ಗದಗ

ಬೇಡಿಕೆ ಈಡೇರಿಕೆಗೆ ನಾಳೆ ದೇವದಾಸಿಯರ ಧರಣಿ

Published On :

ಶಿರಹಟ್ಟಿ: ನೂರಾರು ವರ್ಷಗಳಿಂದ ಸಾಮಾಜಿಕ ಶೋಷಣೆಗೆ ಹಾಗೂ ಅನಿಷ್ಟ ಪದ್ಧತಿಗೆ ಬಲಿಯಾದ ದೇವದಾಸಿಯರ ವಿಮೋಚನೆಗಾಗಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ಫೆ. 24ರಂದು ಮಧ್ಯಾಹ್ನ 1.30ಕ್ಕೆ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಸಾಮಾಜಿಕ ಶೋಷಣೆಗೆ ಒಳಗಾದ ಮಹಿಳೆಯರ ವಿಮೋಚನೆ ಬಯಸುವ ಜಿಲ್ಲೆಯ ಹಾಗೂ ತಾಲೂಕುಗಳ ದಲಿತ ಮುಖಂಡರು, ಸಮಾಜದ ಹಿತ ಚಿಂತಕರು ಈ ಧರಣಿಯಲ್ಲಿ ಭಾಗವಹಿಸುವಂತೆ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಉಪಾಧ್ಯಕ್ಷೆ ಹಾಗೂ ಜ್ಯೋತಿ ಜಿಲ್ಲಾ ಮಟ್ಟದ ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷೆ ದುರಗಮ್ಮ ಹರಿಜನ, ಜಿಲ್ಲಾ ಉಪಾಧ್ಯಕ್ಷೆ ದೇವಕ್ಕ ಜೋಗಣ್ಣವರ ಹಾಗೂ ಸದಸ್ಯೆ ಶಂಕ್ರವ್ವ ದೊಡ್ಡಮನಿ, ಹುಲಿಗೆವ್ವ ಮಾತಿನ, ಯಲ್ಲವ್ವ ಅಡ್ಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಪಂಚಮಸಾಲಿ ಸಂಘ ಉದ್ಘಾಟನೆ ನಾಳೆ
ಶಿರಹಟ್ಟಿ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಫೆ. 24ರಂದು ಬೆಳಗ್ಗೆ 9ಕ್ಕೆ ವೀರಶೈವ ಪಂಚಮಸಾಲಿ ಸಂಘದ ಗ್ರಾಮ ಘಟಕ ಉದ್ಘಾಟನೆ, ವೀರರಾಣಿ ಕಿತ್ತೂರು ಚನ್ನಮ್ಮ 190ನೇ ವಿಜಯೋತ್ಸವ, ಸಂಘದ 34ನೇ ವಾರ್ಷಿಕೋತ್ಸವ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ತಾಲೂಕು ಪಂಚಮಸಾಲಿ ಕೋ-ಆಪ್ ಕ್ರೆಡಿಟ್ ಸೊಸೈಟಿ ಉದ್ಘಾಟನಾ ಸಮಾರಂಭ, ಸಮಾಜದ ಗಣ್ಯರಿಗೆ ಸನ್ಮಾನ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಗ್ರಾಮದ ಕೋಟೆ ಆವರಣದಲ್ಲಿ ಜರುಗಲಿವೆ. ಹರಿಹರ ಪೀಠದ ಜ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಬಸವರಾಜ ದಿಂಡೂರ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮ ಘಟಕದ ಅಧ್ಯಕ್ಷ ಡಾ. ಎಸ್.ಕೆ. ಪೊಲೀಸ್ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್ಗೆ ತಕ್ಕಪಾಠ: ಸಂಯುಕ್ತಾ ಬಂಡಿ
ಗಜೇಂದ್ರಗಡ: ಯುಪಿಎ ಸರ್ಕಾದ ದುರಾಡಳಿತದಿಂದಾಗಿ ದೇಶದ ಜನತೆ ಕಾಂಗ್ರೆಸ್ ನಾಯಕರಿಗೆ ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲೆಸಲಿದ್ದಾರೆ ಎಂದು ಸ್ನೇಹಾ ಮಹಿಳಾ ಮಂಡಳದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು. ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಈಚೆಗೆ ನಮೋ ಟೀ ಸ್ಟಾಲ್ ಉದ್ಘಾಟಿಸಿ ಮಾತನಾಡಿದರು.  ಕಾಂಗ್ರೆಸ್ ನಾಯಕರು ಚಹಾ ಮಾರುವವನು ದೇಶದ ಪ್ರಧಾನಿಯಾದರೆ ದೇಶದ ಮಾನ ಹರಾಜಾಗುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಆಡಳಿತವೆಂದರೆ ಹೇಗಿರಬೇಕು ಎನ್ನುವದನ್ನು ದೇಶಕ್ಕ ತೊರಿಸಿಕೊಟ್ಟಿರುವ ಒಬ್ಬ ಸಮರ್ಥ ನಾಯಕ ನರೇಂದ್ರ ಮೋದಿ ಎಂದು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದರು. ಕವಿತಾ ಜಾಲಿಹಾಳ, ದೀಪಾ ಗೋಯಲ್, ಸುಮಿತ್ರಾ ತೊಂಡಿಹಾಳ, ಗೀತಾ ಗಾಣಿಗೇರ, ಅಕ್ಕಮ್ಮ ಬಡಿಗೇರ, ರೇಣುಕಾ ಗೌಡರ, ಮಂಜುಳಾ ಗಾರಗಿ, ಬಾಳು ಗೌಡರ ಇತರರಿದ್ದರು.

