ಸಿದ್ಧರಾಮೇಶ್ವರರ ಆದರ್ಶ ಸಾರ್ವಕಾಲಿಕ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 14
ಕಾಯಕದೊಂದಿಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಜಾಗ್ರತಗೊಳಿಸುವ ಮೂಲಕ ವಿಶ್ವಮಾನ್ಯರಾದ ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರಂತಹ ಮಹಾತ್ಮರ ಆದರ್ಶಗಳು ಸಾರ್ವಕಾಲಿಕ ಎಂದು ವಿಜಯ ಮಹಾಂತ ಸ್ವಾಮಿಗಳು ಹೇಳಿದರು.
ಸ್ಥಳೀಯ ಹಿರೇ ದುರ್ಗಾದೇವಿ ದೇಗುಲ ಆವರಣದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ರಾತ್ರಿ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 841ನೇ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ನ್ಯೂನತೆ ತಿದ್ದಿದ ಶಿವಯೋಗಿ ಸಿದ್ಧರಾಮೇಶ್ವರರಂತಹ ಶರಣರು, ಸಂತರು, ದಾರ್ಶನಿಕರ ವಿಚಾರಧಾರೆಗಳು ಯಾವುದೆ ಜಾತಿಗೆ ಸೀಮಿತವಾಗದೆ ಇಡಿ ಮನುಕುಲದ, ಉದ್ಧಾರಕ್ಕೆ ದಾರಿದೀಪವಾಗಿವೆ ಎಂದರು.
ಮಾಜಿ ಸಂಸದ ಆರ್.ಎಸ್. ಪಾಟೀಲ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯ ಕಲ್ಪನೆಯ ಕನಸು ನನಸು ಮಾಡಲು ಎಲ್ಲರೂ ಮುಂದಾಗಬೇಕು. ಕಾಂಗ್ರೆಸ್ ಸರ್ಕಾರ ದಲಿತ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸಿದೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಶೋಕ ವನ್ನಾಲ ಮಧ್ಯ ಪ್ರವೇಶಿಸಿ, ಇಲ್ಲಿ ರಾಜಕೀಯ ಮಾತು ಬೇಡ ಎಂದು ಆಕ್ಷೇಪಿಸಿದರು. ಕೆಲ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಎಫ್.ಎಸ್. ಕರಿದುರಗನವರ ವಿಶೇಷ ಉಪನ್ಯಾಸ ನೀಡಿದರು. ಅಶೋಕ ಬಾಗಮಾರ, ವೀರಣ್ಣಾ ಸೊನ್ನದ, ಪುರಸಭೆ ಮಾಜಿ ಅಧ್ಯಕ್ಷ ಡಿ.ಎಚ್. ಬಳೂಟಗಿ, ಈಶಪ್ಪ ಹಿರೇಮನಿ ಮಾತನಾಡಿದರು. ರೋಣ ತಹಸೀಲ್ದಾರ್ ಎ.ಜಿ ಪಂಡಿತ್, ಪುರಸಭೆ ಉಪಾಧ್ಯಕ್ಷ ಅಕ್ಕಮ್ಮಾ ಜಾನಾಯಿ, ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಸದಸ್ಯರಾದ ಚಂದ್ರಶೇಖರ ಚಳಗೇರಿ, ವಿಜಯ ರಾಯಬಾಗಿ, ಮಕ್ತುಂಭಿ ಹಣಗಿ, ಸುಜಾತಾ ಚುಂಚಾ, ಶಾರದಾ ರಾಠೋಡ, ಶಾರವ್ವ ತಳವಾರ, ವಿಜಯಲಕ್ಷ್ಮೀ ಚೆಟ್ಟೇರ್, ಸುಮಿತ್ರಾ ತೊಂಡಿಹಾಳ, ಮುದಿಯಪ್ಪ ಮುಧೋಳ, ಮೂಕಪ್ಪ ನಿಡಗುಂದಿ, ಮಾರುತೆಪ್ಪ ಕಲ್ಲೋಡ್ಡರ, ಶರಣಪ್ಪ ಚಳಗೇರಿ, ಬಳಿಕ ಚೈತ್ರಾ ಮೆಲೋಡಿಸ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

