ಶಿವಾಜಿ ಆದರ್ಶ ಪಾಲಿಸಿ
ಗದಗ: ಶಿವಾಜಿ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಮುಧೋಳದ ಸಾಹಿತಿ ಸಿದ್ದು ದಿವಾಣ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಗೊಜನೂರ ಬಿಲ್ಡಿಂಗ್ ಪಕ್ಕದ ಶಿವಾಜಿ ಪಾರ್ಕ್ದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಶಿವಾಜಿಯವರು ಭಾರತೀಯ ಇತಿಹಾಸದಲ್ಲಿ ಪ್ರಜಾಹಿತ ರಕ್ಷಣೆ, ಕರ್ತವ್ಯ ನಿಷ್ಠೆ, ರಾಷ್ಟ್ರಪ್ರೇಮ, ನ್ಯಾಯವಂತ, ಧರ್ಮಶ್ರದ್ಧೆ, ಶೂರತನಕ್ಕೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪರಧರ್ಮ ಸಹಿಷ್ಣುತೆಯಳ್ಳವರಾಗಿದ್ದರು. ಅವರ ರಾಷ್ಟ್ರಪ್ರೇಮ, ತತ್ವಗಳು ಯುವಪೀಳಿಗೆಗೆ ದಾರಿದೀಪವಾಗಲಿ ಎಂದರು.
ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಕಾರ್ಯಕ್ರಮ ಉದ್ಘಾಟಿಸಿದರು. ಗದಗ ಜಿಲ್ಲಾ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಖಟವಟೆ ಮಾತನಾಡಿದರು. ನಂತರ ಶಿವಾಜಿ ಗಾರ್ಡನ್ ಉದ್ಘಾಟಿಸಲಾಯಿತು. ನಗರಸಭೆ ಸದಸ್ಯ ಎಂ.ಸಿ. ಶೇಖ, ಸಿಪಿಐ ಬೆಂತೂರು, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೋಹನ ಗ್ವಾರಿ, ವಂದನಾ ವರ್ಣೇಕರ್, ಸುಧೀರಸಿಂಹ ಘೋರ್ಪಡೆ, ಬಿ.ವಿ. ಪಾಟೀಲ, ಪರಶುರಾಮ ಜಾಧವ, ಮನೋಹರ ಗಾಯಕವಾಡ, ತೋಟುಸಾ ಭಾಂಡಗೆ, ಡಾ. ರಾಜೀವ ರೋಖಡೆ, ಎನ್.ಆರ್. ಚವ್ಹಾಣ ಇತರರಿದ್ದರು.
ಅಪರ ಜಿಲ್ಲಾಧಿಕಾರಿ ನಾಗರಾಜ ಸ್ವಾಗತಿಸಿದರು. ಆನಂದ ಎಲಿಗಾರ ನಿರೂಪಿಸಿದರು. ಎಸ್.ಆರ್. ಗಣಾಚಾರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

