ಸುದ್ದಿ ಸಂಕ್ಷೇಪ
17ರಿಂದ ವಿಶೇಷ ಶಿಬಿರ
ನರೇಗಲ್ಲ: ಸ್ಥಳೀಯ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಡಿಯಲ್ಲಿ ದತ್ತುಗ್ರಾಮ ಕೊಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 17ರಿಂದ 23ರ ವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಿಶೇಷ ಶಿಬಿರ ಆಯೋಜಿಸಿದ್ದು, ಜ. 17ರಂದು ಸಂಜೆ 4.30 ಗಂಟೆಗೆ ಜರುಗುವ ಶಿಬಿರದ ಉದ್ಘಾಟನೆಯನ್ನು ರೋಣ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ನೆರವೇರಿಸುವರು. ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಬಿ.ಜಿ. ಹಾಜೇಗೋಳ, ಭೂದಾನಿ ಹನಮಂತಪ್ಪ ಕಳಕೊಣ್ಣವರ, ರಮೇಶ ಕಳಕೊಣ್ಣವರ, ಪಪಂ ಮಾಜಿ ಅಧ್ಯಕ್ಷ ಅಂದಾನಗೌಡ ಪಾಟೀಲ, ಬಸನಗೌಡ ಪಾಟೀಲ, ಬಸಪ್ಪ ನಾಶಿಪುಡಿ, ಜಿ.ಎಸ್. ಉದ್ದಣ್ಣವರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಎಸ್. ಹುಯಿಲಗೋಳ, ವಿ.ಎ. ಕಾತರಕಿ, ಪ್ರಾಚಾರ್ಯ ಹನುಮಗೌಡ ಸಿ, ಕರವೇ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ ಉಪಸ್ಥಿತರಿರುವರು ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಕೆ.ಎಚ್. ಅಂಜನಮೂರ್ತಿ ಹಾಗೂ ಪ್ರಾಚಾರ್ಯ ಹನುಮಗೌಡ ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸನ್ನರ ಪಾದಯಾತ್ರೆಗೆ ಬೆಂಬಲ
ಗಜೇಂದ್ರಗಡ: ವಿನಾಶದ ಅಂಚಿಗೆ ತಲುಪಿರುವ ಕೈಮಗ್ಗ ನೇಕಾರಿಕೆ ರಕ್ಷಣೆಗಾಗಿ ಹೆಗ್ಗೂಡಿನ ಹಿರಿಯ ರಂಗ ನಿರ್ದೇಶಕ ಪ್ರಸನ್ನ ಅವರು ಜ. 15ರಿಂದ ಪ್ರಾರಂಭಿಸುವ 250 ಕಿಮೀ ವ್ಯಾಪ್ತಿಯ ಬನಶಂಕರಿ ಪಾದಯಾತ್ರೆ ಸತ್ಯಾಗ್ರಹಕ್ಕೆ ರಾಜ್ಯದ ನೇಕಾರರು, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು, ಕಲಾವಿದರ ಜತೆ ಚಲನಚಿತ್ರ ನಟ ಪ್ರಕಾಶ ರೈ ಸಾಥ್ ನೀಡಲಿದ್ದಾರೆ ಎಂದು ಪ್ರೊ. ಬಿ.ಎ. ಕೆಂಚರೆಡ್ಡಿ ಹೇಳಿದರು. ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗಜೇಂದ್ರಗಡದಿಂದ ಪ್ರಾರಂಭಿಸಿ ಬಾದಾಮಿ ತಾಲೂಕು ಬನಶಂಕರಿಗೆ ತೆರಳುವ ಪಾದಯಾತ್ರೆ ಜ. 27ರಂದು ಬನಶಂಕರಿ ತಲುಪಲಿದೆ. ಸಾಹಿತಿ ಯು.ಆರ್. ಅನಂತಮೂರ್ತಿ, ದೇವನೂರ ಮಹದೇವ, ಸ್ವಾತಂತ್ರ್ಯಯೋಧ ಎಚ್.ಎಸ್. ದೊರೆಸ್ವಾಮಿ, ರೆಹಮತ್ ತರಿಕೇರಿ, ವಿಠಪ್ಪ ಗೊರಂಟ್ಲಿ, ಜನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ, ಕೊತಬಾಳ ಅರುಣೋದಯ ತಂಡ ಶಂಕ್ರಣ್ಣ ಸಂಕಣ್ಣವರ ಈ ಸಂದರ್ಭದಲ್ಲಿ ಪಾಲ್ಗೊಳ್ಳುವರು. ಜ. 15ರಂದು ಗಜೇಂದ್ರಗಡದಿಂದ ಪ್ರಾರಂಭವಾಗುವ ಪಾದಯಾತ್ರೆಯು ಕುಂಟೋಜಿ, 16ರಂದು ಕುಷ್ಟಗಿ ತಾಲೂಕು ಹನುಮಸಾಗರ, 17ರಂದು ಕಬ್ಬರಗಿ, 18ರಂದು ಬಾದಾಮಿ ತಾಲೂಕು ಗುಡೂರು, 19ರಂದು ಸೂಳೆಭಾವಿ, ಅಮೀನಗಡ, 20ರಂದು ಕಮತಗಿ, 21ರಂದು ಗುಳೇದಗುಡ್ಡ, 22- ಶಿರೂರು, 23ರಂದು ಮಲ್ಲಾಪುರ, 24ರಂದು ಕಟಗೇರಿ, ಕಂಕಣಕೊಪ್ಪ, 25ರಂದು ಕೆರೂರ, 26ರಂದು ಹಲಕುರ್ಕಿ, 27ರಂದು ಬನಶಂಕರಿ ತಲುಪಲಿದೆ.
