ಚಿರತೆ ಹಾವಳಿ ತಡೆಯಿರಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 19
ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಹಾಗೂ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಪದೇ ಪದೇ ಚಿರತೆ ದಾಳಿ ಮಾಡುತ್ತಿದ್ದು, ಇದರಿಂದ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಡೋಣಿ ಗ್ರಾಮದ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಡೋಣಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತವಲಯ ಅರಣ್ಯದ ಕಾಡು ಪ್ರಾಣಿ ಚಿರತೆಯು ಸುಮಾರು ದಿನಗಳಿಂದ ವಾಸವಾಗಿದ್ದು, ಈ ಅರಣ್ಯದಲ್ಲಿ ಹೊಟ್ಟೆಗೆ ಆಹಾರ ನೀರು ಇಲ್ಲದ ಸಲುವಾಗಿ ಚಿರತೆಯು ಡೋಣಿ ಸಮೀಪದ ಹನುಮಂತಗೌಡ ಪೀಡ್ಡನಗೌಡ್ರ ಮನೆಯಲ್ಲಿ ತಿಂಗಳಲ್ಲಿ 4 ದನಗಳನ್ನು ಹಾಗೂ 2 ನಾಯಿಗಳನ್ನು ತಿಂದಿದೆ. ಸುಕ್ಷೇತ್ರ ನಂದಿವೇರಿಮಠದ 3 ಆಕಳುಗಳನ್ನು ಹಾಗೂ ಹಳೆಮಠದ 3 ಕರು ತಿಂದಿದೆ. ಅರಣ್ಯ ಇಲಾಖೆಯವರು ಪಂಚನಾಮ ಮಾಡಿ ಚಿರತೆಯ ಹಾವಳಿವಿರುವುದು ಕಂಡುಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿ ಒಂದು ವಾರ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ, ದಿನದಿಂದ ದಿನಕ್ಕೆ ಚಿರತೆ ಹಾವಳಿ ಮಿತಿಮೀರುತ್ತಿದ್ದು ಡೋಣಿ ಸಮೀಪದ ರೈತರ ಹೊಲಗಳಿಗೆ ಹಾಡುಹಗಲೇ ಬರುತ್ತಿದ್ದು ಜನರು ಭಯಭೀತರಾಗಿ ಹೊಲಗಳಿಗೆ ಹೋಗುವುದನ್ನು ಬಿಡುತ್ತಿದ್ದಾರೆ. ಆದ್ದರಿಂದ ಚಿರತೆಗಳನ್ನು ಸೆರೆಹಿಡಿದು ಅರಣ್ಯ ಇಲಾಖೆಯು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಹಾಗೂ ಒಂದು ಆಕಳುಗೆ ರು. 25 ಸಾವಿರಗಳಂತೆ 4 ಆಕಳುಗಳ ಪರಿಹಾರವನ್ನು ಸಂಬಂಧಿಸಿದ ರೈತರಿಗೆ ಅರಣ್ಯ ಇಲಾಖೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಡೋಣಿ ಗ್ರಾಮದ ರೈತ ಪರಸಪ್ಪ ಬೆಳ್ಳಿ, ನಿಂಗಯ್ಯ ಮುತ್ತಾಳಮಠ, ಕೆ.ಎಚ್. ಪಾಟೀಲ, ಸಿದ್ದಲಿಂಗನಗೌಡ ಪಾಟೀಲ, ಲಿಂಗನಗೌಡ ಹರ್ತಿ, ಹನುಮಂತಗೌಡ ಪಿಡ್ಡನಗೌಡ್ರ, ಬಸವರಾಜ ಚಲವಾದಿ, ಅಲ್ಲಾಭಕ್ಷ ದೊಡ್ಡಮನಿ, ಮಲ್ಲಪ್ಪ ಗೋಡಿ, ಸಂತೋಷ ಕಬಾಡರ ಸೇರಿದಂತೆ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

