ಗದಗ

ಅಪ್ಪಟ ಉತ್ತರ ಕರ್ನಾಟಕದ ಊಟಕ್ಕೆ ಮಾರುಹೋದ ಜನತೆ

Published On :

 ಗಜೇಂದ್ರಗಡ: ರೋಣ ಪಟ್ಟಣದಲ್ಲಿ ನಡೆದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಹಸ್ರಾರು ಕನ್ನಡ ಅಭಿಮಾನಿಗಳಿಗೆ ಅಪ್ಪಟ ಉತ್ತರ ಕರ್ನಾಟಕ ಗ್ರಾಮೀಣ ಜನರ ಪ್ರಮುಖ ಖಾದ್ಯವಾದ ಗೋದಿಹುಗ್ಗಿ, ಕಟಕ್ ರೊಟ್ಟಿ, ಬದನೆಕಾಯಿ, ಹೆಸರುಕಾಳು ಪಲ್ಲ, ಶೇಂಗಾ, ಗುರೇಳ್ಳ ಚಟ್ನಿ ಉಪ್ಪಿನಕಾಯಿ ರುಚಿ ಸವಿದರು.
ಅಕ್ಷರ ಜಾತ್ರೆಗೆ ಆಗಮಿಸಿದ ಗಣ್ಯರಿಗೆ, ಜನರಿಗೆ ಈ ಗಂಡು ಮೆಟ್ಟಿನ ನೆಲದ ಸವಿಯೂಟದ ರುಚಿ ಉಣಿಸಿದರು. ತಾಲೂಕಿನ ಎಲ್ಲ ಮಹಿಳಾ ಸ್ವ-ಸಹಾಯ ಸಂಘ, ಸ್ತ್ರೀ ಶಕ್ತಿ ಗುಂಪು, ವಿವಿ ಮಹಿಳಾ ಮತ್ತು ಪುರುಷ ಸಂಘಟನೆಗಳಿಂದ ತಯಾರಿಸಿದ ರೊಟ್ಟಿ, ಚಟ್ನಿ, ಶೇಂಗಾ ಹೋಳಿಗೆ, ತಹರೆವಾರಿ ಕಾಯಿಪಲ್ಲೆ, ಹಪ್ಪಳ, ಸಂಡಿಗೆ, ಹಾಲು, ಮೊಸರು, ಉಪ್ಪಿನಕಾಯಿ, ತುಪ್ಪ ಇತ್ಯಾದಿ ಮೃಷ್ಟಾನ್ನ ಭೋಜನ ಸವಿದರು.
ಅಚ್ಚುಕಟ್ಟು: ವೇದಿಕೆಯ ಹೊರತು ಪಡಿಸಿ ಹೊರ ಜಾಗದಲ್ಲಿ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಿದ್ದರು. ಜನ ಸರದಿಯಲ್ಲಿ ನಿಂತು ನೆಮ್ಮದಿಯಿಂದ ಊಟ ಮಾಡಿದರು. ವಿವಿಐಪಿಗಳ ಊಟದ ವ್ಯವಸ್ಥೆಗೆ 40್ಢ10 ಅಳತೆಯ ಊಟದ ಹಾಲ್ ನಿರ್ಮಾಣವಾಗಿತ್ತು. ವಿಐಪಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಸುಸಜ್ಜಿತವಾದ ಪುರುಷರಿಗೆ 80್ಢ120 ಪೆಂಡಾಲ್ನಲ್ಲಿ 30 ಕೌಂಟರ್, ಮಹಿಳೆಯರಿಗೆ 40್ಢ60 ಪ್ರತ್ಯೇಕ ಪೆಂಡಾಲ್ನಲ್ಲಿ 10 ಕೌಂಟರ್ಗಳನ್ನು ನಿರ್ಮಿಸಿದ ಪರಿಣಾಮ ಜನ ಯಾವುದೇ ತೊಂದರೆ ಪಡದೆ ಊಟ ಮಾಡಿದರು. ಆಹಾರ ಸಮಿತಿ ಸದಸ್ಯರು ಜನತೆಗೆ ಊಣಬಡಿಸಿದರು.
ಹಬ್ಬದ ವಾತಾವರಣ: ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ತಿಂಗಳಿನಿಂದ ಪ್ರತಿದಿನ ಸಮ್ಮೇಳನದ ಯಶಸ್ವಿಗೆ ಶ್ರಮಿಸುವುದರೊಂದಿಗೆ 23 ಸಮಿತಿಗಳನ್ನು ರಚಿಸಿ ಅವುಗಳಿಗೆ ಸಮರ್ಪಕ ಕಾರ್ಯ ವಹಿಸಿದ ಪರಿಣಾಮ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ. ವಿವಿ ಸಂಘಟನೆ, ಸಂಘ, ಸಂಸ್ಥೆಗಳ ಮಹಿಳೆಯರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡಿರುವುದು ಅನುಕೂಲವಾಯಿತು. ರೋಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಶಾಸಕ ಜಿ.ಎಸ್. ಪಾಟೀಲರಿಂದ ವಿಶೇಷ ಪುರವಣಿ ಬಿಡುಗಡೆ
ರೋಣ: 6ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕುರಿತು 'ಕನ್ನಡಪ್ರಭ' ಹೊರತಂದ ನುಡಿ ಹಬ್ಬ ವಿಶೇಷ ಪುರವಣಿಯನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಶನಿವಾರ ಬೆಳಗ್ಗೆ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದ ನಂತರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ಕಲೆ ಹೀಗೆ ನಾಡನ್ನು ಕಟ್ಟುವ ನಿಟ್ಟಿನಲ್ಲಿ 'ಕನ್ನಡಪ್ರಭ' ಹಲವಾರು ದಶಕಗಳ ಕಾಲ ವಿಶೇಷ ಕೊಡುಗೆಯನ್ನು ನಾಡಿಗೆ ನೀಡಿದೆ. ಈ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿಯೂ ಅತ್ಯಂತ ಅಚ್ಚುಕಟ್ಟಾಗಿ ಜಿಲ್ಲೆ ಮತ್ತು ರೋಣ ತಾಲೂಕಿನ ಹತ್ತಾರು ವಿಶೇಷತೆಗಳನ್ನು ಒಳಗೊಂಡ ಸಂಗ್ರಹಯೋಗ್ಯ ಪುರವಣಿಯನ್ನು ರೂಪಿಸಿದ್ದು, ಜಿಲ್ಲೆ ಮತ್ತು ತಾಲೂಕಿನ ಸಾಹಿತ್ಯಿಕ ಕೊಡುಗೆ, ಸಮ್ಮೇಳನದಲ್ಲಿನ ವಿಶೇಷತೆಯನ್ನು ಪ್ರತಿಬಿಂಬಿಸುವಲ್ಲಿ ಪುರವಣಿ ಪ್ರಕಟಿಸಿದ 'ಕನ್ನಡಪ್ರಭ' ಸಿಬ್ಬಂದಿಯನ್ನು ಜಿಲ್ಲಾ ಕಸಾಪ ಹಾಗೂ ಸಾಹಿತ್ಯ ಸಮ್ಮೇಳನದ ಪರವಾಗಿ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.