ಜಲವಿವಾದ ರಾಜಕೀಯಕ್ಕೆ: ವಿಜಯ ಕುಲಕರ್ಣಿ
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 18
ಉತ್ತರ ಕರ್ನಾಟಕದ 4 ಜಿಲ್ಲೆ ಹಾಗೂ 9 ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಅನುಕೂಲ ಕಲ್ಪಸಲು ಕಳಸಾ-ಬಂಡೂರಿ ನಾಲಾಗಳನ್ನು ಮಲಪ್ರಭ ಜಲಾಶಯಕ್ಕೆ ಜೋಡಿಸಬೇಕೆಂದು ಈ ಭಾಗದ ರೈತ ಸಮುದಾಯ ಹಾಗೂ ಜನತೆ ಆಳುವ ಸರ್ಕಾರಕ್ಕೆ ಬೇಡಿಕೆಯನ್ನಿಟ್ಟು ಸುಮಾರು 20 ವರ್ಷ ಗತಿಸಿದೆ. ಆದರೀಗ ಈ ಯೋಜನೆ ರಾಜಕೀಯ ರೂಪ ಪಡೆದಿರುವುದು ದುರದೃಷ್ಟಕರ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಸಂವಿಧಾನದಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ನ್ಯಾಯಾಧೀಕರಣ ಅವಶ್ಯಕತೆ ಇರುವುದಿಲ್ಲವೆಂದು ನಿಯಮವಿದ್ದರೂ ರಾಜ್ಯ ಮತ್ತು ಕೇಂದ್ರದಲ್ಲಿ ಆಳುವ ಸರ್ಕಾರಗಳು ಈ ಯೋಜನೆಯನ್ನು ಹೆಚ್ಚಾಗಿ ರಾಜಕೀಯ ಸ್ವರೂಪಕ್ಕೆ ಕೊಂಡೊಯ್ಯುತ್ತಿವೆ. ಈ ಜಲವಿವಾದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಇದೆ. ಪ್ರಧಾನಿಗಳು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಎರಡು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಜಲವಿವಾದ ಬಗೆಹರಿಸಲು ಸಂವಿಧಾನದಲ್ಲಿ ಅವಕಾಶವಿದ್ದರೂ ಏಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂಬುದು ತಿಳಿಯದಾಗಿದೆ ಎಂದರು. ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಮತ್ತು ನ್ಯಾಯ ಮಂಡಳಿಗಳು ಈ ಕಳಸಾ-ಬಂಡೂರಿ ನಾಲಾಗಳ ಕಾಮಗಾರಿ ಮತ್ತು ವಿವಾದ ಶೀಘ್ರ ತೀರ್ಮಾನ ಕೈಗೊಂಡರೆ ಮಾತ್ರ ಈ ಯೋಜನೆ ಬೇಗೆ ಪೂರ್ಣಗೊಳಲು ಸಾಧ್ಯವಾಗುತ್ತದೆ ಎಂದರು.
ಬಸನಗೌಡ ಚಿಕ್ಕನಗೌಡ್ರ, ಚಳಪ್ಪ ನಾಯ್ಕರ, ಅಣ್ಣಪ್ಪಗೌಡ ಪಾಟೀಲ, ರುದ್ರಪ್ಪ ಗಾಣಿಗೇರ, ಗಣೇಶ ಪಲ್ಲಿ, ಬಸಪ್ಪ ಗುಡೇದರಿ, ಅಲ್ಲಿಸಾಬ ನದಾಫ್, ಎಂ.ಟಿ. ಬಾದಾಮಿ, ಗುರುಶಾಂತ ನರಸಾಪುರ, ಎನ್.ಎಸ್. ನರಸಾಪುರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

