ಗದಗ

ಸಂಸ್ಕೃತಿಗೆ ಕರ್ನಾಟಕದ ಕೊಡುಗೆ ಅಪಾರ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 11
ಕರ್ನಾಟಕ ಮಹೋನ್ನತ ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಸಾಹಿತ್ಯ, ಕಲೆ, ಸಂಗೀತ, ನೃತ್ಯ ಮತ್ತು ವಾಸ್ತುಶಿಲ್ಪದ ಕ್ಷೇತ್ರಗಳಲ್ಲಿ ಕರ್ನಾಟಕ ದೇಶದ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಪ್ರೊ. ದತ್ತಪ್ರಸನ್ನ ಪಾಟೀಲ ಹೇಳಿದರು.
ಈಚೆಗೆ ನಗರದ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಜರಗುತ್ತಿರುವ ಎನ್ಸಿಸಿ ರಾಷ್ಟ್ರೀಯ ಐಕ್ಯತಾ ಶಿಬಿರ (ಎನ್ಐಸಿ ಕ್ಯಾಂಪ್)ದಲ್ಲಿ ಕರ್ನಾಟಕ ಸಾಂಸ್ಕೃತಿಕ ಪರಂಪರೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿದೆ. ದೇಶೀಯ ಸೊಗಡು ಹಾಗೂ ತಾತ್ವಿಕ ಚಿಂತನೆ ಕನ್ನಡ ಸಾಹಿತ್ಯದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಅದರಂತೆ ರಾಜ್ಯ ಕರ್ನಾಟಕ ಶೈಲಿಯ ಶಾಸ್ತ್ರೀಯ ಸಂಗೀತದ ತವರು ಮನೆಯಾಗಿದೆ ಹಾಗೂ ಭೀಮಸೇನ್ ಜೋಶಿ, ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳಂತಹ ಹಿಂದೂಸ್ತಾನಿ ಸಂಗೀತದ ದಿಗ್ಗಜರನ್ನು ಭಾರತೀಯ ಸಂಗೀತ ಪರಂಪರೆಗೆ ನೀಡಿದೆ.
ವಾಸ್ತುಶಿಲ್ಪ ಕ್ಷೇತ್ರದಲ್ಲಿಯೂ ಉತ್ತರದ ನಾಗರ ಹಾಗೂ ದಕ್ಷಿಣದ ದ್ರಾವಿಡ ಶೈಲಿಯ ಮಿಶ್ರಣವಾದ ವೇಸರ ಶೈಲಿಯ ಸೂಕ್ಷ್ಮ ಕಲಾ ಕೆತ್ತನೆಯ ದೇವಾಲಯಗಳನ್ನು ನೀಡಿದ ಕರ್ನಾಟಕ ಹೊಯ್ಸಳ ಶೈಲಿಯ ಸುಂದರ ಮೂರ್ತಿ ಶಿಲ್ಪಕ್ಕೆ ಹೆಸರು ವಾಸಿಯಾಗಿದೆ. ಭಾರತದ ವಿವಿಧ ಕಡೆಗಳಿಂದ ಆಗಮಿಸಿದ ಕ್ಯಾಡೆಟ್ಗಳಿಗೆ ಕರ್ನಾಟಕದ ಸಂಸ್ಕೃತಿಯನ್ನು ಅರಿತುಕೊಳ್ಳಲು ಇದೊಂದು ಸುಸಂದರ್ಭವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ ಕಮಾಂಡರ್ ಕರ್ನಲ್ ಅಶೋಕ ಇಂಗಳೆ ಮಾತನಾಡಿ, ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಕ್ಷೇತ್ರಗಳಾದ ಬದಾಮಿ, ಐಹೊಳೆ, ಪಟ್ಟದಕಲ್ಲು, ಲಕ್ಕುಂಡಿ, ಮುಂತಾದವುಗಳ ಭೇಟಿ ಪೂರ್ವದಲ್ಲಿ ಇಂತಹ ಉಪನ್ಯಾಸಗಳು ಕ್ಯಾಡೆಟ್ಗಳ ಜ್ಞಾನವಿಸ್ತಾರತೆಗೆ ಸಹಾಯಕವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.