ನಿರ್ದಿಷ್ಟ ಗುರಿ, ಕನಸಿದ್ದರೆ ಯಶಸ್ಸು
ಶಿರಹಟ್ಟಿ: ಜೀವನದಲ್ಲಿ ನಿರ್ದಿಷ್ಟ ಗುರಿ, ಕನಸು, ಕಠಿಣ ಪರಿಶ್ರಮ, ಪ್ರಾಮಾಣಿಕ ಕೆಲಸ, ನಮ್ರತೆ ಮತ್ತು ವಿನಯ ಹಾಗೂ ಚಿಂತನೆಗಳೊಂದಿಗೆ ಸತತ ಪ್ರಯತ್ನಶೀಲರಾದಾಗ ಮಾತ್ರ ಮಕ್ಕಳು ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎಸ್.ವಿ. ಸಂಕನೂರ ಹೇಳಿದರು.
ಶುಕ್ರವಾರ ಪಟ್ಟಣದ ಸಿ.ಸಿ. ನೂರಶೆಟ್ಟರ್ ವಿದ್ಯಾ ಪ್ರಸಾರ ಸಂಸ್ಥೆಯ ಫಕೀರ ಚನ್ನವೀರೇಶ್ವರ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 11ನೇ ವಾರ್ಷಿಕೋತ್ಸವ ಹಾಗೂ 10ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
10ನೇ ತರಗತಿ ಪಾಸಾದ ನಂತರ ಮಕ್ಕಳು ಆಸಕ್ತಿ ಹೊಂದಿದ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ಹೊರತು ಮಕ್ಕಳ ಕಲಿಕೆಯ ವಿಷಯದಲ್ಲಿ ಹಕ್ಕು ಚಲಾಯಿಸಬಾರದು. ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಆಗುವ ಗುರಿ ಹೊಂದಬೇಕು. ಮಕ್ಕಳು ಬರೀ ಸರಸ್ವತಿ ಪೂಜೆ ಮಾಡಿದರೆ ವಿದ್ಯೆ ಒಲಿಯುವುದಿಲ್ಲ. ಐನ್ಸ್ಟೀನ್ ಜಗತ್ತಿನಲ್ಲಿಯೇ ದೊಡ್ಡ ವಿಜ್ಞಾನಿ ಎಂದು ಹೆಸರು ಪಡೆದಿದ್ದು, ಒಮ್ಮೆಯೂ ಸರಸ್ವತಿ ಪೂಜೆ ಮಾಡಲಿಲ್ಲ. ಬಿಲ್ ಗೇಟ್ಸ್ ಜಗತ್ತಿನಲ್ಲಿಯೇ ಶ್ರೀಮಂತ ವ್ಯಕ್ತಿಯಾದರೂ ಎಂದೂ ಲಕ್ಷ್ಮೀ ಪೂಜೆ ಮಾಡಲಿಲ್ಲ. ಅವರ ಕಠಿಣ ಪರಿಶ್ರಮವೇ ಅವರ ಸಾಧನೆಯಾಗಿದೆ. ಆದ್ದರಿಂದ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡಿ ಜಾಗೃತಿ ಮೂಡಿಸಿದರೆ ಮೂಢನಂಬಿಕೆ ಮತ್ತು ಅನಿಷ್ಟಗಳು ತೊಲಗುತ್ತವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿದರು. ಸಂಸ್ಥಾನ ಮಠದ ಫಕೀರ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಆರ್.ಬಿ. ನಿಂಗನಗೌಡರ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್, ಸಿ.ವಿ. ಸಂಕದಾಳ, ಸಿ.ಪಿ. ಕಾಳಗಿ, ಡಾ. ಸುನೀಲ ಬುರಬುರೆ, ಬಿ.ಸಿ. ಮೇಟಿ, ಸಿ.ಎಸ್. ಕುಲಕರ್ಣಿ, ಜಯಶ್ರೀ ನೂರಶೆಟ್ಟರ್, ಉಮಾ ಸಿ, ಬಸವಣ್ಣೆಪ್ಪ ತುಳಿ, ಪ್ರಕಾಶ ಮಾಬಳಿ, ಬಿ.ಎಸ್. ಹಿರೇಮಠ ಮುಂತಾದವರಿದ್ದರು. ಎಂ.ಎಸ್. ಕುರಿ ಸ್ವಾಗತಿಸಿದರು. ಎಂ.ಪಿ. ಹಣಜಿ ನಿರೂಪಿಸಿದರು. ಎಂ.ಬಿ. ಮಳಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