ಮೋದಿ ನಂಬಿ ಮೋಸಹೋಗಬೇಡಿ: ಹಡಪದ
ಗಜೇಂದ್ರಗಡ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಲು ಹೊರಟಿದ್ದು, ಮೋದಿ ನಂಬಿ ಮೋಸ ಹೋಗಬೇಡಿ. ಮೋದಿ ಕೇವಲ ಬಣ್ಣದ ಮಾತಿಗಷ್ಟೆ ಸೀಮಿತ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಹಾಗೂ ಪುರಸಭೆ ಸದಸ್ಯ ಎಂ.ಎಸ್. ಹಡಪದ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನರೇಂದ್ರ ಮೋದಿಗೆ ದೇಶದ ಅಭಿವೃದ್ಧಿಯ ಸ್ಪಷ್ಟ ಅರಿವಿಲ್ಲ ಎಂದಿದ್ದಾರೆ. ಬಿಜೆಪಿ ಕಾಂಗ್ರೆಸ್ಗಿಂತ ಭಿನ್ನವಾದ ಪಕ್ಷ ಜತೆಗೆ ಭವ್ಯ ರಾಷ್ಟ್ರದ ಸಮಗ್ರ ಪರಿಕಲ್ಪನೆಗೆ ಪೂರಕವಾಗಿ ಆಡಳಿತ ನಡೆಸುತ್ತಿರುವ ಎಡಪಕ್ಷಗಳು ಕೇರಳ, ಪಶ್ಚಿಮ ಬಂಗಾಳ ಹಾಗೂ ತ್ರಿಪುರ ರಾಜ್ಯಗಳಲ್ಲಿನ ದಕ್ಷ ಮತ್ತು ಭ್ರಷ್ಟಾಚಾರ ರಹಿತ ಜನಪರ ಆಡಳಿತ ನೀಡುತ್ತಿವೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಜನತೆ ಬೆಂಬಲಿಸಲು ಸಂಕಲ್ಪ ತೊಟ್ಟಿದ್ದಾರೆ ಎಂದರು.

