ಜನಪದ ಎಲ್ಲದಕ್ಕೂ ತಳಪಾಯ
ರೋಣ: ನವ್ಯ, ನವೋದಯ, ಆಧುನಿಕ ಸಾಹಿತ್ಯ ಸೇರಿದಂತೆ ವಿವಿಧ ಸಾಹಿತ್ಯಕ್ಕೆ ಜನಪದ ಮೂಲ ತಳಹದಿಯಾಗಿದೆ. ಜನಪದದಲ್ಲಿ ಜ್ಞಾನ ಭಂಡಾರವಿದ್ದು, ಸಾಹಿತ್ಯ ಲೋಕ ಶ್ರೀಮಂತಗೊಳ್ಳಲು ಜನಪದ ಸಹಕಾರಿ ಎಂದು ಸಮ್ಮೇಳನ ಸರ್ವಾಧ್ಯಕ್ಷ ಡಾ. ಸೋಮಶೇಖರ ಇಮ್ರಾಪುರ ಹೇಳಿದರು.
ಭಾನುವಾರ ರಾತ್ರಿ ಪಟ್ಟಣದ ರಾಜೀವ್ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಪದ ನೋಡಿ, ಮಾಡಿ, ಹಾಡಿ, ಕೇಳಿ ಕಲಿಯುವದಾಗಿದೆ. ಇದಕ್ಕೆ ಬರವಣಿಗೆಯಿಲ್ಲ. ಸಂಸ್ಕೃತಿಯ ಸಂವೇಧನವಾಗಿದೆ. ಭಾವನೆ ವ್ಯಕ್ತಪಡಿಸಲು ಅಕ್ಷರ ಸಾಲದು. ಕೇವಲ ಸಂಜ್ಞೆ, ಅಭಿನಯದ ಮೂಲಕ ಅಭಿವ್ಯಕ್ತ ಪಡಿಸಬಹುದಾಗಿದೆ ಎಂದ ಅವರು, ಪ್ರಸ್ತುತ ಸಮಾಜದಲ್ಲಿ ಜನತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಇಂದು ಜನಸಾಮಾನ್ಯರ ಬದುಕು ದುಸ್ತರವಾಗಿದ್ದು, ದಯನೀಯ ಬದುಕನ್ನು ನಾವಿಂದು ಅನುಭವಿಸುತ್ತಿದ್ದೇವೆ. ಎದುರಾದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನಾವಿಂದು ಜಾಗೃತರಾಗಬೇಕು. ಕಷ್ಟ, ಸುಖ, ಕತ್ತಲ-ಬೆಳಕಿನ ಮಧ್ಯೆ ದಿಟ್ಟತನದ ಹೋರಾಟ ನಮ್ಮದಾಗಬೇಕು ಎಂದರು.
ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆಯ ಸುಧಾರಣೆಗೆ, ಸುಸಂಸ್ಕೃತ ಸಮಾಜ ನಿರ್ಮಾಣ ಇಂದು ಅತ್ಯಗತ್ಯವಾಗಿದೆ. ವ್ಯಕ್ತಿ ನಿಷ್ಠ, ಜಾತಿ ನಿಷ್ಠವಾದ ವ್ಯವಸ್ಥೆ ಹೋಗಲಾಡಿಸಬೇಕು. ಹೊಸ ಸಮಾಜ ನಿರ್ಮಾಣವಾಗಬೇಕು. ಆ ದಿಶೆಯಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಡಾ. ಇಮ್ರಾಪುರ ಅವರ ಪತ್ನಿ ಪ್ರೊ. ಶಾಂತಾ ಇಮ್ರಾಪೂರ ಮಾತನಾಡಿ, ಪ್ರಾಚಿನ ಕಾಲದ ದೇಗುಲಗಳ ನಾಡಾದ ರೋಣ ತಾಲೂಕಿನಲ್ಲಿ ಅಸಂಖ್ಯಾತ ದೇಗುಲಗಳಿವೆ. ಅವುಗಳಿಗೆ ಸರಿಯಾದ ರಕ್ಷಣೆ ಇಲ್ಲದೆ ಕಾಲಗರ್ಭ ಸೇರುತ್ತಿವೆ. ಆದ್ದರಿಂದ ಪ್ರಾಚೀನ ಕಾಲದ ದೇಗುಲಗಳ ರಕ್ಷಣೆಯಾಗಬೇಕು. ಮುಂದಿನ ಪೀಳಿಗೆಗೆ ಐತಿಹಾಸಿಕ ಮಾಹಿತಿ, ಕುರುಹುಗಳ ಬಗ್ಗೆ ತಿಳಿಯುವಂತಾಗಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

