ಶುಭವಾಗಿ-ಬಾ-ಸಂಕ್ರಾಂತಿ ರಾಷ್ಟ್ರಕ್ಕೆ ಮಾದರಿ
ಕನ್ನಡಪ್ರಭ ವಾರ್ತೆ, ಗದಗ, ಜ. 11
ಶುಭವಾಗಿ-ಬಾ-ಸಂಕ್ರಾಂತಿ ವಿನೂತನ ಮತ್ತು ರಾಷ್ಟ್ರಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಿದೆ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ರಡ್ಡಿ ಹೇಳಿದರು.
ಈಚೆಗೆ ನಗರದ ನ್ಯೂ ಎಕ್ಸ್ಲೇಂಟ್ ಸೆಂಟರ್ನಲ್ಲಿ ನಡೆದ ಸಂಕ್ರಾತಿ ಪೂರ್ವ ನಿಯೋಜಿತ ಸ್ವಾಗತ ಹಬ್ಬದ ಪ್ರಯುಕ್ತ ಹುಯಿಲಗೋಳ ನಾರಾಯಣರಾವ ಕಲಾ ಮತ್ತು ಸಂಸ್ಕೃತಿ ಗದಗ, ಸಿಜಿಬಿಎಚ್ ರಂಗಭೂಮಿ ಮಿತ್ರಮಂಡಳಿ ಹುಯಿಲಗೋಳ ರಾಜ್ಯ ಸಮಿತಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂತಹ ಸಮಾರಂಭವನ್ನು ಸಂಘ ಸಂಸ್ಥೆಯವರು ಹಮ್ಮಿಕೊಂಡರೆ ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಿನ್ನೆಲೆ, ನಡೆದು ಬಂದ ದಾರಿಯ ಅಂಶಗಳೊಂದಿಗೆ ನಾಡಿನ ಸಂಸ್ಕೃತಿ, ಸಹೋದರತೆ, ರಾಷ್ಟ್ರೀಯತೆ, ಯಾವುದೇ ಜನಾಂಗಗಳಲ್ಲಿ ಭೇದ-ಭಾವ ಇಲ್ಲದ ಪ್ರಖ್ಯಾತಿಯ ಮನೋಭಾವ ಬೆಳೆಯಲು ಈ ಕಾರ್ಯಕ್ರಮಗಳು ಬೃಹತ್ ಮೆಟ್ಟಿಲುಗಳಾಗಿವೆ ಎಂದರು.
ಎಂ.ಎಸ್. ಹುಲ್ಲೂರ ಫೌಂಡೇಶನ ಟ್ರಸ್ಟ್ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಹುಲ್ಲೂರ ಉಪನ್ಯಾಸ ನೀಡಿ, ಭೌಗೋಳಿಕ ಹಿನ್ನೆಲೆಯಲ್ಲಿ ಸಂಕ್ರಾತಿ ನಡೆದು ಬಂದ ದಾರಿ, ಅದರ ಹಿನ್ನೆಲೆ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ವಿಷಯಗಳನ್ನು ತಿಳಿಸಿದರು.
ನಿವೃತ್ತ ಸಿಇಒ ಎಂ.ಎಸ್. ಬಿಂಗಿ, ನವ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ, ಅಧ್ಯಕ್ಷತೆ ವಹಿಸಿದ್ದ ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಪಿ. ಸುಬ್ರಮಹ್ಮಣ್ಯಂ ರಡ್ಡಿ ಹಾಗೂ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಸಿ.ಜಿ.ಬಿ. ಹಿರೇಮಠ ಮಾತನಾಡಿದರು.
ಶೋಭಾ ಕೊಪ್ಪಣ್ಣವರ, ರಾಜ್ಯ ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ, ಮಂಜುನಾಥ ಹುಲಗೇರಿ, ಬಸವರಾಜ ಹಳ್ಳಿಕೇರಿ, ಪಿರೂ ನಾಯ್ಕ, ದೀಪಾ ಪಟ್ಟಣ, ಉಷಾ ಸುಂಕದ, ಅರವಿನ ಬಾನು, ಬಸವರಾಜ ಕಮತರ, ಸವಿತಾ ಪಲ್ಲೇದ, ಗಂಗಮ್ಮ ಕಮ್ಮಾರ, ಆಡಿನವರ, ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.
ಬಸವರಾಜ ಹಳ್ಳಿಕೇರಿ ಸ್ವಾಗತಿಸಿದರು. ರಂಗನಾಥ ದಾಸರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

