ಅಮೇಜೋನ್ ಕಂಪನಿಗೆ ರು. 16 ಲಕ್ಷ ವಂಚನೆ
ಗದಗ: ಕಂಪನಿಯ ದಿನಬಳಕೆ ವಸ್ತುಗಳನ್ನು ಅಂಗಡಿಗಳಿಗೆ ಮಾರಾಟ ಮಾಡಿದ ವಿತರಕರು ಅದರಿಂದ ಬಂದಂತಹ ಹಣವನ್ನು ಸಂಬಂಧಿಸಿದ ಕಂಪನಿಗೆ ತುಂಬದೇ ಕಂಪನಿಯೊಂದಕ್ಕೆ ರು. 16.56 ಸಾವಿರ ವಂಚನೆ ಮಾಡಿರುವ ಘಟನೆ ಗದಗ ಶಹರದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಅಮೇಜೋನ್ ಪ್ರೈವೈಟ್ ಲಿಮಿಟೆಡ್ನ ವಿವಿಧ ದಿನಬಳಕೆ ವಸ್ತುಗಳ ಅಧಿಕೃತವಾಗಿ ವಿತರಕರಾಗಿದ್ದ ಶಿರಸಿಯ ಹಾಲಿವಸ್ತಿ ಗದಗನ ಜಗದೀಶ ನಾಯಕ ಎಂಬುವರು ಸೇರಿದಂತೆ ಇನ್ನೂ ಮೂವರು ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಳೆದ 2013 ಡಿಸೆಂಬರ್ 17ರಿಂದ 2014 ಜನವರಿ 7ರ ವರೆಗಿನ ಅವಧಿಯಲ್ಲಿ ಕಂಪನಿಯಿಂದ ಪಡೆದ ದಿನ ಬಳಕೆಯ ವಸ್ತುಗಳನ್ನು ಅಧಿಕೃತ ಅಂಗಡಿದಾರರಿಗೆ ನೀಡದೇ ಬೇರೆ ಅಂಗಡಿಗಳಿಗೆ ನೀಡಿದ್ದು ಹಾಗೂ ಇನ್ನೂ ಕೆಲವು ಅಂಗಡಿಗಳಿಂದ ವಸ್ತುಗಳನ್ನು ನೀಡಿ ಅವರಿಂದ ಪಡೆದ ಹಣವನ್ನು ಕಂಪನಿಗೆ ತುಂಬದೇ ತಮ್ಮ ಸ್ವಂತಕ್ಕೆ ತೆಗೆದುಕೊಂಡು ಕಂಪನಿಗೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದು ಅಮೇಜೋನ್ ಪ್ರೈವೈಟ್ ಲಿಮಿಟೆಡ್ ದೂರಿನಲ್ಲಿ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಐಪಿಸಿ 149, 409 ಕಲಂ ಮೊಕದ್ದಮೆ ಹೂಡಲಾಗಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

