ಶರಣರಿಂದ ಮಹಿಳೆಗೆ ಧಾರ್ಮಿಕ, ಶೈಕ್ಷಣಿಕ ಸ್ವಾತಂತ್ರ್ಯ
ಗದಗ: ಹಿಂದೆ ಸಂಕಷ್ಟದಲ್ಲಿದ್ದ ಮಹಿಳೆಯ ಬದುಕಿಗೆ ಬೆಳಕಾಗಿ ಬಂದು ಅವಳಿಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಮುಕ್ತ ಸ್ವಾತಂತ್ರವನ್ನು ನೀಡಿ, ಅನುಭವ ಮಂಟಪದ ಮೂಲಕ ದಾರಿ ತೋರಿಸಿದವರು ಬಸವಾದಿ ಶರಣರು ಎಂದು ಗದಗ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಕವಿತಾ ದಂಡಿನ ಹೇಳಿದರು.
ನಗರದ ಆಧ್ಯಾತ್ಮ ವಿದ್ಯಾಶ್ರಮದಲ್ಲಿ ಶುಕ್ರವಾರ ನಡೆದ ಜಾನಪದ ಹಾಗೂ ಅನುಭಾವ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಜಾಗತೀಕರಣ, ವ್ಯಾಪಾರೀಕರಣಗಳ ಮಧ್ಯ ಇಂದು ನಾವು ಯಾಂತ್ರಿಕ ಬದುಕನ್ನು ಸಾಗಿಸುತ್ತಿದ್ದೇವೆ. ನಮ್ಮ ಸಂಸ್ಕೃತಿ ಹಾಗೂ ಧರ್ಮಗಳನ್ನು ಹಂತ ಹಂತವಾಗಿ ಮರೆಯುತ್ತಿದ್ದೇವೆ. ಮಠ ಮಾನ್ಯಗಳು ಜಾತಿ, ಮತ, ಭೇದಗಳನ್ನು ಕಿತ್ತೊಗೆದು ಧಾರ್ಮಿಕ ಹಾಗೂ ನೀತಿಯುಕ್ತ ಮೌಲ್ಯಗಳನ್ನು ಎಲ್ಲರ ಬಾಳಲ್ಲಿ ಬಿತ್ತುವ ವಿಶ್ವವಿದ್ಯಾಲಯಗಳಾಗಿವೆ ಎಂದರು. ಸಾನ್ನಿಧ್ಯ ವಹಿಸಿದ್ದ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕತೆಗೆ ವಿಶಿಷ್ಟ ಸ್ಥಾನವಿದ್ದು, ನಮ್ಮ ಸಂಸ್ಕೃತಿ ಇತರ ದೇಶಗಳಿಗೆ ಮಾದರಿಯಾಗಿದೆ. ಇಂದು ಎಲ್ಲೆಡೆ ನಡೆಯುತ್ತಿರುವ ಅನ್ಯಾಯ ಅನಾಚಾರಗಳಿಗೆ ಕಡಿವಾಣ ಹಾಕಲು ಧಾರ್ಮಿಕತೆಯ ನೆಲೆಗಟ್ಟಿನ ಅವಶ್ಯಕತೆಯಿದೆ. ಜಾತ್ರೆಗಳು ಜನರಲ್ಲಿ ಐಕ್ಯತೆ ಮತ್ತು ಏಕತೆಯನ್ನು ಬಿಂಬಿಸುತ್ತವೆ ಎಂದರು.
ರಾಣಿಬೆನ್ನೂರಿನ ಸಿದ್ಧಾರೂಢಮಠದ ಈಶ್ವರಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ರಂಜಿತಾ ಅಂಗಡಿ ಹಾಗೂ ಕೊತಬಾಳದ ಅರುಣೋದಯ ಕಲಾತಂಡದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಗದುಗಿನ ಅಡವೇಂದ್ರ ಮಠದ ಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅತಿಥಿಗಳಾಗಿ ನಗರಸಭೆ ಸದಸ್ಯ ಅನಿಲ ಗರಗ ಆಗಮಿಸಿದ್ದರು. ಶಿಕ್ಷಕಿ ಗೀತಾಂಜಲಿ ಮೆಣಸಿನಕಾಯಿ ಪ್ರಾರ್ಥಿಸಿದರು. ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವಿ. ಸಜ್ಜನಶೆಟ್ಟರ್ ಸ್ವಾಗತಿಸಿದರು. ಬಿ.ಬಿ. ಹೂಗಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

