ಧೈರ್ಯ ತುಂಬುವ ಸಾಹಿತ್ಯ ರಚಿಸಿ
ಶಿರಹಟ್ಟಿ: ಸಾಮಾಜಿಕ ಹಾಗೂ ಆರ್ಥಿಕ ತಲ್ಲಣಗಳಿಗೆ ಪರಿಹಾರ ಸೂಚಿಸಬಲ್ಲಂತಹ ಹಾಗೂ ವ್ಯಕ್ತಿ ಸಮಾಜಕ್ಕೆ ಸವಾಲುಗಳನ್ನು ಎದುರಿಸಬಲ್ಲಂತಹ ಧೈರ್ಯತುಂಬುವ ಸಾಹಿತ್ಯ ರಚನೆಯಾಗಬೇಕು. ಇದಕ್ಕೆ ಸಮ್ಮೇಳನಗಳು ಸ್ಫೂರ್ತಿ ನೀಡುವಂತಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಜಿ.ಎಂ. ಶಿರಹಟ್ಟಿ ಹೇಳಿದರು.
ಬುಧವಾರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಶಿರಹಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ಕನ್ನಡ ಕ್ರಮೇಣ ಕರಗುತ್ತಿದೆ. ಅಳಿವಿನ ಅಂಚಿನಲ್ಲಿ ಇಲ್ಲದಿದ್ದರೂ ಅಪಾಯದ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಟ್ಟುವ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ. ಕನ್ನಡ ಎಂಬುದು ಒಂದು ಭಾಷೆಯ ಹೆಸರು ಮಾತ್ರವಲ್ಲ. ಅದೊಂದು ಸಾಹಿತ್ಯದ ಹೆಸರು. ಸಂಸ್ಕೃತಿಯ ಹೆಸರು. ಜನಾಂಗದ ಮತ್ತು ಜನಜೀವನದ ಹೆಸರು ಎಂಬ ವಿಶಾಲಾರ್ಥದಲ್ಲಿ ನಾವು ಚಿಂತಿಸಬೇಕಾಗಿದೆ. ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು ಎಂದು ಹೇಳಿದರು.
ಓದುಗರಿಗೆ ಉಪಯೋಗವಾಗುವ ಸಾಹಿತ್ಯ ರಚಿಸಿ: ಸಾಹಿತಿಗಳಲ್ಲಿ ಕೆಲವೇ ಕೆಲವರು ಅದರಲ್ಲೂ ಕೆಲವು ಹಿರಿಯ ಸುದೀರ್ಘ ಸಾಹಿತ್ಯ ರಚನೆಯಲ್ಲಿ ತೊಡಗಿ ವಿಶ್ರಾಂತಿ ಪಡೆಯುತ್ತಾ ಅಡ್ನಾಡಿ ಹೇಳಿಕೆಗಳನ್ನು ನೀಡುತ್ತಾ ಪತ್ರಿಕೆಗಳ ಪುಟಗಳಲ್ಲಿ ಕಿರುಪರದೆಗಳ ಮೇಲೆ ಹರಿದಾಡಿ ಓದುಗರ ನಡುವಿನ ಸಾಮರಸ್ಯಗಳನ್ನು ಕದಡುತ್ತಿದ್ದಾರೆ. ಇಂತಹವರನ್ನು ತ್ಯಜಿಸಲು ಇಂದಿನ ಓದುಗರು ಸಿದ್ದರಾಗಬೇಕು. ಲೇಖಕರು, ಬರಹಗಾರರು ಓದುಗರಿಗೆ ಉಪಯೋಗವಾಗುವ ಅವರು ಬಯಸುವ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದರು.
ಸಾಹಿತಿಗಳಲ್ಲಿ ಕೆಲವರು ಸುದೀರ್ಘ ಸಾಹಿತ್ಯ ರಚನೆಯಲ್ಲಿ ತೊಡಗಿ ವಿಶ್ರಾಂತಿ ಪಡೆಯುತ್ತಾ ಅಡ್ನಾಡಿ ಹೇಳಿಕೆಗಳನ್ನು ನೀಡುತ್ತಾ ಪತ್ರಿಕೆಗಳ ಪುಟಗಳಲ್ಲಿ ಕಿರುಪರದೆಗಳ ಮೇಲೆ ಹರಿದಾಡಿ ಓದುಗರ ನಡುವಿನ ಸಾಮರಸ್ಯ ಕದಡುತ್ತಿದ್ದಾರೆ. ಇಂತಹವರನ್ನು ತ್ಯಜಿಸಲು ಇಂದಿನ ಓದುಗರು ಸಿದ್ಧರಾಗಬೇಕು. ಲೇಖಕರು, ಬರಹಗಾರರು ಓದುಗರಿಗೆ ಉಪಯೋಗವಾಗುವ, ಅವರು ಬಯಸುವ ಸಾಹಿತ್ಯ ರಚನೆಗೆ ಮುಂದಾಗಲಿ.
- ಜಿ.ಎಂ. ಶಿರಹಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

