ಗದಗ

ದೇವರ ಸ್ಮರಣೆಯಿಂದ ಮಾನವ ಜನ್ಮ ಪಾವನ

Published On :

ಲಕ್ಷ್ಮೇಶ್ವರ: ಭಗವಂತನ ಸ್ಮರಣೆಯಿಂದ ಮಾನವ ಜನ್ಮವು ಪಾವನವಾಗುತ್ತದೆ. ಪರಿಪೂರ್ಣ ವ್ಯಕ್ತಿಯಾಗಬೇಕಾದರೆ ಅಂತರಂಗದ ಸಂಪತ್ತಿನೊಂದಿಗೆ ಬಾಹ್ಯ ಸಂಪತ್ತು ಅವಶ್ಯವಾಗಿದೆ ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಬುಧವಾರ ಪಟ್ಟಣದ ಕೆಂಪಿಗೇರಿ ಕೆರೆಯ ಹತ್ತಿರ ನಿರ್ಮಾಣವಾಗುತ್ತಿರುವ ಅಯ್ಯಪ್ಪಸ್ವಾಮಿ ಸಮುದಾಯ ಭವನದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಮುಳಗುಂದ ಪಪಂ ಮಾಜಿ ಅಧ್ಯಕ್ಷ ಚಂದ್ರಶೇಖರಪ್ಪ ಬಡ್ನಿ ಮಾತನಾಡಿ, ಪಟ್ಟಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಯ್ಯಪ್ಪ ಸ್ವಾಮಿ ಸಮುದಾಯ ಭವನಕ್ಕೆ ತಾವುಗಳು ಯಾವುದೇ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ನಾರಾಯಣ ಪವಾರ ಅವರು ವಹಿಸಿಕೊಂಡಿದ್ದರು.
ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಮಹಾಂತಶೆಟ್ಟರ, ಗಿರೀಶ ಅಗಡಿ, ಖಂಡೆಪ್ಪ ಅಣ್ಣಿಗೇರಿ,  ಶಂಕರ ಜಾಧವ, ಶ್ರೀನಿವಾಸ ಚೌಧರಿ, ಮಂಜುನಾಥ ಉಮಚಗಿ, ವಿನೋದ ಅಳವಂಡಿ, ಲೋಕೇಶ ದೊಡ್ಡಮನಿ, ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸದಸ್ಯರಾದ ಸಂಕ್ರಮ್ಮ ಕರಡಿ, ರಾಜು ಕುಂಬಿ, ಬಸವರಾಜ ಓದಾನವರ, ಹಜರತಬೀ ಕನಕವಾಡ, ನಾಗಪ್ಪ ಓಂಕಾರಿ, ಗುರು ಮೆಡ್ಲೇರಿ, ಸತೀಶ ಮೆಕ್ಕಿ. ಅಂದಾನೆಪ್ಪ ಮಾಗಳದ ಹಾಜರಿದ್ದರು.
ಪುರಸಭೆಯ ಸದಸ್ಯ ಮಹೇಶ ಹೊಗೆಸೊಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರೂಪಿಸಿದರು. ರವಿ ಮರಲಿಂಗಣ್ಣವರ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.