ಗದಗ

ಸಾಹಿತ್ಯ ಸಮ್ಮೇಳನ ಪ್ರಚಾರ: ರೋಣದಲ್ಲಿ ಬೈಕ್ ರ್ಯಾಲಿ

Published On :

ರೋಣ: ಪಟ್ಟಣದಲ್ಲಿ ಫೆ. 22 ಮತ್ತು 23ರಂದು ನಡೆಯುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥವಾಗಿ ಯುವಕರು, ಸಾಹಿತ್ಯಾಭಿಮಾನಿಗಳು ಮಂಗಳವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಬೈಕ್ ರ್ಯಾಲಿಗೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿ ಮಾತನಾಡಿ, ಕನ್ನಡ ನಾಡು, ನುಡಿ, ಜಲ ರಕ್ಷಣೆ, ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಗೆ ಧಕ್ಕೆಯಾಗದಂತೆ ಕಾಪಾಡುವುದು ಹೊಣೆಗಾರಿಕೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪಟ್ಟಣದಲ್ಲಿ ಜಿಲ್ಲಾ 6ನೇ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ತಾಲೂಕಿನ್ಯಾದಂತ ಕನ್ನಡ ನಾಡು, ನುಡಿ, ಜಲ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಯುವಕರು, ಕನ್ನಡ ಭಾಷೆ, ಸಾಹಿತ್ಯಾಭಿನಿಗಳು ಸ್ವ ಪ್ರೇರಣೆಯಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ. ಫೆ. 22ರಂದು ಸಿ.ಎಂ. ಸಿದ್ದರಾಮಯ್ಯನವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಕುರಿತು ನಾಡಿನ ಖ್ಯಾತ ವಿದ್ವಾಂಸರಿಂದ ವಿಶ್ಲೇಷಣಾತ್ಮಕ ವಿಚಾರ ಗೋಷ್ಠಿಗಳು ಜರುಗುತ್ತವೆ ಎಂದರು.
ಬೈಕ್ ರ್ಯಾಲಿ ನೇತೃತ್ವ ವಹಿಸಿದ್ದ ಯುವ ಮುಖಂಡ ಮಿಥುನ ಪಾಟೀಲ ಮಾತನಾಡಿದರು. ಈ ವೇಳೆ ವಿ.ಬಿ. ಸೋಮನಕಟ್ಟಿಮಠ, ಪುರಸಭೆ ಸದಸ್ಯ ಅಜ್ಜಪ್ಪ ರಡ್ಡೇರ, ತೋಟಪ್ಪ ನವಲಗುಂದ, ಶಿವಪ್ಪ ಕರಿಲಿಂಗಣ್ಣವರ, ಬಾಬುಸಾಬ್ ಚಿನ್ನೂರ, ಮಂಜು ಹಾಳಕೇರಿ, ಪ್ರಕಾಶ ಹಾಲನ್ನವರ, ಸಂಗು ನವಲಗುಂದ, ಆನಂದ ಚಂಗಳಿ, ವೀರಣ್ಣ ಹೋರಕೇರಿ, ಸಿದ್ದನಗೌಡ ಪಾಟೀಲ, ಸುಭಾಸ ನೀಲಗಾರ, ಅಶೋಕ ಗಡಗಿ, ಭವಾನಿ ಬೆಟಗೇರಿ, ನಾಗಪ್ಪ ದೇಶಣ್ಣವರ, ವಿಜಯ ಸಜ್ಜನರ, ಶಿವು ಹುಲ್ಲೂರ, ಸುರೇಶ ಜಗ್ಗಲ, ರವಿ ಸಂಗನಬಶೆಟ್ಟರ್, ಬಸವರಾಜ ಧರ್ಮಾಯತ, ಮಲ್ಲಯ್ಯ ಮಹಾಪುರುಷಮಠ, ರಮೇಶ ತಳವಾರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ತಾಲೂಕು ಸುತ್ತಿದ ಬೈಕ್ ರ್ಯಾಲಿ: ಕೆಂಪು, ಹಳದಿ ಬಣ್ಣದ ಕನ್ನಡದ ಧ್ವಜವನ್ನು ಬೈಕ್ಗಳಿಗೆ ಕಟ್ಟಿಕೊಂಡು, ಕರ್ನಾಟಕ ಮಾತಾ ಕೀ ಜೈ, ಕನ್ನಡ ಬಾಷೆ ರಕ್ಷಣೆಯಾಗಲಿ, ಕನ್ನಡ ಸಾಹಿತ್ಯ ಉತ್ತುಂಗಕ್ಕೇರಲಿ ಮತ್ತು ಪಟ್ಟಣದಲ್ಲಿ ಜರುಗುವ ಸಮ್ಮೇಳನದ ಯಶಸ್ವಿಗೊಳ್ಳಲಿ ಎಂಬ ಘೋಷಣೆಗಳೊಂದಿಗೆ ಯುವ ಪಡೆ ತಾಲೂಕಿನಾದ್ಯಂತ ಸಂಚರಿಸಿ ಎಲ್ಲೆಡೆ ಕನ್ನಡ ಕಂಪು ಪಸರಿಸಿತು. ತಾಲೂಕಿನ ಗಜೇಂದ್ರಗಡ, ಬೆಳವಣಕಿ ಮತ್ತು ರೋಣ ಪಟ್ಟಣದದಿಂದ 3 ಕಡೆಗಳಿಂದ ಪ್ರಾರಂಭವಾದ ಬೈಕ್ ರ್ಯಾಲಿಯಲ್ಲಿ 200ಕ್ಕೂ ಹೆಚ್ಚು (ಒಟ್ಟು 600ಕ್ಕೂ ಹೆಚ್ಚು) ಬೈಕ್ಗಳಿದ್ದವು.
ಬೈಕ್ ರ್ಯಾಲಿಯು ರೋಣ ತಾಲೂಕಿನ ಅಬ್ಬಿಗೇರಿ, ನರೇಗಲ್, ನಿಡಗುಂದಿ, ಸಂಕನೂರ, ಕಳಕಾಪುರ, ಇಟಗಿ, ಮುಸಿಗೇರಿ, ಹಿರೇಹಾಳ, ನೆಲ್ಲೂರ, ಕೊತಬಾಳ, ಹುಲ್ಲೂರ, ಮುದೇನಗುಡಿ, ಹೊಳೆಆಲೂರ, ಕರಮುಡಿ, ಅಸೂಟಿ, ಕೌಜಗೇರಿ, ಯಾವಗಲ್ಲ, ಹಡಗಲಿ, ಮಲ್ಲಾಪುರ, ಅರಹುಣಸಿ, ಚಿಕ್ಕಮಣ್ಣೂರ, ಹಿರೇಮಣ್ಣೂರ, ಬಾಸಲಾಪುರ, ಗಜೇಂದ್ರಗಡ, ಚಿಲೇಝರಿ, ಮ್ಯಾಕಲಝರಿ, ಕುಂಟೋಜಿ, ಶಾಂತಗೇರಿ, ಬೊಮ್ಮಸಾಗರ ಮುಂತಾದ ಗ್ರಾಮಗಳಲ್ಲಿ ಸಂಚರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.