ಕುಟುಂಬ ಗೌರವಕ್ಕೆ ಶೌಚಾಲಯ ಅಗತ್ಯ: ಅಶ್ವಿನಿ
ಗದಗ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕೆಂದು ಗ್ರಾಪಂ ಪಿಡಿಒ ಅಶ್ವಿನಿ ಕುರಡಗಿ ಹೇಳಿದರು. ಶನಿವಾರ ತಾಲೂಕಿನ ಅಡವಿಸೋಮಾಪುರ ಗ್ರಾಪಂ ವ್ಯಾಪ್ತಿಯ ಪಾಪನಾಶಿ ಗ್ರಾಮದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ನೈರ್ಮಲ್ಯ ಅರಿವು ಸಪ್ತಾಹ ಅಂಗವಾಗಿ ಜರುಗಿದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ರಮೇಶ ಲಮಾಣಿ, ಕೆ.ಎಸ್. ಹಾದಿಮನಿ, ಈಶಪ್ಪ ನಾಯ್ಕರ, ರಾಮಪ್ಪ ವರವಿ, ನೀಲವ್ವ ಚಿಲವಾಡಗಿ, ಎಸ್ಡಿಎಂಸಿ ಅಧ್ಯಕ್ಷ ಈಶಪ್ಪ ಇಟಗಿ, ತುಕಾರಾಮ ಹುಲಗಣ್ಣವರ, ಮಹಾಂತೇಶ ದೊಡವಾಡ, ಅಲ್ಲಾಸಾಬ ಹಳ್ಳಿಕೇರಿ ಹಾಗೂ ಗ್ರಾಪಂ ಸಿಬ್ಬಂದಿ, ಪ್ರಧಾನ ಗುರುಮಾತೆ ಎಲ್.ಪಿ. ಕಟ್ಟಿಮನಿ ಹಾಗೂ ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರು, ಊರಿನ ನಾಗರಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಹೊಳೆಮಣ್ಣೂರ: ಸಾಂಸ್ಕೃತಿಕ ಸೌರಭ
ಹೊಳೆಆಲೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಮತ್ತು ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಹೊಳೆಮಣ್ಣೂರ ಸಹಯೋಗದಲ್ಲಿ ಈಚೆಗೆ ಎಚ್.ವಿ. ಮಳಲಿ ಅವರಿಂದ ಸಾಂಸ್ಕೃತಿಕ ಸೌರಭ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಎನ್.ಡಿ. ನದಾಫ್ ಮಾತನಾಡಿ, ಸಂಗೀತ ಕಠಿಣ ಪರಿಶ್ರಮದಿಂದ ಹಗಲಿರುಳೆನ್ನದೆ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಮಾತ್ರ ಸಿದ್ಧಿಸುವಂತಹದು ಎಂದರು. ಎಂ.ಬಿ. ಜಂಗಣ್ಣವರ, ಆರ್.ಡಿ.ನದಾಫ್, ಎಸ್.ಎಸ್. ಸ್ಥಾವರಮಠ ಎಂ.ಬಿ. ದೇವರಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಎಂ.ಬಿ. ಪಾತ್ರೋಟ, ಎಂ.ಎಂ. ನದಾಫ್ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಪಿ.ಸಿ. ಸೊಲಬಣ್ಣವರ ಸ್ವಾಗತಿಸಿದರು. ಎಂ.ವಿ. ನೀಲವಾಣಿ ನಿರೂಪಿಸಿದರು. ಎಸ್.ಕೆ. ಮುಲ್ಲಾ ವಂದಿಸಿದರು.

ದೇಶದ ಪ್ರಗತಿಗೆ ಯುವಕರ ಪಾತ್ರ ಅತ್ಯವಶ್ಯ: ಪಾಟೀಲ
ಗಜೇಂದ್ರಗಡ:  ದೇಶದ ಪ್ರಗತಿಯಲ್ಲಿ ಯುವಕರ ಪಾತ್ರ ಅತ್ಯಂತ ಪ್ರಾಮುಖ್ಯ ಈ ನಿಟ್ಟಿನಲ್ಲಿ ಯುವ ಸಮೂಹ ನಿಸ್ವಾರ್ಥ ಸೇವೆ ಅಳವಡಿಸಿಕೊಂಡು ಭವ್ಯ ರಾಷ್ಟ್ರದ ಕನಸು ನನಸಾಗಿಸಿ ಎಂದು ಹಾವೇರಿ ಲೋಕಸಭಾ ಮತಕ್ಷೇತ್ರ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು. ಪಟ್ಟಣದ ದುರ್ಗಾ ವೃತ್ತದಲ್ಲಿ ಶುಕ್ರವಾರ ಸಂಜೆ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿದರು. ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಸುಭಾನಸಾಬ ಆರಗಿದ್ದಿ, ಜಿಲ್ಲಾ ನೆಹರೂ ಯುವ ಕೇಂದ್ರ ಸಮನ್ವಯ ಅಧಿಕಾರಿ ಬಿ. ಗೋವಿಂದಭಟ್, ಶ್ರೀಕಾಂತ ಅವಧೂತ, ಎಫ್.ಎಸ್. ಕರಿದುಗನವರ, ರವಿ ಗಡೆದವರ, ಶಶಿಧರ ವಕ್ಕಲರ, ಹಸನ ತಟಗಾರ, ಉಮೇಶ ರಾಠೋಡ, ಮುರ್ತುಜಾ ಡಾಲಾಯತ್ ಮುಂತಾದವರು ಉಪಸ್ಥಿತರಿದ್ದರು.

