ಗದಗ

ಉತ್ಸವಕ್ಕೆ ಉತ್ತೇಜನ ನೀಡಿದ ಗ್ರಾಮೀಣ ಕ್ರೀಡೆಗಳು

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 23
ಶನಿವಾರ ಪ್ರಾರಂಭವಾಗಿರುವ ಲಕ್ಕುಂಡಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳಲ್ಲದೇ ಭಾನುವಾರ ವಿವಿಧ ರೀತಿಯ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ಸವಕ್ಕೆ ಮೆರುಗು ನೀಡಲಾಗಿತ್ತು. ರಾಜಮಹಾರಾಜರ ಕಾಲದಿಂದಲೂ ಕ್ರೀಡೆಗಳ ಮೇಲೆ ಎಲ್ಲಿಲ್ಲದ ಪ್ರೀತಿ, ಅಂದಿನಿಂದ ಇಂದಿನ ವರೆಗೂ ಜನರ ನಿತ್ಯದ ಬದುಕಿನೊಂದಿಗೆ ಹಾಸುಹೊಕ್ಕಾದ ಕ್ರೀಡೆಗಳು ಇಂದು ನಶಿಸುತ್ತಿರುವ ಸಂದರ್ಭದಲ್ಲಿ ಇಂತಹ ಉತ್ಸವಗಳಲ್ಲಿ ಆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ. ಅದರಲ್ಲಿಯೂ ವಿಶೇಷವಾಗಿ ಶನಿವಾರದಿಂದ ಆರಂಭವಾಗಿರುವ ಲಕ್ಕುಂಡಿ ಉತ್ಸವ-2014ರಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ಹಳ್ಳಿಗರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸಲಾಗಿತ್ತು.
3 ವರ್ಷಗಳ ನಂತರ ಉತ್ಸವ: 2011ರಲ್ಲಿ ಜರುಗಿದ ಲಕ್ಕುಂಡಿ ಉತ್ಸವ ಅನಿವಾರ್ಯಕಾರಣಗಳಿಂದ ಮುಂದೂಡುತ್ತಾ ಬರಲಾಗಿತ್ತು. ಈಗ 3 ವರ್ಷಗಳ ನಂತರ ಉತ್ಸವ ಹಮ್ಮಿಕೊಂಡಿರುವುದು ಜಿಲ್ಲೆಯ ಜನರಿಗೆ, ಕ್ರೀಡಾಪಟುಗಳಿಗೆ ಸಂತಸವನ್ನುಂಟು ಮಾಡಿದೆ. ಅಲ್ಲದೇ ಉತ್ಸವದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಜಿಲ್ಲೆಯಲ್ಲಿರುವ ಹಲವು ಕ್ರೀಡಾಪಟುಗಳು ಈ ಉತ್ಸವದಲ್ಲಿ ಪಾಲ್ಗೊಂಡು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ರಾಜ-ಮಹಾರಾಜರ ಕಾಲದಲ್ಲಿ ಕ್ರೀಡೆಗಳಿಗಾಗಿಯೇ ಪ್ರತ್ಯೇಕ ಸೌಕರ್ಯ ಕಲ್ಪಿಸುವ ವ್ಯವಸ್ಥೆಯಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇಲ್ಲದೇ ಅಳಿವಿನಂಚಿಗೆ ತಲುಪಿರುವುದು ವಿಷಾದಕರ. ಇಂತಹ ಸಂದರ್ಭದಲ್ಲಿ ಸರ್ಕಾರವು ಪ್ರತಿವರ್ಷ ಉತ್ಸವಗಳನ್ನು ಹಮ್ಮಿಕೊಂಡು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ. ಅದರಂತೆಯೇ ಶನಿವಾರ  ಜರುಗಿದ ಉತ್ಸವದಲ್ಲಿ ಮಲ್ಲಗಂಬ, ಕುಸ್ತಿ, ಕ್ರಾಸ್ಕಂಟ್ರಿ ಸ್ಪರ್ಧೆಗಳನ್ನು ಹಮ್ಮಿಕೊಂಡು ಗ್ರಾಮೀಣ ಕ್ರೀಡಾಪಟುಗಳಲ್ಲಿರುವ ಪ್ರತಿಭೆ ಹೊರಹಾಕಲು ಸಹಕಾರಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.