ಮಹಿಳೆಯ ತ್ಯಾಗಮಯ ಬದುಕು ಆದರ್ಶ
ಗದಗ: ಮಹಿಳೆಯ ಮಮತೆ ಹಾಗೂ ತ್ಯಾಗಮಯ ಬದುಕು ಸದಾ ಆದರ್ಶಮಯವಾಗಿದ್ದು, ಮಹಿಳೆ ಸದಾ ಪೂಜ್ಯನೀಯ ಎಂದು ಗದಗ ಕೆಎಲ್ಇ ಸ್ಥಾನಿಕ ಮಂಡಳಿಯ ಚೇರ್ಮನ್ ರಜನಿ ಪಾಟೀಲ ಹೇಳಿದರು.
ಮಂಗಳವಾರ ನಗರದ ಅಕ್ಕನ ಬಳಗದಲ್ಲಿ ನಡೆದ ಸಾಂಸ್ಕೃತಿಕ ಮತ್ತು ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಒಂದಾಗಿ, ಮುಂದಾಗಿ ತಮ್ಮ ಒಗ್ಗಟ್ಟು ಹಾಗೂ ಗಟ್ಟಿತನವನ್ನು ಪ್ರದರ್ಶಿಸಬೇಕಾಗಿದೆ. ನಿತ್ಯ ಎಲ್ಲೆಡೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಹಿಳೆಯ ಇಂದಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿವೆ. ಇಂತಹ ದಿನಮಾನಗಳಲ್ಲಿ ಧೈರ್ಯದಿಂದ ಮುನ್ನಡೆಯಲು ಮಹಿಳೆ ಮುಂದಾಗಬೇಕು. ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರಿಗಾಗಿಯೇ ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಪ್ರೊ. ಕವಿತಾ ಕಾಶಪ್ಪನವರ ನಿತ್ಯ ಬದುಕಿನಲ್ಲಿ ನಡೆಯುವ ಹಾಸ್ಯ ಘಟನಾವಳಿಗಳನ್ನು ನಗೆ ಚಟಾಕೆಯ ಮೂಲಕ ಹೇಳಿ ಹಾಸ್ಯದ ವಾತಾವರಣವನ್ನುಂಟು ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ ಮಾತನಾಡಿ, ಸದೃಢ ಹಾಗೂ ಶಕ್ತಿಯುತ ಸಮಾಜದ ನಿರ್ಮಾಣಕ್ಕೆ ಮಹಿಳೆ ಮುಂದಾಗಬೇಕಿದೆ. ಆರೋಗ್ಯಯುತವಾದ ಮನಸ್ಸು ಉತ್ತಮ ವಿಚಾರಗಳು, ನಮ್ಮನ್ನು ಉನ್ನತ ಮಟ್ಟಕ್ಕೆ ಒಯ್ಯಬಲ್ಲವು ಎಂದರು.
ರತ್ನಕ್ಕ ಯಳಮಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗದುಗಿನ ಕೆಎಲ್ಇ ಮಹಿಳಾ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಚೇರ್ಮನ್ರಾಗಿ ಆಯ್ಕೆಗೊಂಡ ರಜನಿ ಪಾಟೀಲ ಅವರನ್ನು ಅಕ್ಕನ ಬಳಗದ ಪರವಾಗಿ ಸನ್ಮಾನಿಸಲಾಯಿತು. ನಂತರ ಅಕ್ಕನ ಬಳಗದ ಸದಸ್ಯೆಯರಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಸ್ತೂರಿ ಹಿರೇಗೌಡರ ಸ್ವಾಗತಿಸಿದರು. ಸುವರ್ಣಾ ವಸ್ತ್ರದ ನಿರೂಪಿಸಿದರು. ಕಾರ್ಯದರ್ಶಿ ಮೀನಾಕ್ಷಿ ಸಜ್ಜನರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