ಈದ್ ಮೆರವಣಿಗೆಗೆ ಚಾಲನೆ
ಮುಂಡರಗಿ: ಈದ್ ಮಿಲಾದ್ ಅಂಗವಾಗಿ ಇಲ್ಲಿನ ಮುಸ್ಲಿಮರು ಹಮ್ಮಿಕೊಂಡಿದ್ದ ಮೆರವಣಿಗೆಗೆ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸಮಾಜದ ದುರ್ಬಲ, ನಿರ್ಗತಿಕರಿಗೆ ಮಹಮ್ಮದ ಪೈಗಂಬರರು ಆತ್ಮಾಭಿಮಾನ ತುಂಬಿದವರು. ಅವರ ತತ್ವಾದರ್ಶ ಅಳವಡಿಸಿಕೊಂಡು ಶಾಂತಿ, ಸಹಬಾಳ್ವೆ ನಡೆಸಬೇಕು ಎಂದರು. ಹೇಮಂತಗೌಡ ಪಾಟೀಲ, ಡಿ.ಡಿ. ಮೋರನಾಳ, ಧ್ರುವಕುಮಾರ ಹೊಸಮನಿ, ಎಸ್.ಡಿ. ಮಕಾಂದಾರ, ರಾಮು ಕಲಾಲ್, ರಾಮಣ್ಣ ಬಳ್ಳಾರಿ, ಸೊಲಬಣ್ಣ ಜೋಬಾಳಿ, ಎ.ಪಿ. ದಂಡಿನ, ಅಬ್ದುಲ್ ಖುರೇಶಿ, ನಬೀಸಾಬ ಕೆಲೂರ, ಎಂ.ಎಚ್. ತಳಗಡೆ, ಅಕ್ಬರಸಾಬ್ ಹುಯಿಲಗೋಳ, ಎಚ್.ಐ. ಮುಲ್ಲಾ, ಮಾಬೂಸಾಬ ಎಲಿಗಾರ, ಕರೀಂಸಾಬ ಮುಲ್ಲಾ, ಕಬಲಾಸಾಬ ಕೊಪ್ಪಳ, ಶಿರಾಜ ಡಂಬಳ, ಶಾನು ಮುಲ್ಲಾ, ಎಂ.ಕೆ. ಶೇಖ, ರಾಜಾಭಕ್ಷಿ ಸೈದರ, ಎಂ.ಕೆ. ತಳಗಡೆ, ಫಕ್ರುದ್ದೀನ್ ಹಾರೋಗೇರಿ, ಅಲ್ಲಾಭಕ್ಷಿ ಅಳವಂಡಿ, ಅಲ್ಲಾಭಕ್ಷಿ ಬೆಟಗೇರಿ, ಸುರೇಶ ಮಾಗಡಿ, ಅಲ್ಲಾಭಕ್ಷಿ ಬನ್ನಿಗೋಳ, ಟಿಪ್ಪುಸುಲ್ತಾನ್ ಕಮಿಟಿ, ನೌಜವಾನ್ ಕಮಿಟಿ ಮತ್ತು ಅನೇಕ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರತಿ ಮಗುವಿಗೂ ಉನ್ನತ ಶಿಕ್ಷಣ ಸರ್ಕಾರದ ಗುರಿ
ನರೇಗಲ್ಲ: ರಾಜ್ಯದಲ್ಲಿರುವ ಪ್ರತಿ ಮಗುವಿಗೂ ಉನ್ನತ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ಸ್ಥಳೀಯ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನೂತನ ಹೆಚ್ಚುವರಿ ಕೊಠಡಿ ಹಾಗೂ ಪ್ರಯೋಗಾಲಯ ಕಟ್ಟಡಗಳ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಚಾರ್ಯ ಹನುಮಗೌಡ ಸಿ. ಹಾಗೂ ಸ್ಥಳೀಯ ಮುಖಂಡ ಅಂದಾನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ.ಪಂ. ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ, ಉಪಾಧ್ಯಕ್ಷೆ ಅನ್ನಪೂರ್ಣಾ ಗಿಂಡಿ, ಭೂದಾನಿ ಹನುಮಂತಪ್ಪ ಕಳಕೊಣ್ಣವರ, ರಮೇಶ ಕಳಕೊಣ್ಣವರ, ಸದಸ್ಯರು, ವಿ.ಆರ್. ಗುಡಿಸಾಗರ, ಐ.ಆರ್. ಲಗಳೂರ, ಕೆ.ಎನ್. ಕಟ್ಟಿಮನಿ, ವಿ.ಕೆ. ಸಂಗನಾಳ, ಬಾಲಕೃಷ್ಣ ಉಪಾಧ್ಯ, ಬಿ.ಎಸ್. ಪರಣ್ಣವರ, ಎಸ್.ಬಿ. ಚನ್ನಪ್ಪನವರ, ಸಿ.ವಿ. ವಂಕಲಕುಂಟಿ, ಲತಾ ಕಿಲ್ಲೇದಾರ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಲಗಳೂರ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

