ಗದಗ

ಅಕ್ಷರ ಬೀಜ ಬಿತ್ತದ ಧೀರೆ ಸಾವಿತ್ರಿಬಾಯಿ ಪುಲೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 10
ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ ವ್ಯವಸ್ಥೆಯ ವಿರುದ್ಧ ಚಿಂತಿಸಿ, ಎಲ್ಲ ಜನಾಂಗಕ್ಕೂ ಅದರಲ್ಲೂ ಶೋಷಿತ ಮಹಿಳೆಯರಿಗೆ, ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಿದ ಪ್ರಥಮ ಶಿಕ್ಷಕಿ, ಸಮಾಜ ಸುಧಾರಕಿ ಸಾವಿತ್ರಿಬಾಯಿ ಜ್ಯೋತಿರಾವ್ ಪುಲೆ ಎಂದು ಡಾ. ಅರ್ಜುನ ಗೋಳಸಂಗಿ ಅಭಿಪ್ರಾಯಪಟ್ಟರು.
ಇತ್ತೀಚಿಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಸಮಾಜಕಲ್ಯಾಣ ಇಲಾಖೆ ಗದಗ, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಜ್ಯೋತಿರಾವ್ ಪುಲೆ ಮತ್ತು ಶಿಕ್ಷಣ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿ ಸ್ವಾವಲಂಬಿಯಾಗಲು ಶಿಕ್ಷಣ ಅತಿ ಮುಖ್ಯವಾದ ಸಾಧನವಾಗಿದ್ದು, ಸಾವಿತ್ರಿ ಬಾಯಿ, ಮಹಿಳೆಯರು ಸಮಾಜದ ಮೌಢ್ಯತೆಯಿಂದ ಶೋಷಣೆಗೆ ಒಳಗಾಗುತ್ತಿರುವ ಖಂಡಿಸಿ ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುತ್ತಿದ್ದರು. ಅಲ್ಲದೆ ಅಸ್ಪೃಶ್ಯರ ಗುಡಿಸಲುಗಳಿಗೆ ಹೋಗಿ ಅಕ್ಷರ ಬೀಜ ಬಿತ್ತದ ಧೀರ ಮಹಿಳೆ ಎಂದರು.
ಗದಗ ಶಹರ ಠಾಣೆಯ ಮಹಿಳಾ ಪಿಎಸ್‌ಐ ಕೃಷ್ಣವೇಣಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಮಹಿಳೆಯರಿಗೆ ಆದರ್ಶ ಪ್ರಾಯರು. ಸ್ತ್ರೀಯರು ಶಿಕ್ಷಣ ಪಡೆಯಬಾರದೆಂಬ ಸಂಪ್ರದಾಯದ ಮಧ್ಯದಲ್ಲಿಯೇ ಅದನ್ನು ವಿರೋಧಿಸಿ 90 ಜನ ಮಹಿಳೆಯರನ್ನು ಒಂದೆಡೆ ಸೇರಿಸಿ ಶಿಕ್ಷಣವಂತರನ್ನಾಗಿ ಮಾಡಿರುವುದು ಇತಿಹಾಸ. ಎಂತಹ ಕಷ್ಟದಲ್ಲಿಯೂ ಮಹಿಳೆಯರು ದುಡ್ಡಿಲ್ಲ ಎಂದು ಶಾಲೆಯನ್ನು ಬಿಡದೆ, ಛಲದಿಂದ ವಿದ್ಯೆ ಪಡೆದು ಸ್ವಾವಲಂಬಿಯಾಗಿ ಸಮಾಜಕ್ಕೆ ಮಾದರಿಯಾಗಲು ತಿಳಿಸಿದರು. ಸಾವಿತ್ರಿಬಾಯಿ ಪುಲೆಯವರ ಸಾಮಾಜಿಕ ಕಳಕಳಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಖಾಜಾಹುಸೇನ ಮುಧೋಳ, ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಶಿಕ್ಷಣದಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಸಾವಿತ್ರಬಾಯಿ ಪುಲೆ ಅವರ ಜೀವನ ಚರಿತ್ರೆಯೇ ಸಾಕ್ಷಿ. ಒಂದು ದೀಪದಿಂದ ಸಾವಿರಾರು ದೀಪಗಳನ್ನು ಬೆಳಗಿಸುವಂತೆ ಪುಲೆಯವರ ಆದರ್ಶ, ಅವರ ನಿರಂತರ ಪ್ರಯತ್ನದ ಫಲವಾಗಿ ಅಸ್ಪ್ಯಶ್ಯರ ಬದುಕಿಗೆ ಬೆಳಕಾಗಿ ಅವರೆಲ್ಲರನ್ನು ಶಿಕ್ಷಣವಂತರನ್ನಾಗಿ ಮಾಡಲು ಪ್ರಯತ್ನಿಸಿರುವುದು ಚರಿತ್ರಾರ್ಹ ಎಂದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ. ಹೆಬ್ಬಳ್ಳಿ, ಬಸವರಾಜ ಕಡೇಮನಿ, ಸತೀಶ ಹೂಲಿ, ಪರಶುರಾಮ ಪೂಜಾರ, ವಿನಾಯಕ ಬಳ್ಳಾರಿ, ಯುವರಾಜ ಬಳ್ಳಾರಿ, ಚಂದ್ರು ಮೆಲ್ಮನಿ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಅಧ್ಯಕ್ಷ ಸಂತೋಷ ಬಳ್ಳಾರಿ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಸರಸ್ವತಿ ಗಜಾಕೋಶ ಮುಂತಾದವರು ಉಪಸ್ಥಿತರಿದ್ದರು.
ಪವಿತ್ರಾ ನಿರೂಪಿಸಿದರು. ಎಸ್.ಎಂ. ಹೆಬ್ಬಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.