ಗಜೇಂದ್ರಗಡ: ವಾರ್ಷಿಕ ಸ್ನೇಹ ಸಮ್ಮೇಳನ
ಗಜೇಂದ್ರಗಡ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಸಮನ್ವಯತೆ ಅಗತ್ಯವಾಗಿದೆ ಎಂದು ಕೆಎಸ್ಎಸ್ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್.ದಂಡಿನ ಹೇಳಿದರು. ಸ್ಥಳೀಯ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚಿಗೆ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಪ್ರಾಚಾರ್ಯ ಎಚ್.ಎನ್. ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಎಫ್.ಎಸ್. ಕರಿದುರಗನವರ, ಹಸನ ತಟಗಾರ, ಪುರಸಭೆ ಸದಸ್ಯ ಶರಣಪ್ಪ ರೇವಡಿ, ಎಲ್.ಕೆ. ಹಿರೇಮಠ, ಸಿ.ಬಿ. ಭೋವಿ, ಎಂ.ಎಂ. ಕೆಲೂರ, ಐ.ಎ. ಜೇನುಬೇಟೆಗಾರ, ಉಮೇಶ ಮಲ್ಲಾಪುರ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಡಾ. ಬಿ.ಎಫ್. ದಂಡಿನ, ಬಿ.ಕೆ. ಮಾದಿ ಅವರನ್ನು ಸನ್ಮಾನಿಸಲಾಯಿತು.

ವಿಕಲಚೇತನರಿಗಾಗಿ ವಿವಿಧ ಆಟೋಟ ಸ್ಪರ್ಧೆ
ಗದಗ: 2013-14ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಗದಗ ಜಿಲ್ಲಾ ಮಟ್ಟದಲ್ಲಿ ಮಾ. 1ರಂದು ಆಚರಿಸಲಾಗುತ್ತಿದ್ದು, ಬೆಳಗ್ಗೆ 8ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿಕಲಚೇತನರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಭಾಗವಹಿಸಲು ಇಚ್ಛಿಸುವ ವಿಕಲಚೇತನರು ಅಗತ್ಯವಾದ ಸಾಧನ ಸಲಕರಣೆಗಳೊಂದಿಗೆ ಆಗಮಿಸಿ ಭಾಗವಹಿಸಬಹುದಾಗಿದೆ. ಆಟೋಟ ಸ್ಪರ್ಧೆಗಳಲ್ಲಿ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ವಿಕಲಚೇತನರು, ಬುದ್ಧಿಮಾಂದ್ಯ ಮಕ್ಕಳು, ಕಿವುಡ-ಮೂಗ ಮಕ್ಕಳು, ಅಂಧ ಮಕ್ಕಳು ಭಾಗವಹಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಎ.ಎನ್. ಕೋಲಕಾರ 8762333830, ವಿ. ಕುಲಕರ್ಣಿ 9449323820, ಆರ್.ಪಿ. ಚನ್ನಗೇರಿ 9743462585, ಶಶಿಕಲಾ ವಡ್ಡಟ್ಟಿ  8722670616, ಭಾರತಿ ಮೂರಶಿಳ್ಳಿ 8151042039, ಡಿ.ವೈ. ಆಲೂರ-9594829937, ಬಸಪ್ಪ ನಾಯ್ಕರ-8497823361ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಬೀಳ್ಕೊಡುಗೆ ಸಮಾರಂಭ ಉದ್ಘಾಟನೆ
ಗದಗ: ಈಚೆಗೆ ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡುಮಕ್ಕಳ ಶಾಲೆ ನಂ-3ರಲ್ಲಿ ಮಹಾಸರಸ್ವತಿ ಪೂಜೆ, 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ದೀಪದಾನ ಸಮಾರಂಭ ಹಾಗೂ ಮಕ್ಕಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಕಾರ್ಯಕ್ರಮವನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬೂದಪ್ಪ ಹುಣಸಿಮರದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಎಸ್.ಎನ್. ಬಳ್ಳಾರಿ, ಎ.ಎಂ. ಕುಂಟೋಜಿ, ಎಚ್.ಬಿ. ಚಲವಾದಿ, ಬಿ.ಬಿ. ಕುಂದಗೋಳ, ಐ.ಬಿ. ಮಡಿವಾಳರ, ಎಲ್.ಟಿ. ಮಿಸ್ಕಿನ್, ರಾಜೇಶ ಗೊಟೂರ, ನೂರಅಹ್ಮದ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಇಂದಿನ ಮಕ್ಕಳಲ್ಲಿ ಶಿಸ್ತು ಮುಖ್ಯ: ಗಣೇಶಸಿಂಗ್ಬ್ಯಾಳಿ
