ಗದಗ

ಸರ್ಕಾರಿ ಸೌಲಭ್ಯ ಎಲ್ಲರಿಗೂ ಸಿಗಲಿ: ಜಿಎಸ್ಪಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 9
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದಾಗ ಸರ್ಕಾರದ ಯೋಜನೆಗಳು ಸಾರ್ಥಕಗೊಳ್ಳುತ್ತವೆ. ಈ ನಿಟ್ಟಿನಲ್ಲಿ ರೋಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧನಾಗಿ ಶ್ರಮಿಸುವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ, ಶಾಲಾ ಕೊಠಡಿ, ಕ್ರೀಡಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಚಳಗೇರಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ  ಐ.ಎಸ್. ಪಾಟೀಲ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ತಾಪಂ ಸದಸ್ಯೆ ಕವಿತಾ ಡೊಣ್ಣೆಗುಡ್ಡ, ಮಾಜಿ ಜಿಪಂ ಅಧ್ಯಕ್ಷ ಎನ್.ಕೆ. ಬೇವಿನಮರದ, ಅಶೋಕ ಬಾಗಮಾರ, ವೀರಣ್ಣ ಸೊನ್ನದ, ವಿ.ಆರ್. ಗುಡಿಸಾಗರ, ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಇಇಒ ಎಸ್.ಎಂ. ಪಿಡಶೆಟ್ಟಿ ಭಾಗವಹಿಸಿದ್ದರು.
ಮಾಜಿ ಗ್ರಾಪಂ ಅಧ್ಯಕ್ಷ ಮುದಿಯಪ್ಪ ಕರಡಿ, ಯುಸೂಫ್ ಇಟಗಿ, ಕಳಕಪ್ಪ ಡೊಳ್ಳಿನ, ಹನುಮವ್ವ ತಳವಾರ, ಅಕ್ಕವ್ವ ಕರಬಾಶೆಟ್ಟಿ, ದ್ರಾಕ್ಷಾಯಿಣಿ ಡೊಳ್ಳಿನ, ಭೀಮನಗೌಡ ಡೊಳ್ಳಿನ, ಮುತ್ತಣ್ಣ ಕೊಪ್ಪಳ, ಕಳಕಪ್ಪ ಜೂಲಗುಡ್ಡ, ಬಸಣ್ಣ ಕರಡಿ, ಶರಣಯ್ಯ ಕುಕನೂರಮಠ, ತೋಟಯ್ಯ ಹಿರೇಮಠ, ಹನುಮಪ್ಪ ಭಜಂತ್ರಿ, ವಿ.ಎಸ್. ಕುಷ್ಟಗಿ, ದಾವಲಸಾಬ ನದಾಫ್, ಬಸಪ್ಪ ಬಡಿಗೇರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.