ಗದಗ

ಹಿಂದಿ ಭಾಷೆ ಬಳಕೆಯಿಂದ ರಾಷ್ಟ್ರೀಯ ಏಕತೆ: ರಾಠೋಡ

Published On :

ಗದಗ: ಹಿಂದಿ ಭಾಷೆ ರಾಷ್ಟ್ರೀಯ ಏಕ್ಯತಾ ಭಾವ ಬೆಳೆಸುವ ಪ್ರಮುಖ ಕೊಂಡಿಯಾಗಿದ್ದು, ಅದನ್ನು ಸರಳವಾಗಿ ಮಾತನಾಡಬಹುದು ಹಾಗೂ ಅರ್ಥೈಸಿಕೊಳ್ಳಬಹುದಾಗಿದೆ. ಹಿಂದಿ ಭಾಷೆ ರಾಷ್ಟ್ರೀಯ ಏಕತೆಗೆ ಪೂರಕವಾಗುವ ಪ್ರಮುಖ ಭಾಷೆಯಾಗಿದೆ ಎಂದು ವಿದ್ಯಾದಾನ ಸಮಿತಿ ಬಾಲಕಿಯರ ಕಾಲೇಜಿನ ಹಿಂದಿ ಉಪನ್ಯಾಸಕ ಲೆಫ್ಟಿನೆಂಟ್ ಬಿ.ಎಸ್. ರಾಠೋಡ ಹೇಳಿದರು.
ಅವರು ಶನಿವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆಯುತ್ತಿರುವ ಎನ್‌ಸಿಸಿ ರಾಷ್ಟ್ರೀಯ ಏಕತಾ ಶಿಬಿರದಲ್ಲಿ ಹಿಂದಿ ಭಾಷೆ ಮತ್ತು ರಾಷ್ಟ್ರೀಯ ಭಾವೈಕ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕ್ಯಾಡೆಟ್‌ಗಳು ಬೇರೆ ಬೇರೆ ಮಾತೃ ಭಾಷೆ ಹೊಂದಿದ್ದರೂ ಹಿಂದಿಯ ಮೂಲಕ ವಿವಿಧ ಸಂಸ್ಕೃತಿ ಅರಿತುಕೊಳ್ಳಬಹುದಾಗಿದೆ ಎಂದರು. ಅಧ್ಯಕ್ಷತೆವಹಿಸಿದ್ದ ಕ್ಯಾಂಪ್ ಕಮಾಂಡರ್ ಕರ್ನಲ್ ಅಶೋಕ ಇಂಗಳೆ ಮಾತನಾಡಿ, ಕ್ಯಾಡೆಟ್‌ಗಳು ಹಿಂದಿ ಮತ್ತು ಇಂಗ್ಲೀಷನಂತಹ ರಾಷ್ಟ್ರವ್ಯಾಪಿ ಸಂಪರ್ಕ ಸಾಧನ ಭಾಷೆಗಳ ಮೇಲೆ ಪ್ರಭುತ್ವ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. 38 ಕರ್ನಾಟಕ ಬಟಾಲಿಯನ್ ಸಿ.ಓ. ಶ್ಯಾಮರಾವ್ ಖುರಾಟೆ ಉಪಸ್ಥಿತರಿದ್ದರು. ಕರ್ನಲ್ ಸಾಯಿವಾಲೆ ಸ್ವಾಗತಿಸಿದರು. ಲೆಫ್ಟಿನೆಂಟ್ ಶ್ರೀನಿವಾಸ ಬಡಿಗೇರ ನಿರೂಪಿಸಿದರು. ಲೆಫ್ಟಿನೆಂಟ್ ವಸಂತ ಮೂಲಿಮನಿ ವಂದಿಸಿದರು. ಎನ್.ಸಿ.ಸಿ. ಅಧಿಕಾರಿಗಳು ಹಾಗೂ ದೆಹಲಿ, ಉತ್ತರಪ್ರದೇಶ, ಗುಜರಾತ್, ಪಂಜಾಬ, ರಾಜಸ್ಥಾನ, ಮಹಾರಾಷ್ಟ್ರ ಕೇರಳ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ ನೂರಾರು ಕ್ಯಾಡೆಟ್‌ಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.