ಗದಗ

ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Published On :

ಗದಗ: ಜಿಡಿಎಸ್ ನೌಕರರನ್ನು ಪೌರನೌಕರರೆಂದು ಪರಿಗಣಿಸಿ ಹಾಗೂ ಇಲಾಖೆಯ ನೌಕರರಿಗೆ ಕೊಡುವ ಎಲ್ಲ ಸೌಲಭ್ಯ ಕೊಡುವುದು ಹಾಗೂ ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ಅಖಿಲ ಭಾರತ ಅಂಚೆ ಗ್ರಾಮೀಣ ನೌಕರರ ಸಂಘ ಗದಗ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಯಾಧ್ಯಕ್ಷ ರಾಜು ಪಾಟೀಲ ಮಾತನಾಡಿ, ಶೇ. 50ರಷ್ಟು ಡಿಎ ಮರ್ಜರ ಮಾಡುವುದು. 2006ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ, ಕಾಂಟಿಜೆಂಟಿ, ಪಾರ್ಟಟೈಂ ನೌಕರರಿಗೆ ಡಿಎ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇಲಾಖೆಯು ಸಂಘದ ಇಲಾಖೇತರ ನೌಕರರ ಸಂಘ ಎಂದು ಇದ್ದಂತ ಹುದ್ದೆಯನ್ನು ಈಗ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರು ಎಂದು ಆದೇಶ ನೀಡಿರುತ್ತದೆ. ಕೇಂದ್ರ ಕಚೇರಿಯು ಈ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಂಘದ ವತಿಯಿಂದ ರಾಜಕೀಯ ನಾಯಕರಿಗೆ ಹಾಗೂ ಸಚಿವರಿಗೆ ಸ್ಪೀಡ್ಪೋಸ್ಟ್ ಮೂಲಕ ಮನವಿ ಸಲ್ಲಿಸಲಾಗುವುದು ಮತ್ತು ಪಾದಯಾತ್ರೆಗಳನ್ನೂ ಮಾಡಲಾಗುವುದು. ಕಾರಣ ಎಲ್ಲ ಅಂಚೆ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕೇಂದ್ರ ಸಂಘಟನೆಯ ಕರೆಯ ಮೇರೆಗೆ ಇಂದಿನಿಂದ ಬೇಡಿಕೆ ಈಡೇರಿಕೆಗಾಗಿ ಮತ್ತು ಪರಿಹಾರ ಸಿಗುವವರೆಗೂ ಅನಿರ್ದಿಷ್ಟ ಕಾಲ ನಡೆಸುತ್ತಿರುವ ಮುಷ್ಕರದಲ್ಲಿ ಯಾವುದೇ ಅಧಿಕಾರಿಗಳ ಬೆದರಿಕೆ ಹೆದರದೇ ಮುಷ್ಕರದಲ್ಲಿ ಪಾಲ್ಗೊಳ್ಳಿ. ನಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ನಾವು ಮುಷ್ಕರ ಮಾಡುವುದು ಸಂವಿಧಾನದಲ್ಲಿ ನಮ್ಮ ಹಕ್ಕಾಗಿರುತ್ತದೆ. ಆದ್ದರಿಂದ ಸಮಯವನ್ನು ವ್ಯರ್ಥ ಮಾಡದೇ ನಮ್ಮ ಭವಿಷ್ಯಕ್ಕಾಗಿ ನಾವು ಮುಷ್ಕರ ಮಾಡಲೇ ಬೇಕಾಗಿದೆ ಎಂದರು.
ನಗರದ ಅಂಚೆ ಇಲಾಖೆ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆಯು ಗಾಂಧಿವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಂ.ಕೆ. ಹೊನ್ನಪ್ಪನವರ, ಟಿ.ಎಸ್. ಹಿರೇಹಾಳ, ಬಿ.ಎಲ್. ಗೌಡರ, ಎಲ್.ಎಂ. ಕುಂಬಾರ, ಎಂ.ಎಂ. ತಳವಾರ, ಜಿ.ಆರ್. ಕುಂಬಾರ, ಎಂ.ಆರ್. ಭಜಂತ್ರಿ, ಪ್ರಕಾಶ ಕುಲಕರ್ಣಿ,  ಎ.ವಿ. ಗೋಡೆಕಾರ, ಆರ್.ವೈ. ಮಾಂಡ್ರೆ, ಡಿ.ಜಿ. ಭಜಂತ್ರಿ, ರವಿ, ವೈ.ಎಸ್. ದಾಮೋದರ, ಕೆ.ಎನ್. ತೋಟಿಗಂಟಿ, ಬಿ.ಎಸ್. ಹಡಪದ, ಬಿ.ಡಿ. ಕಾಲದಾರ, ಆರ್.ಎಲ್. ಗುಡಿ, ಎಚ್.ಎಂ. ಹುದ್ದಾರ, ಸಿ.ಸಿ. ಕಟ್ಟಿಮನಿ, ಎಸ್.ಕೆ. ಜಿರನಕಳ್ಳಿ, ಪಿ.ಸಿ. ಅರಸಿದ್ದಿ, ಎಸ್.ವಿ. ಮಡಿವಾಳರ, ಬಿ.ಎಚ್. ಪೂಜಾರ, ಪಿ.ಎಚ್. ಹಿರೇಮನಿ, ಸುರೇಶ ಕುಲಕರ್ಣಿ, ವಾಣಿ ಕುಲಕರ್ಣಿ, ಪ್ರಕಾಶ ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.