ಸಂಘಟನೆಯಿಂದ ಸಮಸ್ಯೆ ಎದುರಿಸಲು ಸಾಧ್ಯ
ನರಗುಂದ: ಸಮುದಾಯದ ಪ್ರತಿ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಅದೇ ರೀತಿ ಗ್ರಾಹಕರಿಗೂ ಪ್ರತಿದಿನ ಹಲವಾರು ಸಮಸ್ಯೆಗಳು ಎದುರಾಗಲಿದ್ದು, ಅವುಗಳನ್ನು ಸಂಘಟನೆಯಿಂದ ಮಾತ್ರ ಎದುರಿಸಲು ಸಾಧ್ಯ ಎಂದು ಭೈರಹನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ಭಾನುವಾರ ಪಟ್ಟಣದ ಕಂಠಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ತಾಲೂಕು ಗ್ರಾಹಕ ವಸ್ತುಗಳ ವಿತರಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಮಾರುಕಟ್ಟೆ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಗ್ರಾಹಕರಿಗಿದ್ದು, ಅದನ್ನು ಸರಿಪಡಿಸಲು ಎಲ್ಲ ವಿತರಕರು ತಾಲೂಕು ಮಟ್ಟದ ಸಂಘಟನೆ ಕಟ್ಟಿಕೊಂಡು ತಮಗೆ ಬರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದರು.
ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಗ್ರಾಹಕರು ಇಂದು ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ತಾಲೂಕು ಗ್ರಾಹಕ ವಸ್ತುಗಳು ವಿತರಕರ ಸಂಘ ಪ್ರಾರಂಭಿಸಿರುವ ಕ್ರಮ ಉತ್ತಮವಾಗಿದೆ ಎಂದರು.
ತಾಲೂಕು ಗ್ರಾಹಕ ವಸ್ತುಗಳ ವಿತರಕರ ಸಂಘದ ಅಧ್ಯಕ್ಷ ಎಸ್.ಜಿ. ಕಂಠಿ, ಉಪಾಧ್ಯಕ್ಷ ಚನ್ನು ನಂದಿ, ಜಿಲ್ಲಾಧ್ಯಕ್ಷ ಎಸ್.ಈ. ಬಾಗೇವಾಡಿ, ರಾಜೇಶ ಹೊಸಕೇರಿ, ಪಿ.ಎಂ. ರಾಜಶೇಖರ, ವಿಜಯ ಆನೆಗುಂದಿ, ಗುರು ನಾಯ್ಕರ, ಗುಡಿಸಾಗರ, ಪರಶುರಾಮ, ನಾಗರಾಜ ಚಳಗೇರಿ, ಜಗದೀಶ ಹೆಬಸೂರ, ಡಿ.ಎಫ್. ಜುಲಾನೆ, ರಾಜು ಸಾವಳಕಾರ, ಪಿ.ಎಚ್. ಪೊಲೀಸ್‌ಪಾಟೀಲ, ವೀರೇಶವಿ.ಕೆ., ಪವನ ಗುಡಿಸಾಗರ, ನವೀನ ಗುಡಿಸಾಗರ, ಬದರಿನಾಥ ಗುಡಿಸಾಗರ, ರಮೇಶ ಹೊರಮನಿ ಮುಂತಾದವರು ಇದ್ದರು. ಸಂಗಮೇಶ ಕಂಠಿ ಸ್ವಾಗತಿಸಿದರು. ಸಂತೋಷ ಗೋವೇಶ್ವರ ನಿರೂಪಿಸಿದರು. ವೆಂಕಟೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

