ಸುದ್ದಿ ಸಂಕ್ಷೇಪ
ನಾಳೆ ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಜ. 11ರಂದು ಬೆಳಗ್ಗೆ 10ಕ್ಕೆ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿ.ಸಿ. ಪಾಟೀಲ, ಅತಿಥಿಗಳಾಗಿ ಧಾರವಾಡದ ಡಾ. ಆರ್.ಬಿ.ಚಿಲಮಿ ಆಗಮಿಸುವರು. ಅಧ್ಯಕ್ಷತೆಯನ್ನು ಚೇರ್ಮನ್ ಬಿ.ಕೆ. ಗುಜಮಾಗಡಿ ವಹಿಸುವರೆಂದು ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ತಿಳಿಸಿದ್ದಾರೆ.
13ರಂದು ಕುಮಾರವ್ಯಾಸ ಜಯಂತಿ
ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಹಾಗೂ ಕುಮಾರವ್ಯಾಸ ಸಂಘ ಸಂಯುಕ್ತವಾಗಿ ಕುಮಾರವ್ಯಾಸ ಜಯಂತಿಯನ್ನು ಜ. 13ರ ಬೆಳಗ್ಗೆ 10.30 ಗಂಟೆಗೆ ನಗರದ ವೀರನಾರಾಯಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ವೀರನಾರಾಯಣ ದೇವಸ್ಥಾನದಲ್ಲಿ ಕುಮಾರವ್ಯಾಸ ಸ್ಥಂಭದ ಪೂಜೆ ಹಾಗೂ ವಸಂತ ಸೌದಿಯವರಿಂದ ಕುಮಾರವ್ಯಾಸ ಕವಿಯ ಮಂಗಳ ಪದ್ಯಗಳು ಮೊಳಗಲಿವೆ. ಈ ಕಾರ್ಯಕ್ರಮದ ಪೂರ್ವದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿವೃತ್ತದ ಬಳಿ ಇರುವ ಕುಮಾರವ್ಯಾಸ ಪುತ್ಥಳಿಗೆ ಮಂಜುನಾಥ ಅಬ್ಬಿಗೇರಿ ಮಾಲಾರ್ಪಣೆ ಸಲ್ಲಿಸಲಾಗುವುದು. ಸಂಜೆ 6.30 ಗಂಟೆಗೆ ನಿರ್ಮಲಾ ಪ್ರಸನ್ನ ಹಾಗೂ ಡಾ. ಎ.ವಿ. ಪ್ರಸನ್ನ ಅವರಿಂದ ಕುಮಾರವ್ಯಾಸ ಭಾರತ ಗಮಕ ವಾಚನ ಹಾಗೂ ವ್ಯಾಖ್ಯಾನ ಜರುಗಲಿದೆ ಎಂದು ಕುಮಾರವ್ಯಾಸ ಸಂಘದ ಅಧ್ಯಕ್ಷ ಎಂ.ಎಚ್.ಹರಿದಾಸ ಹಾಗೂ ಉಪಾಧ್ಯಕ್ಷ ವಸಂತ ಸೌದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾವೇಶಕ್ಕೆ ವಾಹನ ಸೌಲಭ್ಯ
ರೋಣ: ರಾಜ್ಯ ವಾಲ್ಮೀಕಿ ನಾಯಕ್ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಸಮಾರಂಭವು ಜ. 11ರಂದು ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದ್ದು, ಸಮಾವೇಶಕ್ಕೆ ಆಗಮಿಸಲಿಚ್ಛಿಸುವ ತಾಲೂಕಿನ ಸಮಾಜ ಬಾಂಧವರಿಗೆ ವಾಹನ ಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ವಾಲ್ಮೀಕಿ ಮಹರ್ಷಿ ಯುವ ಟ್ರಸ್ಟ್ ಕಮಿಟಿ ಅಧ್ಯಕ್ಷ ಕುಮಾರ ಗೌಡನ್ನವರ (9449068678) ಅವರನ್ನು ಸಂಪರ್ಕಿಸಬೇಕು ಎಂದು ಕುಮಾರ ಗೌಡನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಖಲಾತಿಗೆ ಅರ್ಜಿ ಆಹ್ವಾನ
ರೋಣ: ಶಿಕ್ಷಣ ಹಕ್ಕು ಕಾಯ್ದೆ 2009 ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ನಿಯಮ 2012ರ ಅನ್ವಯ 2014-15ನೇ ಸಾಲಿನ ರೋಣ ತಾಲೂಕಿನ ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳಲ್ಲಿ ದುರ್ಬಲ ಮಕ್ಕಳಿಗಾಗಿ ಇರುವ ಉಚಿತ ಸೀಟುಗಳಿಗೆ ದಾಖಲಾತಿಗಳಿಗಾಗಿ ಅರ್ಜಿ ಕರೆಯಲಾಗಿದೆ. ತಾಲೂಕಿನ ಪಾಲಕರು, ಪೋಷಕರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಜ.7ರಿಂದ ಫೆ. 8ರ ವರೆಗೆ ಆಯಾ ಶಾಲೆಗಳಲ್ಲಿ ಸಲ್ಲಿಸಬಹುದು ಎಂದು ರೋಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12ರಂದು ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ಲಯನ್ಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಜ. 12ರಂದು ಬೆಳಗ್ಗೆ 10ಕ್ಕೆ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿ.ಸಿ.ಪಾಟೀಲ, ಅತಿಥಿಗಳಾಗಿ ರಾಮದುರ್ಗದ ಸಿ.ಎಸ್. ಮಿಸಾಳೆ ಆಗಮಿಸುವರು. ಅಧ್ಯಕ್ಷತೆಯನ್ನು ಚೇರ್ಮನ್ ಬಿ.ಕೆ. ಗುಜಮಾಗಡಿ ವಹಿಸುವರೆಂದು ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಹಿರೇಮಠ ತಿಳಿಸಿದ್ದಾರೆ.
ಮುಕ್ತ ರಸಪ್ರಶ್ನೆ ಕಾರ್ಯಕ್ರಮ
ಶಿರಹಟ್ಟಿ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಜ. 12ರಂದು ಬೆಳಗ್ಗೆ 11ಕ್ಕೆ ಸಕ್ಸಸ್ ಟ್ಯೂಟೋರಿಯಲ್ಸ್ನಿಂದ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಮುಕ್ತ ರಸಪ್ರಶ್ನೆ, ಪ್ರತಿಭಾನ್ವೇಷಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸತತ ನಾಲ್ಕನೇ ಬಾರಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರಥಮ ಬಹುಮಾನ ರು. 5 ಸಾವಿರ, ದ್ವಿತೀಯ ರು. 2 ಸಾವಿರ, ತೃತೀಯ ರು. 1,500, ಪ್ರಿತಿಭಾನ್ವೇಷಣೆ ಸ್ಪರ್ಧೆಗೆ ಪ್ರಥಮ ರು. 3 ಸಾವಿರ, ದ್ವಿತೀಯ ರು. 2 ಸಾವಿರ, ತೃತೀಯ ರು. 1 ಸಾವಿರ ಬಹುಮಾನ ನಿಗದಿಪಡಿಸಿದ್ದು, ಆಸಕ್ತ ಸ್ಪರ್ಧಾಳುಗಳು ಸುಭಾಸ ಪಾಟೀಲ-99458-70457, ಮಂಜುನಾಥ ನಂದಿಕೋಲ-74060-43112, ಮಹೇಶ ಬಸವರಡ್ಡಿ-99869-82009, ಬಸವರಾಜ ಶಿವಲಿಂಗಣ್ಣವರ-97392-52722 ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

