ಗದಗ

ಗಜೇಂದ್ರಗಡ: ಪರಿಸರ ಅಧಿಕಾರಿಗಳ ಭೇಟಿ, ಪರಿಶೀಲನೆ

Published On :

ಗಜೇಂದ್ರಗಡ: ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಆದೇಶದ ಮೇರೆಗೆ ಸಮೀಪದ ಕಾಲಕಾಲೇಶ್ವರ ಗ್ರಾಮ ಎರಡೂ ಜಿನ್ನಿಂಗ್ ಫ್ಯಾಕ್ಟರಿಗೆ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ ಗಜಕೋಶ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಕಾಲಕಾಲೇಶ್ವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿಕಾಳು ಡಿಲಿಂಕ್ ಮಾಡಲು ಸಲ್ಫೂರಿಕ್ ಆಸಿಡ್ ಯಂತ್ರ ಹಾಗೂ ಜಿನ್ನಿಂಗ್ ಯಂತ್ರಗಳನ್ನು ಪರಿಶೀಲನೆ ನಡೆಸಿದರು. ಪರವಾನಗಿ ಇಲ್ಲದೇ ಫ್ಯಾಕ್ಟರಿ ನಡೆಸುತ್ತಿರುವ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದರು. ಪಕ್ಕದಲ್ಲಿ ಕೆರೆ ಸ್ವರೂಪದಲ್ಲಿ ಶೇಖರಿಸಿದ ಮೂರು ಕಡೆಯ ಇಂಗು ಗುಂಡಿಯ ಆಸಿಡ್‌ನ್ನು ಬಾಟಲಿಯಲ್ಲಿ ಮಾದರಿ ಪಡೆದರು. ಪೊಲೀಸರಿಗೆ ನಿಗಾ ವಹಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ರೈತರು ಅನುಭವಿಸಿರುವ ಯಾತನೆ ತೋಡಿಕೊಂಡರು. ಕಾಲಕಾಲೇಶ್ವರ ಗ್ರಾಮ ಬಳಿಯ ಖಾಸಗಿ ಒಡೆತನದ ಹತ್ತಿ ಮಿಲ್‌ನಲ್ಲಿ ಹತ್ತಿಬೀಜ ಡಿಲಿಂಕ್ ಮಾಡಿದ ಆ್ಯಸಿಡ್ ಬೇಕಾಬಿಟ್ಟಿ ಹರಿದು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ, ಪಿ.ವೈ. ಚಿಲಝರಿ, ಸಂಗಪ್ಪ ಹೂಗಾರ, ಎಸ್.ಎಸ್. ಜಾಧವ್, ವೀರಯ್ಯ ಹಿರೇಮಠ, ಆನಂದ ಭಾಂಡಗೆ, ಸುನೀಲ ಚಿಲಝರಿ, ಮಂಜುನಾಥ ಭಜೇಂತ್ರಿ, ಮಲ್ಲಿಕಾರ್ಜುನ ಕೆಂಪನಾಳ, ಮಂಜುನಾಥ ಮರಡಿ, ಮುತ್ತು ಕನ್ಯಾಳ ಇತರ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.