ಗದಗ: ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಲಾರ್ಡ್ ಬೆಡೆನ್ ಪಾವೆಲ್ ನಿಜಕ್ಕೂ ಸ್ತುತ್ಯಾರ್ಹರು ಎಂದು ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪಪೂ ಮಹಾವಿದ್ಯಾಲದ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಹೇಳಿದರು. ಶನಿವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪಪೂ ಮಹಾವಿದ್ಯಾಲದಲ್ಲಿ ಏರ್ಪಡಿಸಿದ ಲಾರ್ಡ್ ಬೆಡೆನ್ ಪಾವೆಲ್ ದಿನಾಚರಣೆ ಹಾಗೂ ಮೌಲಾನಾ ಅಬುಲ್ ಕಲಾಂ ಆಝಾದ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿ  ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ದೇಶಾಭಿಮಾನ ಬೆಳೆಸುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.  ಸಿ.ಎಂ. ಮಾರನಬಸರಿ ಮತನಾಡಿದರು. ಉಪನ್ಯಾಸಕ ಬಿ.ಬಿ. ಹೊಳಗುಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಎ.ಎ. ಹದ್ಲಿ ನಿರೂಪಿಸಿದರು. ವಿ.ಜಿ. ಕಾಂಬಳೇಕರ ವಂದಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆ ಹೋಗಲಾಡಿಸಿ
ಗಜೇಂದ್ರಗಡ: ಮಾತೃಭಾಷೆಯಲ್ಲೆ ಶಿಕ್ಷಣ ಮಾಧ್ಯಮ ಕಡ್ಡಾಯಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ಹೋಗಲಾಡಿಸಿ ಎಂದು ಎಸ್ಎಫ್ಐ ನಗರ ಸಮಿತಿ ಶುಕ್ರವಾರ ವಿಶೇಷ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.  ನೇತೃತ್ವ ವಹಿಸಿದ್ದ ಎಸ್ಎಫ್ಐ ನಗರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಜಾಡಬಂಡಿ ಮಾತನಾಡಿ, ಭಾಷಾ ಮಾಧ್ಯಮದಲ್ಲಿನ ಲೋಪ ಸರಿದೂಗಿಸುವಲ್ಲಿ ಶಿಕ್ಷಣ ಇಲಾಖೆ ಎಡವಿದ ಪ್ರಯುಕ್ತ 1994ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲಾಗಿದೆ. ಜತೆಗೆ ನ್ಯಾಯಮೂರ್ತಿ ಆರ್.ಎಂ.  ಲೋಧಾ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆಯುತಿ ಎಂದರು. ಶಿವಾಜಿ ಗಡ್ಡದ, ಲಕ್ಷ್ಮಿಕಾಂತ ಕಲಾಲ, ಪ್ರಕಾಶ ಹೆಳವರ, ಸಕ್ರಪ್ಪ ಮಾಳೋತ್ತರ, ಮಾನವ್ವ ರಾಠೋಡ, ಆನಂದ ಕುಂಬಾರ, ಹನುಮಂತ ಅರಳಿಗಿಡದ, ಕಾಲೇಶ ಸಾರಂಗಮಠ, ಶ್ರೀನಿವಾಸ ಸಾಳೆ, ರಮೇಶ ಗಾರಡೆ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು ಮನಸ್ಸು ನಿಯಂತ್ರಣದಲ್ಲಿಟ್ಟುಕೊಳ್ಳಿ
ಗದಗ: ಚಟಗಳ ಚಪಲತೆಯನ್ನು ದೂರೀಕರಿಸಿ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕ ಮಾದಕ ವ್ಯಸನಕ್ಕೆ ಅಂಟಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಗದುಗಿನ ಡಿಜಿಎಂ ಆಯುರ್ವೇದಿಕ ಮಹಾವಿದ್ಯಾಲಯದ ಡಾ. ಉಮೇಶ ಪುರದ ಅಭಿಪ್ರಾಯ ಪಟ್ಟರು. ನಗರದ ಡಾ. ಪಿಜಿಎಎಸ್ ಸಮಿತಿಯ ಪಂ. ಪಂಚಾಕ್ಷರ ಗವಾಯಿ ಸಂಗೀತ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಮಾದಕ ವ್ಯಸನದ ದುಷ್ಪರಿಣಾಮಗಳು ವಿಷಯವಾಗಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಸವರಾಜ ದಂಡಿನ ಮಾತನಾಡಿದರು. ಬಸವರಾಜ ಹಿಡ್ಕಿಮಠ ಹಾಗೂ ಜಿ.ಟಿ. ಹಿಡ್ಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಕ್ಷ್ಮೀ ಹೆಗಡೆ, ರವೀಂದ್ರ ಜಕಾತಿ, ವೆಂಕಟೇಶ ಜೋಶಿ, ಮೂಲಿಮನಿ, ಶರಣಪ್ಪ ಕಲಬುರ್ಗಿ, ಶ್ರೀಕಾಂತ ಪಾಠಕ, ಬಸವರಾಜ ಪೂಜಾರ ಮುಂತಾದವರು ಉಪಸ್ಥಿತರಿದ್ದರು.

