ನೇಕಾರಿಕೆ ಉಳಿಸಿ: ಬನಶಂಕರಿವರೆಗೆ ಪಾದಯಾತ್ರೆಗೆ ಚಾಲನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 15
ಕೈಮಗ್ಗ ನೇಕಾರಿಕೆ ಉದ್ಯಮ ಉಳಿಸಿ, ಬೆಳೆಸುವ ಉದ್ದೇಶದಿಂದ ಕೈಗೊಂಡಿರುವ ಬನಶಂಕರಿ ಸತ್ಯಾಗ್ರಹ ಪಾದಯಾತ್ರೆಗೆ ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕ ಪ್ರಸನ್ನ ಅವರು ಬುಧವಾರ ಸಂಜೆ ಚಾಲನೆ ನೀಡಿದರು.
ಪಟ್ಟಣದ ಗವಿಮಠದಲ್ಲಿ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ವೈಭವಯುತವಾಗಿದ್ದ ಹತ್ತಿ ನೇಕಾರಿಕೆ, ಕಂಬಳಿ ನೇಕಾರಿಕೆ, ರೇಷ್ಮೆ ನೇಕಾರಿಕೆ, ಉದ್ಯಮಗಳು ಆಧುನಿಕ ಭರಾಟೆಗೆ ಸಿಲುಕಿ ಇತಿಹಾಸ ಪುಟ ಸೇರುತ್ತಿವೆ. ಜತೆಗೆ ಈ ಕಸುಬನ್ನು ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳ ಸ್ಥಿತಿ ದುಸ್ತರವಾಗಿದೆ. ಪರಂಪರಾಗತವಾಗಿ ಉಳಿಸಿಕೊಂಡು ಬಂದ ಕೈಮಗ್ಗ ನೇಕಾರಿಕೆ ಉಳಿಸಿ, ದೇಶಿ ಉದ್ಯಮ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ದಿಟ್ಟ ಕ್ರಮಕ್ಕೆ ಸಮಾಜದ ವಿವಿಧ ಕ್ಷೇತ್ರದ ಜನರು, ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ. ಜ. 15ರಿಂದ ಗಜೇಂದ್ರಗಡದಿಂದ ಕುಂಟೋಜಿ ಮಾರ್ಗವಾಗಿ ತೆರಳುವ ಬನಶಂಕರಿ ಪಾದಯಾತ್ರೆ ಜ. 16ರಂದು ಕುಷ್ಟಗಿ ತಾಲೂಕು ಹನುಮಸಾಗರ, 17ರಂದು ಕಬ್ಬರಗಿ, 18ರಂದು ಬದಾಮಿ ತಾಲೂಕು ಗುಡೂರು, 19ರಂದು ಸೂಳೆಭಾವಿ, ಅಮಿನಗಡ, 20ರಂದು ಕಮತಗಿ, 21ರಂದು ಗುಳೇದಗುಡ್ಡ, 22 ಶಿರೂರು, 23ರಂದು ಮಲ್ಲಾಪುರ, 24ರಂದು ಕಟಗೇರಿ, ಕಂಕಣಕೊಪ್ಪ, 25ರಂದು ಕೆರೂರ, 26ರಂದು ಹಲಕುರ್ಕಿ, 27ರಂದು ಬನಶಂಕರಿಯಲ್ಲಿ ಸಮಾರೋಪಗೊಳ್ಳಲಿದೆ ಎಂದರು.
ಮುಖ್ಯಮಂತ್ರಿ ಚಂದ್ರು ಬೆಂಬಲ: ಹಿರಿಯ ರಂಗಕರ್ಮಿ ಪ್ರಸನ್ನ ನೇತೃತ್ವದ ಅಖಿಲ ಭಾರತ ಕೈಮಗ್ಗ ನೇಕಾರಿಕೆ ಸತ್ಯಾಗ್ರಹ ಪಾದಯಾತ್ರೆಯ ಸ್ಥಳಕ್ಕೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ದೇಶದ ಪರಂಪರಾಗತ ಕೈಮಗ್ಗ ನೇಕಾರಿಕೆ ದೇಶಿಯ ಉಧ್ಯಮದಲ್ಲಿ ಅಗ್ರ ಸ್ಥಾನ ಪಡೆದಿದೆ. ಇಂತಹ ಉದ್ಯಮವನ್ನು ಉಳಿಸಿ ಬೆಳೆಸುವುದು ಸರ್ಕಾರದ ಜತೆಗೆ ಸಮುದಾಯದ ಕರ್ತವ್ಯವಾಗಿದೆ ಎಂದರು. ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು.
ಪಕ್ಷಾತೀತ ಬೆಂಬಲ: ಪಾದಯಾತ್ರೆಗೆ ಮಾಜಿ ಸಚಿವ ಕಳಕಪ್ಪ ಬಂಡಿ, ರಂಗಕರ್ಮಿ, ಕಿರುತೆರೆ ಕಲಾವಿದ ಶಿವಮೂರ್ತಿ, ಬಂಡಾಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಸೂಳಿಭಾವಿ, ಐ.ಜಿ. ಮ್ಯಾಗೇರಿ, ವೀರಣ್ಣ ಸೊನ್ನದ, ಪುರಸಭೆ ಸದಸ್ಯ ಎಂ.ಎಸ್. ಹಡಪದ, ಕೂಡ್ಲೇಪ್ಪ ಗುಡಿಮನಿ, ತಿಮ್ಮಣ್ಣ ವನ್ನಾಲ, ಬಿ.ಎ. ಕೆಂಚರೆಡ್ಡಿ, ವಿಶ್ವನಾಥ ಕೆಂಚಿ, ಪಾಂಡುರಂಗ ಶಿಲವೇರಿ, ಬಾಬಣ್ಣ ರಾಯಬಾಗಿ ಬೆಂಬಲ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

