ಸಿರಸಂಗಿ ಲಿಂಗರಾಜರ ಹೆಸರು ಅಜರಾಮರ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 11
ತ್ಯಾಗವೀರ ಸಿರಸಂಗಿ ಲಿಂಗರಾಜರು ಒಬ್ಬ ವ್ಯಕ್ತಿಯಾಗದೇ ಶಕ್ತಿಯಾಗಿದ್ದರು. ಎಲ್ಲ ಸಮುದಾಯದ ಜನರಿಗೆ ಉಪಯೋಗವಾಗಲಿ ಎಂದು ತಮ್ಮ ಸ್ವಂತ ಆಸ್ತಿಯನ್ನು ದಾನ ಮಾಡಿದ್ದಾರೆ. ಹೀಗಾಗಿ, ಸಿರಸಂಗಿ ಲಿಂಗರಾಜರ ಹೆಸರು ಸೂರ್ಯಚಂದ್ರರು ಇರುವವರೆಗೂ ಅಜರಾಮರವಾಗಿರುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶುಕ್ರವಾರ ಪಟ್ಟಣದ ಹೆಸರೂರ ರಸ್ತೆಯಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ ಸೇವಾ ಸಂಸ್ಥೆ ಮುಂಡರಗಿ-ಕೊಪ್ಪಳ, ಅಖಿಲ ಕರ್ನಾಟಕ ಕುಡುವಕ್ಕಲಿಗರ ಸಂಘ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರ 153ನೇ ಜಯಂತಿ ಮತ್ತು ಕುಡುವಕ್ಕಲಿಗರ ಸಮಾವೇಶದಲ್ಲಿ ಮಾತನಾಡಿದರು.
ಕುಡುವಕ್ಕಲಿಗರ ಸಮಾಜ ಚಿಕ್ಕದಾಗಿದ್ದರೂ ಅವರ ಮನಸ್ಸು ದೊಡ್ಡದಾಗಿದೆ. ಅಂತಹ ಸಮುದಾಯದಲ್ಲಿ ಜನಿಸಿದ ಲಿಂಗರಾಜರ ನೆನಪು ಚಿರಾಯುವಾಗಿರಲಿ ಎಂದು ಕಟ್ಟುತ್ತಿರುವ ಸಮುದಾಯ ವಸತಿ ನಿಲಯದ ಕಟ್ಟಡಕ್ಕೆ ತಮ್ಮ ಅನುದಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧನ ಸಹಾಯ ನೀಡುವುದಾಗಿ ಹೇಳಿ, ಈ ಕಟ್ಟಡ ಕಾರ್ಯ ನಿಲ್ಲದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ವೀರಶೈವ ಲಿಂಗವಂತ ಎಲ್ಲ ಒಳಪಂಗಡದವರು ಒಟ್ಟಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ. ಸಿರಸಂಗಿ ಲಿಂಗರಾಜರು ಕೇವಲ ಕುಡುವಕ್ಕಲಿಗ ಸಮಾಜಕ್ಕೆ ಮೀಸಲಾಗಿಲ್ಲ. ಅವರು ಎಲ್ಲ ಸಮಾಜದ ಜನರಿಗೂ ಆದರ್ಶಪ್ರಾಯರು. ಮುಂಡರಗಿಯಲ್ಲಿ ಕಟ್ಟುತ್ತಿರುವಂತಹ ಸಿರಸಂಗಿ ಲಿಂಗರಾಜರ ಸಮುದಾಯದ ವಸತಿ ನಿಲಯಕ್ಕೆ ವೈಯಕ್ತಿಕವಾಗಿ ರು. 2 ಲಕ್ಷ ನೀಡುವುದಾಗಿ ಹೇಳಿದರು.
ವೈ.ಎನ್. ಗೌಡರ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಡಾ. ಜಿ.ಎನ್. ಭೂಸಗೊಂಡ, ಡಾ. ಪಿ.ಬಿ. ಹಿರೇಗೌಡರ ಮಾತನಾಡಿದರು.
ಪ್ರೊ. ಎಂ.ಜಿ. ಗಚ್ಚಣ್ಣವರ ಸಂಪಾದಿಸಿದ ಕುಡುವಕ್ಕಲ ಕೈಪಿಡಿಯನ್ನು ಮಾಜಿ ಶಾಸಕ ರಾಮಣ್ಣ ಲಮಾಣಿ ಬಿಡುಗಡೆ ಮಾಡಿದರು.
ಜ. ನಾಡೋಜ ಡಾ. ಅನ್ನದಾನ ಶ್ರೀಗಳು, ಡಾ. ಸ್ವರೂಪಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಿ.ಸಿ. ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪುರಸಭೆ 23 ಸದಸ್ಯರನ್ನು ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದ ಮಹನೀಯರಿಗೆ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕರಬಸಪ್ಪ ಹಂಚಿನಾಳ, ಟಿ.ಎಂ. ಉಮಾಪತಿಗೌಡ, ಎಫ್.ವಿ. ಯಾವಗಲ್ಲ, ಈರಪ್ಪ ಬಿಸನಳ್ಳಿ, ಬಿ.ಎಸ್. ಹಿರೇಗೌಡರ, ಸಿ.ಎಂ. ಹುಲಗೂರ, ನವೀನ ಗುಳಗಣ್ಣವರ, ಆರ್.ಬಿ. ರಗಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಂ.ಜಿ. ಗಚ್ಚಣ್ಣವರ ಸ್ವಾಗತಿಸಿದರು. ಶರಣಪ್ಪ ಜಿಡ್ಡಿಮನಿ ನಿರೂಪಿಸಿದರು. ಎ. ಮಂಜುನಾಥ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

