ಮಹಮ್ಮದ ಪೈಗಂಬರರ ಜಯಂತಿ, ಮೆರವಣಿಗೆ
ಗಜೇಂದ್ರಗಡ: ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಹಜರತ್ ಮಹಮ್ಮದ ಪೈಗಂಬರರ ಜಯಂತಿಯನ್ನು (ಈದ್ ಮಿಲಾದುನ್ನಬಿ) ಮಂಗಳವಾರ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ ಪ್ರವಾದಿ ಮಹಮ್ಮದ ಪೈಗಂಬರರ ಭಾವಚಿತ್ರ ಮೆರವಣಿಗೆಯು ಜುಮ್ಮಾ ಮಸೀದಿಯಿಂದ ದುರ್ಗಾ ವೃತ್ತ, ಜೋಡು ರಸ್ತೆ, ಶ್ರೀ ಕಾಲಕಾಲೇಶ್ವರ ವೃತ್ತ ಹಾಗೂ ಈದ್ಗಾ ರಸ್ತೆ ಮೂಲಕ ಪ್ರವಾದಿ ಮಹ್ಮದ ಪೈಗಂಬರರ ನಾಮಸ್ಮರಣೆಗೈಯುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಜುಮ್ಮಾ ಮಸೀದಿಯಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮೌಲಾನಾ ಮಹಮ್ಮದ ಜಮಾ, ಮಾತನಾಡಿ, ಮಾನವನ ದೈನಂದಿನ ಜೀವನದ ಶಿಷ್ಟಾಚಾರಗಳಲ್ಲಿ ವ್ಯತ್ಯಾಸ ಕಂಡಾಗ ಸೃಷ್ಟಿಕರ್ತನು ಸೂಫಿ ಶರಣ ಸಂತರಂತಹ ಮಹಾತ್ಮರನ್ನು ಸೃಷ್ಟಿಸಿ ಮಾನವನ ಸಕಲ ಭೌತಿಕ ಪರಿಶುದ್ಧತೆಯ ಅಗತ್ಯಗಳನ್ನು ಪೂರೈಸುತ್ತಾನೆಂಬುದು ನಂಬಿಕೆ. ಅಂತಹ ಮಹಾನ್ ಪ್ರವಾದಿ ಶರಣರ ಆದರ್ಶಗಳನ್ನು ಪಾಲನೆ ಮಾಡಿದಾಗ ಆಚರಣೆ ಸಾರ್ಥಕ ಎಂದರು. ಮೌಲಾನಾ ಖಲೀಲ ಖಾಜಿ, ರಫೀಕ್ ಮೌಲಾನಾ, ಮೌಲಾನಾ ತಲಹಾ ನೂರಿ, ಸಾನ್ನಿಧ್ಯವಹಿಸಿ ಆಶೀರ್ವದಿಸಿದರು. ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಎಂ.ಎಚ್. ಕೋಲಕಾರ, ಇಸ್ಮಾಯಿಲ್ಸಾಬ ಗೊಲಗೇರಿ, ಎಂ. ಕೆ. ಹಿರೇಹಾಳ, ಡಿ.ಬಿ. ವಣಗೇರಿ, ಸುಭಾನಸಾಬ ಆರಗಿದ್ದಿ, ಹಸನ ತಟಗಾರ, ದಾದು ಹಣಗಿ, ಎ.ಜಿ. ತಾಳಿಕೋಟಿ, ಫಯಾಜ್ ತೋಟದ, ಇಸ್ಮಾಯಿಲ್ಸಾಬ ನಾಲಬಂದ, ಎಂ.ಎಸ್. ಮಕಾನದಾರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

