ಶರಣ-ಸಂತರ ವಾಣಿ ಬಂಗಾರ ತಕ್ಕಡಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 24
ಶರಣ ಸಂತರ ವಾಣಿ ಬಂಗಾರ ತೂಗೊ ತಕ್ಕಡಿ ಇದ್ದಂತೆ. ಜತೆಗೆ ದೇವರಿಗೆ ಎಲ್ಲರೂ ಸಮಾನರು. ಈ ನಿಟ್ಟಿನಲ್ಲಿ ಅಹಂ ಬಿಟ್ಟು ಸಮಾಜದಲ್ಲಿ ಭಾವೈಕ್ಯತೆಯಿಂದ ಬಾಳಿದರೆ ಭಗವಂತನ ದಯೆ ಜತೆ ಸಾಕ್ಷಾತ್ಕಾರ ಪ್ರಾಪ್ತಿಯಾಗಲಿದೆ ಎಂದು ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶಿವಾನಂದ ರಾಜಯೋಗೇಂದ್ರ ಶ್ರೀಗಳು ಹೇಳಿದರು.
ಅವರು ಸ್ಥಳೀಯ ಕಟ್ಟಿ ಬಸವೇಶ್ವರ ರಂಗಮಂದಿರದಲ್ಲಿ ಭಾನುವಾರ ಸರ್ವ ಸಮುದಾಯದ ವತಿಯಿಂದ ಹಾಲಕೆರೆ ಶ್ರೀಮಠದ ಅಭಿನವ ಅನ್ನದಾನ ಶ್ರೀಗಳಿಗೆ ಗುರುವಂದನಾ ಹಾಗೂ 99ನೇ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನದಲ್ಲಿ ಭಗವಂತನನ್ನು ಸ್ಮರಿಸಿದರೆ ಸಾಕ್ಷಾತ್ಕಾರವಾಗಲಿದೆ. ಭಗವಂತನನ್ನು ಭಕ್ತಿಯಿಂದ ಕಟ್ಟಿ ಹಾಕಬೇಕು. ಇದರಿಂದ ದೇವರ ಅನುಗ್ರಹಕ್ಕೆ ಭಕ್ತರು ಪಾತ್ರರಾಗುತ್ತಾರೆ. ಭಕ್ತರ ಇಷ್ಟಾರ್ಥ ಪೂರೈಸುವ ಭಾರತೀಯ ಸಂಸ್ಕೃತಿಗೆ ವಿಶ್ವದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ನಮ್ಮ ಸಂಸ್ಕೃತಿ ಬೆಳೆಸಿಕೊಂಡು ಹೋಗುವಲ್ಲಿ ಎಲ್ಲರ ಕರ್ತವ್ಯ ಮುಖ್ಯವಾಗಿದೆ. ಈ ದೆಸೆಯಲ್ಲಿ ಇಂದು ಶ್ರೀಗಳಿಗೆ ಸಲ್ಲಿಸಿದ ಗುರುವಂದನೆ ಭಕ್ತರ ಹೃದಯ ವೈಶಾಲ್ಯತೆಗೆ ಸಾಕ್ಷಿ ಎಂದರು.
ಗುರುವಂದನೆ ಸ್ವೀಕರಿಸಿದ ಹಾಲಕೆರೆ ಶ್ರೀಮಠದ ಅಭಿನವ ಅನ್ನದಾನ ಶ್ರೀಗಳು, ಮೈಸೂರು ಸಂಸ್ಥಾನ ಮಠ ವಿಜಯ ಮಹಾಂತ ಶ್ರೀಗಳು ಆಶೀರ್ವಚನ ನೀಡಿದರು. ಇದಕ್ಕೂ ಮುನ್ನ ಪಟ್ಟಣದ ತಿರುಪತಿ ಕಲ್ಯಾಣ ಮಂಟಪದಿಂದ ಶ್ರೀಗಳನ್ನು ಅಲಂಕಾರಗೊಂಡ ಸಾರೋಟನಲ್ಲಿ ಸಕಲ ಮಂಗಲ ವಾದ್ಯಗಳೊಂದಿಗೆ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಪತ್ತಾರ ಗಲ್ಲಿ, ಹಿರೇಬಜಾರ ಮೂಲಕ ಅದ್ಧೂರಿ ಮೆರವಣಿಗೆ ಮೂಲಕ ಸಮಾರಂಭ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು.
ಕೊಪ್ಪಳ ಗವಿಸಿದ್ಧೇಶ್ವರ ಮಠದ ಜ. ಗವಿಸಿದ್ಧ ಶ್ರೀಗಳು, ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಸಿದ್ಧಲಿಂಗ ಶ್ರೀಗಳು, ಗುಲಗಂಜಿ ಮಠದ ಗುರುಪಾದ ಶ್ರೀಗಳು, ನಿಡಗುಂದಿಕೊಪ್ಪ ಶಿವಯೋಗ ಮಂದಿರ ಶಾಖಾ ಮಠದ ಶಿವಬಸವ ಶ್ರೀಗಳು, ಹಿರೇನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಟಕ್ಕೆದ ಮಸೀದಿಯ ಹಜರತ್ ಸಯ್ಯದ ಮೆಹಬೂಬ ಅಲಿಷಾ ಪೀರಾಂ, ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ವೀರಣ್ಣ ಮತ್ತಿಕಟ್ಟಿ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಅಮರೇಗೌಡ ಭಯ್ಯಾಪುರ, ಜ್ಷಾನದೇವ ದೊಡ್ಡಮೇಟಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ವಿಶ್ವನಾಥಸಾ ಮೇಘರಾಜ, ಕಲ್ಲಪ್ಪ ಸಜ್ಜನರ, ಚಂಬಣ್ಣ ಚವಡಿ ಮುಂತಾದವರು ಇದ್ದರು. ಬಳಿಕ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

