್.ಎಸ್. ಕರಿದುರಗನವರ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, 1994ರಲ್ಲಿ ಅವಿಭಾಜಿತ ಧಾರವಾಡ ಜಿಲ್ಲೆಯ 4ನೇ ಜಿಲ್ಲಾ ಸಮ್ಮೇಳನದ ಆತಿಥ್ಯ ಪಡೆದು ರೋಣ ಕೀರ್ತಿಗೆ ಭಾಜನವಾಗಿ, ಇದೀಗ ವಿಭಜಿತ ಗದಗ ಜಿಲ್ಲೆಯ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿಕೊಂಡ ರೋಣ ಪಟ್ಟಣ ಪ್ರಾಚೀನ ಕಾಲದಿಂದಲೂ ಕನ್ನಡದ ಗಂಡು ಮೆಟ್ಟಿನ ನೆಲೆಬೀಡಾಗಿ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪಕ್ಕೆ ತನ್ನದೆ ಆದ ವಿಶೇಷ ಕೊಡುಗೆ ನೀಡಿ, ನಾಡಿನ ಇತಿಹಾಸ ಪುಟದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ.
ಅಂದು ನಡೆದ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಸ್ವಾಗತಾಧ್ಯಕ್ಷರಾಗಿದ್ದ ಶಾಸಕ ಜಿ.ಎಸ್. ಪಾಟೀಲ, ಇಂದು ನಡೆಯಲಿರುವ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಸ್ವಾಗತಾಧ್ಯಕ್ಷರಾಗಿರುವುದು ಕಾಕತಾಳೀಯ. ಜತೆಗೆ ಪಂಚತಂತ್ರದ ದುರ್ಗಸಿಂಹ, ನಾಡಪ್ರಜ್ಞೆ ಮೊಳಗಿಸಿದ ಆಲೂರ ವೆಂಕಟರಾಯರು, ರಸಿಕ ರಂಗ ಖ್ಯಾತಿಯ ಡಾ. ರಂ.ಶ್ರೀ.ಮುಗಳಿ, ವಿದ್ಯಾರತ್ನ ಛಆರ್.ಎಸ್. ಪಂಚಮುಖಿ, ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜರು, ಖ್ಯಾತ ಸಂಶೋಧಕ ಡಾ. ಆರ್.ಸಿ. ಹಿರೇಮಠ. ವಿಜ್ಞಾನ ಸಾಹಿತಿ ರಾಜಶೇಖರ ಭೂಸನೂರಮಠ, ಕಾನೂನು ಸಾಹಿತ್ಯದ ಎಸ್.ಸಿ. ಹಿರೇಮಠ, ವಚನ ಶಾಸ್ತ್ರ ವಿದ್ವಾಂಸ ಸಂ.ಶಿ. ಭೂಸನೂರಮಠ, ಡೊಂಕುಲೋಕ ಖ್ಯಾತಿಯ ಕವಿ ಡಾ. ಎಂ.ಡಿ. ಗೊಗೇರಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಮೊಳಗಿಸಿದ ಅಂದಾನಪ್ಪ ದೊಡ್ಡಮೇಟಿ, ವಿರೂಪಾಕ್ಷಪ್ಪ ಅಬ್ಬಿಗೇರಿಯಂತಹ ಮಹಾನ್ ದೇಶ ಭಕ್ತರು ಜನಿಸಿದ ಪುಣ್ಯ ಭೂಮಿಯಲ್ಲಿ ಕನ್ನಡಾಂಬೆ ತೇರು ಎಳೆಯಲು ಅವಕಾಶ ದೊರಕಿರುವುದು ಸಾಹಿತ್ಯಾಸಕ್ತರಲ್ಲಿ ಎಲ್ಲಿಲ್ಲದ ಸಂತಸ, ಸಂಭ್ರಮ ಮನೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.