ದೇಹದ ಸದೃಢತೆಗೆ ವ್ಯಾಯಾಮ ಅವಶ್ಯ
ಗದಗ: ಪ್ರತಿದಿನ ವ್ಯಾಯಾಮ, ಉತ್ತಮ ನಡುಗೆ ರೂಢಿಸಿಕೊಂಡರೆ ಆರೋಗ್ಯ ಸದೃಢವಾಗಿರಲು ಸಾಧ್ಯ ಎಂದು ಡಾ. ಎಸ್.ಬಿ. ಶೆಟ್ಟರ್ ಹೇಳಿದರು. ಈಚೆಗೆ ನಗರದ ರೋಟರಿ ಐ ಕೇರ್ ಸೆಂಟರ್ದಲ್ಲಿ ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಎಲುಬಿನ ಸಾಂದ್ರತೆ ಪರೀಕ್ಷೆ ಹಾಗೂ ಎಲವು ಕೀಲು ರಕ್ಷಣೆ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಮಾತನಾಡಿದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನತೆ ತಪಾಸಣೆಗೆ ಒಳಗಾಗಿ ವೈದ್ಯರ ಮಾರ್ಗದರ್ಶನ ಪಡೆದುಕೊಂಡರು. ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು. ಶ್ರೇಯಾ ಪವಾಡಶೆಟ್ಟರ್ ಪ್ರಾರ್ಥಿಸಿದರು. ಶಾಂತಾ ಮುಂದಿನಮನಿ ನಿರೂಪಿಸಿದರು.

ರಕ್ತದಾನ ಮಹಾದಾನ: ಶ್ರೀಕಾಂತಸಾ ಖಟವಟೆ
ಗದಗ:  ರಕ್ತದಾನ ಮಹಾದಾನವಾಗಿದೆ. ಮಹಾಪುರುಷ ಶಿವಾಜಿ ಮಹಾರಾಜರ ಜಯಂತಿಯ ನೆನಪಿನೊಂದಿಗೆ ರಕ್ತದಾನ ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಕರ್ನಾಟಕ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಶ್ರೀಕಾಂತಸಾ ಖಟವಟೆ ಹೇಳಿದರು. ನಗರದ ಐಎಂಐ ಬ್ಲಡ್ ಬ್ಯಾಂಕ್ನಲ್ಲಿ  ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಈಚೆಗೆ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಮರಾಠಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸುಧೀರಸಿಂಹ ಘೋರ್ಪಡೆ, ಡಾ. ರಾಜು ರೋಖಡೆ ಮಾತನಾಡಿದರು.  ಮಂಜುನಾಥ ದಾಮೋದರ, ಡಾ. ದತ್ತಾತ್ರೇಯ ವೈಕುಂಠೆ, ರಾಜು ರೋಖಡೆ, ವಿನಿತಕುಮಾರ ಜಗತಾಪ, ರೋಹಿತ ಹಬೀಬ, ನಾರಾಯಣರಾವ್ ಗಾಯಕವಾಡ, ಎಂ.ಆರ್.ಅರಳಿಕಟ್ಟಿ, ಈರಣ್ಣ ಬೆಳಮಕರ, ಷಣ್ಮುಖ ಸುಲಾಖೆ, ಅಶ್ವತ್ಥ್ ಸುಲಾಖೆ, ದೀಪಕ ಕರಣೆ, ಮುಂತಾದವರಿದ್ದರು.

