ಗದಗ

ಜೆಟಿ ಕಾಲೇಜಿನಲ್ಲಿ 'ರೆಕೋನೊರ್ಸ್-2014'

Published On :

ಗದಗ: ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಸಿ, ಅವಕಾಶ ಕಲ್ಪಿಸಬಹುದು ಬೆಂಗಳೂರಿನ ಗ್ಲೋಬಲ್ ಸೆಂಟರ್ ಆಫ್ ಯುನೈಸೆಸ್ನ ಡಾ. ಎನ್.ಅಶೋಕಕುಮಾರ ಹೇಳಿದರು.
ಅವರು ಭಾನುವಾರ ಸ್ಥಳೀಯ ಕೆಎಲ್ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದ ಬಿಸಿಎ ವಿಭಾಗದಲ್ಲಿ ನಡೆದ ರೆಕೊನೊರ್ಸ್-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಸಾಮಾನ್ಯ ಜ್ಞಾನ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದರು. ಅಂತರ್ಜಾಲದ ಉಪಯೋಗದಲ್ಲಿ ಸೆಕ್ಯುರಿಟಿ ಬಹುಮುಖ್ಯ. ಇನ್ಫಾರ್ಮೆಷನ್ ಸೆಕ್ಯುರಿಟಿ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಶ ಸೃಷ್ಟಿಸಬಹುದು. ಜತೆಗೆ ಬಳಕೆದಾರರ ಮಾಹಿತಿಗೆ ರಕ್ಷಣೆ ಒದಗಿಸಬಹುದು. ಈ ಕ್ಷೇತ್ರದಲ್ಲಿ ಉನ್ನತ ಹುದ್ದೆಯ ಜತೆಗೆ ಉತ್ತಮ ಸಂಬಳವನ್ನೂ ಪಡೆಯಬಹುದು ಎಂದರು. ಸ್ಥಳೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ವಿ.ಕೆ. ಕುರಗೋಡ ಮಾತನಾಡಿದರು. ಪ್ರಾ. ಎಸ್.ಎಸ್. ಯಂಕಂಚಿ, ಪ್ರಾ. ಎಂ.ಎಂ. ನರಗುಂದ ಹಾಗೂ ಬಿಸಿಎ ಸಂಯೋಜಕ ಪ್ರೊ. ಎಸ್.ಎಸ್. ಗುರುಬಸನಗೌಡ್ರ, ಎಸ್.ಎಫ್. ಹಾಸಲಕೇರ  ಇದ್ದರು. ರಾಜ್ಯದ 15 ಕಾಲೇಜುಗಳಿಂದ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸ್ಮಿತಾ ಕೆ. ಪ್ರಾರ್ಥಿಸಿದರು. ಎಸ್.ಎಸ್. ಗುರುಬಸನಗೌಡ್ರ ಸ್ವಾಗತಿಸಿದರು. ಸ್ನೇಹಾ ಪಾಲನಕರ ಪರಿಚಯಿಸಿದರು. ಸನಾ ಮತ್ತು ಅಭಿಷೇಕ ನಿರೂಪಿಸಿದರು. ಶ್ರೀಲತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.