ಕಾದಂಬರಿ ಪರಂಪರೆಗೆ ಹೊಸದೃಷ್ಟಿಕೋನ ನೀಡಿದ ಭೈರಪ್ಪ
ಕನ್ನಡಪ್ರಭ ವಾರ್ತೆ, ಗದಗ, ಫೆ. 20
ಡಾ. ಎಸ್.ಎಲ್. ಭೈರಪ್ಪನವರು ಕಾದಂಬರಿ ಪರಂಪರೆಗೆ ಹೊಸ ದೃಷ್ಟಿಕೋನ ನೀಡಿದವರು ಎಂದು ವಿಡಿಎಸ್ಟಿಸಿ ಬಾಲಕಿಯರ ಕಾಲೇಜಿನ ಮುಕ್ತಾ ಉಡುಪಿ ಹೇಳಿದರು.
ಅವರು ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕಸಾಪದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಭೈರಪ್ಪನವರ ಕಾದಂಬರಿಗಳ ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದರು.
ಭೈರಪ್ಪನವರು ಕಾದಂಬರಿಗಳಲ್ಲಿ ಭಾರತೀಯ, ಸಂಸ್ಕೃತಿ, ದಾರ್ಶನಿಕತೆ, ಭಾರತೀಯತ್ವ, ವೈಚಾರಿಕತೆ, ಬದಲಾವಣೆಯ ವಂಶ, ಸತ್ಯ, ಮಾನಸಿಕ ಸಂಘರ್ಷ, ಸಾಮಾಜಿಕ ಪರಿಸರ, ಜಾತಿಯ ವೈರುಧ್ಯ, ಕೆಟ್ಟು ಕೊಳೆತು ನಾರುವ ಸಾಮಾಜಿಕ ವ್ಯವಸ್ಥೆ, ಹಲವಾರು ಸಮಾಜದ ಮುಖಗಳನ್ನು ಬಿಂಬಿಸಿ, ಕನ್ನಡ ನಾಡಿನ ಕಾದಂಬರಿ ಪರಂಪರೆಗೆ ಹೊಸ ದೃಷ್ಟಿಕೋನ ನೀಡಿ, ಕರ್ನಾಟಕಕ್ಕೆ, ಕನ್ನಡಕ್ಕೆ ಘನತೆ ತಂದ ಕೀರ್ತಿ ಭೈರಪ್ಪನವರಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡ್ರ ಮಾತನಾಡಿದರು. ಜಿ.ಡಿ. ಗುಡ್ಡದ ಸ್ವರಚಿತ ಕವನ ವಾಚಿಸಿದರು. ಪ್ರಾ. ಕೆ.ಎಚ್. ಬೇಲೂರ, ಕೆ.ವಿ. ಕನ್ನೂರ, ಬಿ.ಎಫ್. ಚೇಗರಡ್ಡಿ, ಎಸ್.ಎನ್. ಹೊಟ್ಟಿನ, ವಿನಾಯಕ ಕಮತದ, ಸಿ.ಬಿ. ಮಾಳಗಿ, ಎಸ್.ಎಸ್. ತಳ್ಳಿಹಾಳ, ವಿ.ಎನ್. ಬೇಂದ್ರೆ, ಎಸ್.ಎಸ್. ನರೇಗಲ್, ಗುಲಾಬಸಿಂಗ್ ದಢೇಕರ, ಸೋಮಶೇಖರ ದೊಡಮನಿ, ಬಸನಗೌಡ ದಾನಪ್ಪಗೌಡ್ರ, ಸುಧೀರ ಪಿಡ್ಡಿ, ಸಂಜೀವಸ್ವಾಮಿ, ಅ.ದ. ಕಟ್ಟಿಮನಿ, ಸುಚಿತಕುಮಾರ, ಆನಂದ ದೊಡ್ಡೂರು, ವಿ.ಬಿ. ಪಠಾಣಿ, ಕನಕರಾಯ ಜಿಗಳೂರ, ರಾಘವೇಂದ್ರ, ಶರಣಪ್ಪ ಹೊಸಂಗಡಿ, ರಾಜಶೇಖರ ಕಾಲವಾಡಮಠ, ದೇವೇಂದ್ರ ಮಾಧವನವರ, ಬಸವರಾಜ ವಾರಿ, ಶರಣಪ್ಪ ಬಾಲಣ್ಣವರ, ಮಲ್ಲಿಕಾರ್ಜುನ ಪೂಜಾರ, ಬಿ.ಡಿ. ಕಿಲಬನವರ, ಎಂ.ಪಿ. ರಮೇಶ ಮುಂತಾದವರು ಪಾಲ್ಗೊಂಡಿದ್ದರು. ಶಿಕ್ಷಕಿ ಲಲಿತಾ ಬೇಲೂರ ಪ್ರಾರ್ಥಿಸಿದರು ಡಾ. ರಾಜಶೇಖರ ದಾನರಡ್ಡಿ ಸ್ವಾಗತಿಸಿದರು. ಮಲ್ಲೇಶ ಡಿ.ಎಚ್.ಎಚ್. ನಿರೂಪಿಸಿದರು. ಡಾ. ರಾಜೇಂದ್ರ ಗಡಾದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