ನಾಡರಕ್ಷಣೆಗಾಗಿ ಹೋರಾಟ ಅಗತ್ಯ: ಹಳ್ಳಿಕೇರಿಮಠ
ಗದಗ: ವಿಷಮ ರಾಜಕೀಯ ವ್ಯವಸ್ಥೆಯಲ್ಲಿ ಕನ್ನಡ, ಕನ್ನಡಿಗರಿಗಾಗಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಎದುರಿಸಲು ಇಂದಿನ ದಿನಮಾನದಲ್ಲಿ ಕನ್ನಡನಾಡು, ನುಡಿ ಸಂಸ್ಕೃತಿ ಉಳಿವು ಏಳ್ಗೆಗಾಗಿ ಜಾತಿ, ಮತ, ಪಂಥ ಮರೆತು ಎಲ್ಲರೂ ಹೋರಾಟ ಮಾಡುವುದು ಅವಶ್ಯವಿದೆ ಎಂದು ಕೂಗು ಸಂಘಟನೆಯ ಸಂಸ್ಥಾಪಕ ಗವಿಸಿದ್ದಯ್ಯ ಹಳ್ಳಿಕೇರಿಮಠ ಹೇಳಿದರು. ಈಚೆಗೆ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ  ಉಳವಿಯಲ್ಲಿ ಆಯೋಜಿಸಿದ್ದ ಕೂಗು 100ನೇ ದಾಖಲೆಯ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಂ.ಡಿ. ಪಾಟೀಲ, ಡಿ.ವೈ. ಭಜಂತ್ರಿ, ಆರ್.ಎಲ್. ಮುತ್ತಿನಪೆಂಡಿಮಠ ಮಾತನಾಡಿದರು. ಸಿ.ಎಸ್. ಕುರಡಗಿಮಠ, ಡಿ.ವೈ. ಸಜ್ಜನರ, ಪಾರ್ವತಮ್ಮ ವೆಂಕೋಬಾಯಿ, ಸಾವಿತ್ರೆಮ್ಮ ಪರಿಮಳ ಮುಂತಾದವರಿದ್ದರು. 100ನೇ ಕೂಗು ಕಾರ್ಯಕ್ರಮದ ಅಂಗವಾಗಿ ವಿವಿಧ ಜನಪದ ಕಲಾತಂಡಗಳಿಂದ ಜನಪದ ಕಾರ್ಯಕ್ರಮ ಜನಮನ ಸೆಳೆಯಿತು.

ಇಂದು ರೋಟರಾಕ್ಟ್ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಫೆ. 2ರಂದು ಬೆಳಗ್ಗೆ 10-30ಕ್ಕೆ ರೋಟರಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 23ನೇ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಲಿದ್ದು, ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಬಾಬಾಸಾಹೇಬ ಶಿಕ್ಷಣ ಸಮಿತಿಯ ಅಧ್ಯಕ್ಷ ಸುರೇಶ ಬೋನಗೇರಿ, ಶಾಸಕ ಬಿ.ಆರ್. ಯಾವಗಲ್, ಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯೆ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಸಂಸ್ಥೆಯ ನಿರ್ದೇಶಕ ಡಾ. ಎಸ್.ಸಿ. ಸವದತ್ತಿ, ಆರ್.ವಿ. ಬೋನಗೇರಿ, ಎಸ್.ಎ. ಲಕ್ಷ್ಮೇಶ್ವರ, ಸಿ.ಎಸ್.ನಾಗಠಾಣ, ಎಸ್.ಬಿ. ಯಳ್ಳೂರ, ರಾಜು ಕಲಾಲ, ಪಿ.ಆರ್. ಆನೇಗುಂದಿ, ಸಿ.ಎಸ್. ನಾಗಠಾಣ, ಮುಖ್ಯೋಪಾಧ್ಯಾಯ ಎಫ್.ವಿ. ಶಿರುಂದಮಠ, ಪಿ.ವಿ. ಕೆಂಚನಗೌಡ್ರ ಸೇರಿದಂತೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.