ಗದಗ-ವಾಡಿ ರೈಲು ಮಾರ್ಗಕ್ಕೆ ಆಗ್ರಹಿಸಿ ಸಭೆ
ಗಜೇಂದ್ರಗಡ: ಗದಗ-ವಾಡಿ ರೈಲು ಮಾರ್ಗ ಬದಲಾವಣೆ ಮಾಡಿ ಗಜೇಂದ್ರಗಡ ಭಾಗದ ಜನತೆಗೆ ಅನ್ಯಾಯ ಮಾಡಿರುವುದನ್ನು ಖಂಡಿಸಿ ಹಾಗೂ ಮೂಲ ಯೋಜನೆಯಂತೆ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಕೇಂದ್ರ ರೇಲ್ವೆ ಇಲಾಖೆ ವಿರುದ್ಧ ಬುಧವಾರ ಸಂಜೆ ಪಟ್ಟಣದ ಮೈಸೂರು ಮಠದಲ್ಲಿ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆ, ವ್ಯಾಪಾರಸ್ಥ, ಮುಖಂಡರು ಹಾಗೂ ಸಾರ್ವಜನಿಕರು ಸಭೆ ಸೇರಿ ಹೋರಾಟದ ಕುರಿತು ಚರ್ಚಿಸಿದರು.
ಗದಗ-ವಾಡಿ ರೈಲು ನರೇಗಲ್, ಗಜೇಂದ್ರಗಡ, ಇಲಕಲ್ ಮೂಲಕ ವಾಡಿ ತಲುಪುವಂತೆ ಹಳಿ ನಿರ್ಮಾಣಕ್ಕೆ ಅಂದಿನ ರೇಲ್ವೆ ಇಲಾಖೆ ಯೋಜನೆ ರೂಪಿಸಿ ನೀಲನಕ್ಷೆ ತಯಾರಿಸಿತ್ತು.
ಬದಲಾದ ವ್ಯವಸ್ಥೆಯಿಂದಾಗಿ ಗದಗ-ವಾಡಿ ರೈಲು ಮಾರ್ಗವನ್ನು ಗಜೇಂದ್ರಗಡ ಬದಲಾಗಿ ಯಲಬುರ್ಗಾ ಮೂಲಕ ಬದಲಾಯಿಸಿರುವುದು ಖಂಡನೀಯ. ಮೂಲ ಯೋಜನೆಯಂತೆ ಗಜೇಂದ್ರಗಡ ಮೂಲಕ ಹಾಯ್ದು ಹೋಗುವ ಹಾಗೆ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ಪಟ್ಟಣದಿಂದ ಕೇವಲ 9 ಕಿಮೀ ಹತ್ತಿರ ಸಂಚರಿಸುವ ರೈಲು ಮಾರ್ಗವನ್ನು ಕೊಂಚ ಬದಲಾವಣೆ ಮಾಡಿ ಗಜೇಂದ್ರಗಡ ಮೂಲಕ ಹಾದು ಹೋಗುವ ರೀತಿಯಲ್ಲಿ ಜತೆಗೆ 25 ವರ್ಷಗಳ ಹಿಂದೆ ನಡೆಸಿದ ಸರ್ವೆ ಪ್ರಕಾರ ರೈಲು ಮಾರ್ಗ ಅನುಷ್ಠಾನಗೊಂಡಲ್ಲಿ ಗಜೇಂದ್ರಗಡ ವಾಣಿಜ್ಯ ವಹಿವಾಟು ಇನ್ನಷ್ಟು ಬೆಳವಣಿಗೆಯಾಗಲಿದೆ.
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರದ ಯೋಜನೆಗಳು ಈ ಭಾಗದ ಜನತೆಗೆ ದೊರಕದೆ ಘೋರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರೇಲ್ವೆ ಯೋಜನೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ರೇಲ್ವೆ ಇಲಾಖೆ ಮುಂದಾಗದಿದ್ದಲ್ಲಿ ಗಜೇಂದ್ರಗಡ, ನರೇಗಲ್ ಹಾಗೂ ಇಲಕಲ್ ಭಾಗದ ಜನತೆ ಉಗ್ರ ಪ್ರತಿಭಟನೆಗೆ ಸಜ್ಜಾಗಲಿದ್ದಾರೆ ಎಂದು ಇಲಾಖೆಗೆ ಎಚ್ಚರಿಕೆ ನೀಡಿದರು.
ಅಶೋಕ ಬಾಗಮಾರ, ವೀರಣ್ಣ ಸೊನ್ನದ, ಶಿವರಾಜ ಘೋರ್ಪಡೆ, ಅಶೋಕ ವನ್ನಾಲ, ಸುಭಾನಸಾಬ ಆರಗಿದ್ದಿ, ರವಿ ಗಡೇದವರ, ಎಂ.ಎಸ್. ಹಡಪದ, ಬಿ.ಎಸ್. ಶೀಲವಂತರ, ಮಾರುತಿ ಚಿಟಗಿ, ಶಾರದಾ ರಾಠೋಡ, ಸುಜಾತಾ ಚುಂಚಾ, ಪ್ರಶಾಂತ ಕಲಾಲ, ಮಾರುತಿ ಮಾಳೋತ್ತರ, ಎಂ.ಬಿ. ತೋರಗಲ್, ವಹಾಬಸಾಬ ಗೊಡೇಕಾರ, ಉಮೇಶ ರಾಠೋಡ ಹಾಗೂ ನರೇಗಲ್ ಭಾಗದ ರೇಲ್ವೆ ಹೋರಾಟ ಸಮಿತಿಯ ಅಶೋಕ ಬೇವಿನಕಟ್ಟಿ, ಎ.ವಿ. ಪಾಟೀಲ, ಸಿ.ವಿ. ವಂಕಲಕುಂಟಿ, ಬಾಳಪ್ಪ ಸೋಮಗೊಂಡ, ಅಂದನಗೌಡ ಮಲ್ಲನಗೌಡ್ರ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

