ಉರೂಸ್ಗಳು ಭ್ರಾತೃತ್ವ ಬೆಸೆಯುವಲ್ಲಿ ಸಫಲ
ಕನ್ನಡಪ್ರಭ ವಾರ್ತೆ, ಗದಗ, ಫೆ. 24
ಹಬ್ಬ, ಹರಿದಿನ, ಜಾತ್ರೆ, ಉತ್ಸವ, ಉರೂಸ್ಗಳು ಮನಸುಗಳನ್ನು ಕೂಡಿಸಿ ಭ್ರಾತೃತ್ವ ಬೆಸೆಯುವಲ್ಲಿ ಸಫಲವಾಗಿವೆ ಎಂದು ಸೊರಟೂರ ಹಿರೇಮಠ ಫಕೀರೇಶ್ವರ ಶ್ರೀಗಳು ಹೇಳಿದರು.
ಅವರು ತಾಲೂಕಿನ ನಾಗಾವಿ ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ನಾಗಾವಿ ಹಾಗೂ ಗ್ರಾಮದ ಸಮಸ್ತ ನಾಗರಿಕರ ವತಿಯಿಂದ ಹಜರತ್ ಮೆಹಬೂಬ ಸುಬಾನಿ ಉರೂಸಿನ ಅಂಗವಾಗಿ ಶುಕ್ರವಾರ ಸಂಜೆ ಜರುಗಿದ ಧರ್ಮಸಭೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಧರ್ಮವನ್ನು ಕಾಪಾಡಿ ಧರ್ಮದಿಂದ ರಕ್ಷಣೆ ಹೊಂದಬೇಕು ಎಂದರು. ರಾಜ್ಯ ಮುಸ್ಲಿಂ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಫರೀದಅಹ್ಮದ ಸುಂಕದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಧರ್ಮ ಪಾಲನೆಯ ಜತೆಗೆ ಒಳ್ಳೆಯ ಶಿಕ್ಷಣ ಕೊಡಿಸಿ ಭವಿಷ್ಯತ್ತಿನಲ್ಲಿ ಸತ್ಪ್ರಜೆಗಳಾಗುವಂತೆ ಮಾಡಬೇಕು ಎಂದರು. ಮಂಜುನಾಥ ಅಬ್ಬಿಗೇರಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಚಿಂಚಲಿ, ಶಿವಬಸವ ಜನಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಹಾಗೂ ಸನ್ಮಾನ ಸ್ವೀಕರಿಸಿದ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕ ಎಂ.ಐ. ನವಲೂರ, ನಿಸ್ಸಾರಅಹ್ಮದ ಖಾಜಿ, ಡಾ. ಎ.ಎನ್. ಶಾಲಗಾರ, ವೆಂಕಟೇಶ ದಾಸರ ಹಾಗೂ ಹುಲ್ಲೂರ ಮಾತನಾಡಿದರು. ಗದಗ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ಬೆಳದಡಿ, ಶಂಕ್ರಪ್ಪ ಚಿಂಚಲಿ, ಎನ್.ಕೆ. ಕೊರ್ಲಹಳ್ಳಿ, ವೆಂಕಟೇಶ ದಾಸರ, ಪಿ.ಸುಬ್ರಹ್ಮಣ್ಯಂ ರಡ್ಡಿ, ಎಸ್.ಎಸ್. ರಡ್ಡೇರ, ಶಿವಕುಮಾರ ರಾಮನಕೊಪ್ಪ, ಎಚ್.ಕೆ. ಮುಲ್ಲಾ, ಕಿಶನ ಮೇರವಾಡೆ, ಎಫ್.ವಿ. ಮರಿಗೌಡ್ರ, ಎಸ್.ಕೆ. ಅಯ್ಯನಗೌಡ್ರ, ಖಟವಟೆ, ಬೆಳದಡಿ ಗ್ರಾಪಂ ಅಧ್ಯಕ್ಷ ಶಂಭುಲಿಂಗಯ್ಯ ಕಲ್ಮಠ, ಸುಜಾತಾ ಹಡಗಲಿ, ಯಲ್ಲವ್ವ ಆದಣ್ಣವರ, ಈಶಪ್ಪ ಗೋಲಪ್ಪನವರ, ಸಿದ್ದಯ್ಯ ಹಿರೇಮಠ, ಮುತ್ತಣ್ಣ ಮುಶಿಗೇರಿ, ಸುರೇಶ ಚಲವಾದಿ, ಕನಕಪ್ಪ ಬೇವಿನಮರದ, ರಮಜಾನಸಾಬ್ ನೀಲಗುಂದ, ಖಾಜಿರಸಾಬ್ ದುಂದೂರ, ಅಲ್ಲಾಸಾಬ್ ಫೀರಖಾನವರ, ಭರಮಪ್ಪ ಗುಡಿಮನಿ, ನಬಿಸಾಬ್ ಚಿಂಚಲಿ, ಆನಂದ ಟೇಲರ ಮುಂತಾದವರು ಉಪಸ್ಥಿತರಿದ್ದರು. ಯಮನೂರಸಾಬ್ ನದಾಫ್ ಸ್ವಾಗತಿಸಿದರು. ಅಲ್ಲಾಸಾಬ್ ಕುದರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

