ಸಾಮಾಜಿಕ, ಧಾರ್ಮಿಕ ಸೇವೆಗೆ ಶ್ರೀಗಳ ಕಾಣಿಕೆ ಅಪಾರ: ಬಳಿಗಾರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 8
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜ. ವೀರಸೋಮೇಶ್ವರ ಶ್ರೀಗಳು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ದೂರದೃಷ್ಟಿ ಹೊಂದಿದವರಾಗಿದ್ದು, ಸದ್ದಿಲ್ಲದೆ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವುದು ಶ್ಲಾಘನೀಯ ಎಂದು ನ್ಯಾಯವಾದಿ ಎಸ್.ಪಿ. ಬಳಿಗಾರ ಅಭಿಪ್ರಾಯ ಪಟ್ಟರು.
ಸಮೀಪದ ಶಿಗ್ಲಿ ಗ್ರಾಮದ ವೀರಣ್ಣ ಪವಾಡದ ನಿವಾಸದಲ್ಲಿ ಮಂಗಳವಾರ ಜರುಗಿದ ರಂಭಾಪುರಿ ಶ್ರೀಗಳ 58ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಧಾರ್ಮಿಕ ಪರಂಪರೆ ಕಾಪಾಡುವಲ್ಲಿ ಪಂಚಪೀಠಗಳ ಕೊಡುಗೆ ಅಮೋಘ. ಅದರಲ್ಲಿ ಬಾಳೆಹೊನ್ನೂರಿನ ಸೋಮೇಶ್ವರ ಶ್ರೀಗಳ ಸಾಧನೆ ಉನ್ನತವಾಗಿದೆ. ಹಿಂದೂ ಧರ್ಮದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತ ನಾಡಿನ ಉದ್ದಗಲಕ್ಕೂ ಸಂಚರಿಸಿ ಜನರಲ್ಲಿ ಧಾರ್ಮಿಕ ಸಂದೇಶ ಹರಡುವಲ್ಲಿ ಶ್ರೀಗಳ ಕಾರ್ಯ ಮಹತ್ತರವಾಗಿದೆ ಎಂದರು.
ಜನರಲ್ಲಿ ಕೇವಲ ವೈಚಾರಿಕ ಮನೋಭಾವ ಹೆಚ್ಚಾದರೆ ಸಾಲದು ಮಾನವೀಯ ಮೌಲ್ಯವುಳ್ಳ ಗುಣಗಳು ಬೆಳೆಯಬೇಕು ಎಂಬುದು ವೀರಸೋಮೇಶ್ವರ ಶ್ರೀಗಳ ಆಶಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎನ್.ಎ. ಮುಳಗುಂದಮಠ, ರಮೇಶ ನಾಡಿಗೇರ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ವೀರಣ್ಣ ಹತ್ತಿಕಾಳ ಸೋಮೇಶ್ವರ ಶ್ರೀಗಳ ಸಾಧನೆ ಕುರಿತು ಮಾತನಾಡಿದರು.
ಸಭೆಯಲ್ಲಿ ಶಿವಣ್ಣ ಬಳಿಗಾರ, ತಾಪಂ ಮಾಜಿ ಸದಸ್ಯೆ ರಾಜರತ್ನಾ ಹುಲಗೂರ, ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ನಿಂಗಪ್ಪ ಹುನಗುಂದ, ಫಕ್ಕಿರೇಶ ಹುನಗುಂದ, ವೀರೇಶ ನೂಲ್ವಿ, ಶಂಕ್ರಣ್ಣ ಅಣ್ಣಿಗೇರಿ, ಡಾ. ವಿನೋದ ಹೊನ್ನಿಕೊಪ್ಪ, ಸಿ.ಬಿ. ಬಾಳಿಕಾಯಿ, ಎಚ್.ಎಫ್. ತಳವಾರ, ಚಂದ್ರಪ್ಪ ತವರಿ, ಸಿ.ಎಂ. ಹೊನಕೇರಿ ಮುಂತಾದವರು ಹಾಜರಿದ್ದರು. ವೀರಣ್ಣ ಪವಾಡ ಸ್ವಾಗತಿಸಿದರು. ಸೋಮಣ್ಣ ಡಾಣಗಲ್ ನಿರೂಪಿಸಿದರು. ಅನ್ನದಾನೇಶ ಪವಾಡ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

